fbpx

ವಿವೇಕಾನಂದ ಶಾಲೆ ಸಂಭ್ರಮದ ಸ್ವಾತಂತ್ರ್ಯದಿನಾಚರಣೆ.

ಕೊಪ್ಪಳ, ೧೫ – ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೬೯ ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಲಯನ್ಸ್ ಕ್ಲಬ್ ಕೊಪ್ಪಳದ ಅಧ್ಯಕ್ಷ ಲಯನ್ ಶ್ರೀನಿವಾಸ ಗುಪ್ತಾ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಸಫಲತೆ ಮತ್ತು ಮುಂದಿನ ಪೀಳಿಗೆಯ ಜವಾಬ್ದಾರಿಗಳ ಕುರಿತು ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ ಕುರಿತಾಗಿ ಶಾಲಾ ಮಕ್ಕಳು ಮತ್ತು ಶಿಕ್ಷಕರು ಮಾತನಾಡಿದರು. ಆಕರ್ಷಕ ದೇಶಭಕ್ತಿ ಗೀತೆ ಮತ್ತು ಕುವೆಂಪು ರವರ ಅನಿಕೇತನ ಹಾಡಿಗೆ ಶಾಲಾ ಮಕ್ಕಳಿಂದ ಕವಾಯತು ಮನ ಸೆಳೆಯಿತು. ವಿವಿಧ ದೇಶಭಕ್ತರ ಉಡುಪಿನಲ್ಲಿ ಕೆ.ಜಿ. ಮಕ್ಕಳು ಗಮನ ಸೆಳೆದರು. ಇತ್ತೀಚಿಗೆ ನಿಧನರಾದ ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕುರಿತಾಗಿ ಮಕ್ಕಳಿಗೆ ಮತ್ತು ಶಾಲಾ ಶಿಕ್ಷಕರಿಗೆ ಶಾಲಾ ಪ್ರಾಚಾರ್ಯ ಎ. ಧನಂಜಯನ್ ಆಯೋಜಿಸಿದ್ದ ನಿಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಾಚಾರ್ಯರಿಂದ ಕೊಡಲ್ಪಟ್ಟ ನಗದು ಬಹುಮಾನವನ್ನು ಅತಿಥಿಗಳು ವಿತರಿಸಿದರು. ವೇದಿಕೆಯ ಮೇಲೆ ಲಯನ್ಸ್ ಕ್ಲಬ್ ಸದಸ್ಯರಾದ ಲಯನ್ ವಿ.ಎಸ್. ಅಗಡಿ, ಲಯನ್ ಬಸವರಾಜ ಬಳ್ಳೊಳ್ಳಿ, ಲಯನ್ ಪರಮೇಶಪ್ಪ ಕೊಪ್ಪಳ, ಲಯನ್ ವೀರೇಶ ಹತ್ತಿ, ಲಯನ್ ಮಹೇಶ ಮಿಟ್ಟಲಕೋಡ, ಲಯನ್ ಎಸ್.ಪಿ. ಮುದಗಲ್, ಲಯನ್ ಸುರೇಶ ಸಂಚೇತಿ, ಲಯನ್ ಅರವಿಂದ ಅಗಡಿ, ಲಯನ್ ವೆಂಕಟೇಶ ಶ್ಯಾನಭಾಗ, ಲಯನ್ ನಂದಕಿಶೋರ ಸುರಾಣ, ಪ್ರಾಚಾರ್ಯ ಎ. ಧನಂಜಯನ್ ಉಪಸ್ಥಿತರಿದ್ದರು. ಶಾಲಾ ನಾಯಕರಾದ ಸುಧಾ ಸ್ವಾಗತಿಸಿದರೆ, ಅಬ್ರಾರ್ ಮನಿಯಾರ್ ವಂದಿಸಿದರು. ಫಾತಿಮಾ, ಭಾವನಾ ಮತ್ತು ಕಾವ್ಯ ಚವಡಿ ಕಾರ್ಯಕ್ರಮ ನಿರೂಪಿಸಿದರು.

Please follow and like us:
error

Leave a Reply

error: Content is protected !!