ವ್ಯಕ್ತಿ ಕಾಣೆ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ, ಅ.೨೮ (ಕರ್ನಾಟಕ ವಾರ್ತೆ)
ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಮೆಹಬೂಬ ಹುಸೇನ್ (೩೨) ಎಂಬ ವ್ಯಕ್ತಿಯು
ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋದವನು ವಾಪಸ್ ಮನೆಗೆ ಬಾರದೆ ಎಲ್ಲಿಯೋ
ಕಾಣೆಯಾಗಿದ್ದು, ಈ ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ
ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
    
ಕಾಣೆಯಾದ ವ್ಯಕ್ತಿಯು ಮೇ.೦೫ ರಂದು ಬೆಳಿಗ್ಗೆ ೦೯ ಗಂಟೆಗೆ ಗೌಂಡಿ ಕೆಲಸಕ್ಕಾಗಿ
ಕೊಪ್ಪಳಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವನು ವಾಪಸ್ ಬಂದಿಲ್ಲ.  ಕಾಣೆಯಾದ ವ್ಯಕ್ತಿಯ
ವಿವರ ಈ ಕೆಳಗಿನಂತಿದೆ : ಮೆಹಬೂಬ ಹುಸೇನ್ ತಂದೆ, ಖಾಜಾವಲಿಸಾಬ ಮನಿಯಾರ, ವಯಸ್ಸು: ೩೨,
ಸಾ|| ಬಹದ್ದೂರಬಂಡಿ, ತಾ||ಜಿ||ಕೊಪ್ಪಳ, ಜಾತಿ: ಮುಸ್ಲಿಂ, ಎತ್ತರ: ೫ ಫೀಟು ೫ ಇಂಚು,
ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ, ಮಧ್ಯವಾದ ಮೈಕಟ್ಟು, ಕಪ್ಪು ಮೈಬಣ್ಣ,
ಕಪ್ಪು ತಲೆಕೂದಲು, ದುಂಡನೆಯ ಮುಖ, ಮುಂದಿನ ಕೆಳಗಿನ ಹಲ್ಲುಗಳಿಗೆ ಬೆಳ್ಳಿ ತಂತಿ
ಹಾಕಲಾಗಿದೆ. ಮನೆಯಿಂದ ಹೊರಡುವಾಗ ಒಂದು ಬಿಳಿ ಬಣ್ಣದ ಚೆಕ್ಸ್ ಫುಲ್ ಶರ್ಟ್, ಒಂದು
ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತನು ಗುಟಕಾ, ತಂಬಾಕು ಹಾಕುವ ಚಟ
ಹೊಂದಿದ್ದಾನೆ.
ಈ ಚಹರೆಯುಳ್ಳ ವ್ಯಕ್ತಿಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ
ಯಾರಿಗಾದರೂ ಕಂಡಲ್ಲಿ ಅಥವಾ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣೆಯ ಪಿ.ಎಸ್.ಐ ದೂರವಾಣಿ ಸಂಖ್ಯೆ: ೦೮೫೩೯-೨೨೧೩೩೩, ಮೊಬೈಲ್: ೯೪೮೦೮೦೩೭೪೬,
ಸಿ.ಪಿ.ಐ ದೂರವಾಣಿ ಸಂಖ್ಯೆ:೯೪೮೦೮೦೩೭೩೧, ಕೊಪ್ಪಳ ಡಿ.ವೈ.ಎಸ್.ಪಿ ದೂರವಾಣಿ ಸಂಖ್ಯೆ:
೦೮೫೩೯-೨೩೦೩೪೨, ಎಸ್.ಪಿ ದೂರವಾಣಿ ಸಂಖ್ಯೆ : ೦೮೫೩೯-೨೩೦೧೧೧, ಕೊಪ್ಪಳ ನಿಯಂತ್ರಣ
ಕೊಠಡಿ, ದೂರವಾಣಿ ಸಂಖ್ಯೆ: ೦೮೫೩೯-೨೩೦೨೨೨-೧೦೦ ಇವರಿಗೆ ಮಾಹಿತಿ ನೀಡುವಂತೆ
ತಿಳಿಸಿದೆ.

ಗಿಣಿಗೇರಾ ಗ್ರಾಮದ ವ್ಯಕ್ತಿ ಕಾಣೆ ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ,
ಅ.೨೮ (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಗಿಣಿಗೇರಾ ಗ್ರಾಮದ ದ್ಯಾಮಣ್ಣ
ಹನುಮಂತಪ್ಪ ಹೊಸೂರು (೨೫) ಎಂಬ ವ್ಯಕ್ತಿಯು ರಾತ್ರಿ ಊಟ ಮಾಡಿ ಮನೆಯ ಕಟ್ಟೆಯ ಮೇಲೆ
ಮಲಗಿಕೊಂಡಿದ್ದು, ಬೆಳಗಿನ ಜಾವ ಕಾಣೆಯಾಗಿದ್ದಾನೆ. ಈ ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರು
ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
       ಈ ವ್ಯಕ್ತಿಯು ಕಳೆದ ಏಪ್ರಿಲ್
೦೩ ರಿಂದ ನಾಪತ್ತೆಯಾಗಿದ್ದು, ಕಾಣೆಯಾದ ವ್ಯಕ್ತಿಯ ವಿವರ ಈ ಕೆಳಗಿನಂತಿದೆ :  ದ್ಯಾಮಣ್ಣ
ತಂದೆ, ಹನುಮಂತಪ್ಪ ಹೊಸೂರು ವಯಸ್ಸು: ೨೫, ಸಾ|| ಗಿಣಿಗೇರಾ, ತಾ||ಜಿ||ಕೊಪ್ಪಳ, ಜಾತಿ:
ಉಪ್ಪಾರ, ಕನ್ನಡ ಭಾಷೆ ಮಾತನಾಡುತ್ತಾನೆ, ಸದೃಢ ಮೈಕಟ್ಟು, ಕೆಂಪು ಮೈಬಣ್ಣ, ಉದ್ದನೆಯ
ಮುಖ, ರಾತ್ರಿ ಮಲಗುವಾಗ ಬಿಳಿ ಬಣ್ಣದ ಅಂಗಿ, ಹಸಿರು ಬಣ್ಣದ ಲುಂಗಿ ಧರಿಸಿರುತ್ತಾನೆ. ಈ 
ಚಹರೆಯುಳ್ಳ ವ್ಯಕ್ತಿಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಅಥವಾ
ವ್ಯಕ್ತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಬ್
ಇನ್ಸ್‌ಪೆಕ್ಟರ್, ದೂರವಾಣಿ: ೦೮೫೩೯-೨೨೧೩೩೩, ಮೊ: ೯೪೮೦೮೦೩೭೪೬, ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣೆಯ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್, ಮೊ: ೯೪೮೦೮೦೩೭೩೧, ಡಿವೈಎಸ್‌ಪಿ
ಕೊಪ್ಪಳ, ದೂರವಾಣಿ ಸಂಖ್ಯೆ:೦೮೫೩೯-೨೩೦೩೪೨, ಮೊ.೯೪೮೦೮೦೩೭೨೦, ಎಸ್.ಪಿ. ಕೊಪ್ಪಳ, ದೂ:
೦೮೫೩೯-೨೩೦೧೧೧, ಡಿಸ್ಟ್ರಿಕ್ಟ್ ಕಂಟ್ರೋಲ್ ರೂಮ್, ದೂ: ೦೮೫೩೯-೨೩೦೨೨೨-೧೦೦.

Related posts

Leave a Comment