ಡಿ.ಕೆ.ಶಿ. ಗುಂಡಾಗಿರಿ : ಖಂಡನೆ : ಸಿ.ಪಿ.ಐ.ಎಂ.ಎಲ್.

 ಭ್ರಷ್ಠಾಚಾರ ಪತ್ತೆಗಾಗಿ ಸ್ಪ್ರಿಂಗ್ ಆಪರೇಷನ್ ಮಾಡಲು ಹೋದ ಟಿ.ವಿ.೯ ವರದಿಗಾರರ ಮೇಲೆ ಡಿ.ಕೆ.ಶಿವಕುಮಾರ ಮತ್ತು ಅವರ ಗುಂಡಾಪಡೆ ದೈಹಿಕ ಹಲ್ಲೆ ಮಾಡಿ ಮಂತ್ರಿಗಿರಿಯ ಪ್ರಭಾವದಿಂದ ಅವರನ್ನು ಜೈಲಿಗಟ್ಟಿರುವುದು ಖಂಡನೀಯವೆಂದು ಸಿ.ಪಿ.ಐ.ಎಂ.ಎಲ್. ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸನಗೌಡ ಸುಳೆಕಲ್  ತಿಳಿಸಿದ್ದಾರೆ.
ಭ್ರಷ್ಠಾಚಾರ ಮತ್ತೀತರ ಹಗರಣಗಳ ಬಗ್ಗೆ ತನಿಖಾವರದಿ ಮಾಡಲು ಮುಂದಾದ ಪತ್ರಕರ್ತರ ಮೇಲೆ ಹಲ್ಲೆ ಆಗುವುದು ಸರ್ವೆ ಸಾಮಾನ್ಯ ಆದರೆ ಅದಕ್ಕೆ ಭಿನ್ನವಾಗಿ ಡಿ.ಕೆ.ಶಿವಕುಮಾರ ಪತ್ರಕರ್ತರನ್ನೇ ಟ್ರ್ಯಾಪ್ ಮಾಡಲು ಸಂಚು ಹೂಡಿ ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಮತ್ತು ಸರ್ಕಾರದ ಬೆಂಬಲದಿಂದ ಪತ್ರಕರ್ತರನ್ನು ಜೈಲಿಗೆ ಕಳುಹಿಸಿರುವುದು ಹೇಯಕೃತ್ಯವಾಗಿದೆ ಎಂದಿದ್ದಾರೆ.
ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷ ಇಂತಹ ದೌರ್ಜನ್ಯಗಳ ವಿರುದ್ಧ ನಿಂತು ಹಲ್ಲೆಗೊಳಗಾದವರ ಪರ ನಿಂತು ಡಿ.ಕೆ.ಶಿ.ಯಂತಹ ಗುಂಡಾ ಹಾಗೂ ಗಣಿ ಮಾಫೀಯಾಗಳ ವಿರುದ್ಧ  ಹೋರಾಟ ಮಾಡುತ್ತದೆ ಎಂದಿದ್ದಾರೆ. ಪತ್ರಕರ್ತರು ಭ್ರಷ್ಠಾಚಾರ ಬಯಲಿಗೆಳೆದು ಧೈರ್ಯದಿಂದ ಮುನ್ನುಗ್ಗಬೇಕು. ಡಿ.ಕೆ.ಶಿವಕುಮಾರ ವಿರುದ್ಧ ಪ್ರಕರಣ ದಾಖಲಿಸಿ ಜನಪರ ಸರ್ಕಾರವೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಈ ಪ್ರಕರಣದ ಬಗ್ಗೆ ಇಲ್ಲಿಯವರೆಗೂ ಮಾತನಾಡದ ಮುಖ್ಯಮಂತ್ರಿಗಳು ತಾವು ಡಿ.ಕೆ.ಶಿ. ಪರವೂ ಅಥವಾ ಜನಪರವೂ ಎಂಬುದು ಸ್ಪಷ್ಠಿಕರಣ ನೀಡಬೇಕೆಂದು ಬಸನಗೌಡ ಒತ್ತಾಯಿಸಿದ್ದಾರೆ.

Leave a Reply