ಐಟಿಐ ಸೀಟುಗಳ ಹರಾಜು ಪ್ರಕ್ರಿಯೆ ಅರ್ಜಿ ಆಹ್ವಾನ.

ಕೊಪ್ಪಳ,- ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಐ.ಎಮ್.ಸಿ ಯೋಜನೆಯಡಿಯಲ್ಲಿ ಜೋಡಣೆಗಾರ ಮತ್ತು ವಿದ್ಯುತ್‌ಶಿಲ್ಪಿ ವೃತ್ತಿ ವಿಭಾಗದ ತಲಾ ೦೫ ಸೀಟುಗಳನ್ನು ಹರಾಜು ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಹರಾಜಿನಲ್ಲಿ ಭಾಗವಹಿಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ಜು.೩೦ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಹಾಗೂ ಹರಾಜು ಕೈಗೊಳ್ಳುವ ದಿನಾಂಕವಾಗಿದೆ. ೧೦೦ ರೂ ಪ್ರವೇಶ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಖಾಲಿ ಇರುವ ಸೀಟುಗಳಿಗನುಗುಣವಾಗಿ ಪ್ರವೇಶ ಅರ್ಜಿಗಳು ನಿಗದಿತ ಅವಧಿಯೊಳಗಾಗಿ ಬಾರದಿದ್ದಲ್ಲಿ ಹರಾಜು ಕೈಗೊಳ್ಳುವ ದಿನಾಂಕ ಮುಂದೂಡಲಾಗುವುದು. ಹರಾಜಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಹರಾಜಿನ ದಿನದಂದು ಹರಾಜಿನ ಮೊತ್ತದ ಜೊತೆಗೆ ಮೊದಲನೆಯ ವರ್ಷದ ಬೋಧನಾ ಶುಲ್ಕ ೨೨೦೦ ರೂ.ಗಳನ್ನು ತುಂಬಬೇಕು ಹಾಗೂ ಎರಡನೇಯ ವರ್ಷದ ಬೋಧನಾ ಶುಲ್ಕವನ್ನು ಜು.೩೧ ರೊಳಗಾಗಿ ಭರಿಸಬೇಕು. ಹರಾಜು ಪ್ರಕ್ರಿಯೆಯಲ್ಲಿ ಐ.ಎಮ್.ಸಿ ಸೊಸೈಟಿ ನಿರ್ಣಯವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತರಬೇತಿ ಅಧಿಕಾರಿಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಂಗಳೂರು, ತಾ||ಯಲಬುರ್ಗಾ, ಜಿ||ಕೊಪ್ಪಳ, ಮೊಬೈಲ್: ೯೮೮೦೯೯೩೭೪೪ ನ್ನು ಸಂಪರ್ಕಿಸಬಹುದಾಗಿದೆ.

Leave a Reply