ಮಕ್ಕಳ ಸಹಾಯವಾಣಿ-೧೦೯೮ ಮತ್ತು ಲೋಗೊ ಬರೆಸಲು ಸೂಚನೆ.

ಕೊಪ್ಪಳ,
ಡಿ. ೧೬ (ಕ ವಾ) ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲಾ ಗೋಡೆಗಳ ಮೇಲೆ ಮಕ್ಕಳ
ಸಹಾಯವಾಣಿ-೧೦೯೮ ಮತ್ತು ಲೋಗೊ ಚಿತ್ರ ಬರೆಸುವಂತೆ ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ
ಉಪನಿರ್ದೇಶಕ ಶ್ಯಾಮಸುಂದರ್ ಅವರು ಸೂಚನೆ ನೀಡಿದ್ದಾರೆ.
     ಮಕ್ಕಳ ಸಹಾಯವಾಣಿ
ಸಂಖ್ಯೆ ೧೦೯೮ ಹಾಗೂ ಲೋಗೊ ಚಿತ್ರವನ್ನು ಜಿಲ್ಲೆಯ ಎಲ್ಲ ಶಾಲೆಗಳ ಗೋಡೆಯ ಮೇಲೆ ಕಳೆದ ಸೆ.
೩೦ ರೊಳಗಾಗಿ ಚಿತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಈ ಕುರಿತು ವರದಿ
ಸಲ್ಲಿಸುವಂತೆ ಈ ಹಿಂದೆ ತಿಳಿಸಲಾಗಿತ್ತು.   ಆದರೆ,  ಈವರೆಗೂ ಯಾವುದೇ ಶಾಲೆಗಳಿಂದ
ಮಾಹಿತಿ ಸಲ್ಲಿಕೆಯಾಗಿಲ್ಲ.  ಮಕ್ಕಳ ಸಹಾಯವಾಣಿ ಸಲಹಾ ಮಂಡಳಿಯ ಅಧ್ಯಕ್ಷರಾಗಿರುವ ಕೊಪ್ಪಳ
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಸಭೆಯಲ್ಲಿ ಈ ಕುರಿತು
ಕಟ್ಟುನಿಟ್ಟಿನ ಸೂಚನೆ ನೀಡಿರುತ್ತಾರೆ.  ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ
ಸಹಾಯವಾಣಿ ಸಂಖ್ಯೆ ಹಾಗೂ ಲೋಗೊ ಚಿತ್ರವನ್ನು ಬರೆಸುವಂತೆ ಪುನಃ ಸೂಚಿಸಲಾಗಿದೆ. ಲೋಗೋ
ಚಿತ್ರವನ್ನು ಈಗಾಗಲೇ ಎಲ್ಲಾ ಶಾಲೆಗಳಿಗೂ ಇ-ಮೇಲ್ ಮೂಲಕ ಈಗಾಗಲೆ ಕಳುಹಿಸಲಾಗಿದ್ದು,
ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಶಾಲಾ ಹಂತದಲ್ಲಿ ಲಭ್ಯವಿರುವ ಶಾಲಾ ನಿರ್ವಹಣಾ
ಅನುದಾನದಲ್ಲಿ ಖರ್ಚು ಭರಿಸಿ, ಎಲ್ಲ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ-೧೦೯೮ ಇದರ ಲೋಗೊ
ಹಾಗೂ ಮಾಹಿತಿಯನ್ನು ಕೂಡಲೆ ಚಿತ್ರಿಸಿ, ಅನುಷ್ಠಾನ ಮಾಹಿತಿ ಸಲ್ಲಿಸಬೇಕು.  ತಪ್ಪಿದಲ್ಲಿ
ಅಂತಹ ಶಾಲಾ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸಿ, ಜಿಲ್ಲಾಧಿಕಾರಿಗಳಿಗೆ ವರದಿ
ಸಲ್ಲಿಸಲಾಗುವುದು ಎಂದು ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರು ತಿಳಿಸಿದ್ದಾರೆ.

Related posts

Leave a Comment