You are here
Home > Koppal News > ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಕೊಪ್ಪಳಕ್ಕೆ

ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಕೊಪ್ಪಳಕ್ಕೆ

ಕೊಪ್ಪಳ, ೨೩ : ಮಾಜಿ ಉಪಪ್ರಧಾನಿ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಮುಖ ಎಲ್.ಕೆ. ಆಡ್ವಾಣಿ ದಿ.೨೪.೦೪.೧೩ ರಂದು ಕೊಪ್ಪಳಕ್ಕೆ ಬರಲಿದ್ದಾರೆ. ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಇವರ ಪ್ರಚಾರಾರ್ಥ ಸಾರ್ವಜನಿಕ ಮೈದಾನದಲ್ಲಿ ಮಧ್ಯಾಹ್ನ ೩ ಗಂಟೆಗೆ ನಡೆಯುವ ಬೃಹತ್ ಸಮಾವೇಶದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುವರು.
 ಈ ಸಂದರ್ಭದಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಮತ್ತು ರಾಜ್ಯ ನಾಯಕರಲ್ಲದೇ, ಕೊಪ್ಪಳ ಜಿಲ್ಲಾ ಬಿ.ಜೆ.ಪಿ.ಯ ಎಲ್ಲ ನಾಯಕರು, ಪದಾಧಿಕಾರಿಗಳು, ಉಪಸ್ಥಿತರಿರುವರು ಎಂದು ಪಕ್ಷದ ವಕ್ತಾರ ಹಾಲೇಶ ಕಂದಾರಿ  ತಿಳಿಸಿದ್ದಾರೆ.

Leave a Reply

Top