ಕಾಶ್ಮೀರದ ಭಾಗವನ್ನು ಪಾಕ್‌ನಲ್ಲಿ ತೋರಿಸಿದ ಅಮೆರಿಕದ ಭೂಪಟ

: ತಿದ್ದುವಂತೆ ಭಾರತದ ಸೂಚನೆ 
ಹೊಸದಿಲ್ಲಿ, ನ. : ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಪಾಕಿಸ್ತಾನದ ಭಾಗವೆಂದು ತೋರಿಸಿರುವ ಭೂಪಟಗಳನ್ನು ‘ಸರಿಪಡಿಸುವಂತೆ’ ಭಾರತವಿಂದು ಅಮೆರಿಕದ ರಾಜ್ಯಾಂಗ ಇಲಾಖೆಗೆ ತಿಳಿಸಿದೆ. ಪಿಒಕೆ ವಿವಾದಕ್ಕೆ ಸಂಬಂಧಿಸಿದಂತೆ ಭೂಪಟಗಳನ್ನು ಸರಿಪಡಿಸಬೇಕೆಂದು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯಿ ಇಂದಿಲ್ಲಿ ಹೇಳಿದರು. ಪಿಒಕೆಯನ್ನು ಪಾಕಿಸ್ತಾನದ ಭಾಗವೆಂದು ತೋರಿಸುವ ಅಮೆರಿಕದ ಸರಕಾರಿ ವೆಬ್‌ಸೈಟ್‌ನ ಕುರಿತಾದ ಪ್ರಶ್ನೆಯೊಂದಕ್ಕೆ ಅವರುತ್ತರಿಸುತ್ತಿದ್ದರು.
ಭಾರತೀಯ ಪ್ರಾಂತ್ಯಗಳನ್ನು ಇನ್ನಿತರ ದೇಶಗಳಲ್ಲಿ ತಪ್ಪಾಗಿ ತೋರಿಸುತ್ತಿರುವ ಹಲವು ರಾಷ್ಟ್ರಗಳು ಹಾಗೂ ಸಂಘಟನೆಗಳೊಂದಿಗೆ ವಿದೇಶಾಂಗ ಸಚಿವಾಲಯ ಮಾತುಕತೆ ನಡೆಸುತ್ತಿದೆಯೆಂದು ಮಥಾಯಿ ತಿಳಿಸಿದರು.
ಕಳೆದ 35 ವರ್ಷಗಳಿಂದ ತಾನೀ ವ್ಯವಹಾರದಲ್ಲಿ ನಿರತನಾಗಿದ್ದೇನೆ ಹಾಗೂ ಇದನ್ನು ನೂರಾರು ಸಲ ಮಾಡಿದ್ದೇನೆ. ಮುಖ್ಯವಾಗಿ ರಾಜಕೀಯ ದೃಷ್ಟಿಯಿಂದ ನೋಡಿದರೆ, ಭೂಪಟ ಲೇಖನ ನಿಖರವಾದ ವಿಜ್ಞಾನ ಅಲ್ಲವೆಂಬುದು ತನ್ನ ಅಭಿಪ್ರಾಯವಾಗಿದೆಯೆಂದು ಅವರು ಹೇಳಿದರು. ಸಚಿವಾಲಯ ಈ ವಿಷಯದ ಬಗ್ಗೆ ಚರ್ಚಿಸಲಿದೆಯೆಂದು ಮಥಾಯಿ ತಿಳಿಸಿದರು.
ಅಮೆರಿಕದ ರಾಜ್ಯಾಂಗದ ಜಾಲ ತಾಣವು ತನ್ನ ದೇಶಗಳ ಪಟ್ಟಿಯಲ್ಲಿ ಪಿಒಕೆಯನ್ನು ಪಾಕಿಸ್ತಾನದಲ್ಲಿ ತೋರಿಸಿದೆಯೆಂದು ವರದಿಯೊಂದು ಇಂದು ಬೆಟ್ಟು ಮಾಡಿತ್ತು. ಕಳೆದ ಹಲವು ವರ್ಷಗಳಲ್ಲಿ ಗೂಗಲ್‌ನಂತಹ ಅಂತಾರಾಷ್ಟ್ರೀಯ ಸಂಘಟನೆಗಳು ಪಿಒಕೆಯನ್ನು ಪಾಕಿಸ್ತಾನದ ಭಾಗವಾಗಿ ಚಿತ್ರಿಸಿದ ಹಲವು ಉದಾಹರಣೆಗಳು ದೊರೆತಿವೆ. ಅಂತಹ ಎಲ್ಲ ಸಂದರ್ಭಗಳಲ್ಲಿ ಭಾರತವು ಅಂತಹ ದೇಶಗಳು ಹಾಗೂ ಸಂಘಟನೆಗಳೊಂದಿಗೆ ಪ್ರತಿಭಟನೆಯನ್ನು ದಾಖಲಿಸಿದೆ ಹಾಗೂ ಅರುಣಾಚಲ ಪ್ರದೇಶವನ್ನು ಚೀನದ ಭಾಗವಾಗಿ ಚಿತ್ರಿಸಿದ ನಕಾಶೆಗಳಿಗೂ ಭಾರತ ಆಕ್ಷೇಪ ಸೂಚಿಸಿದೆ

Related posts

Leave a Comment