ಬಸವರಾಜ ಹೆಸರೂರರಿಗೆ ರಂಗಕಲಾ ಸನ್ಮಾನ

ಕೊಪ್ಪಳ : ಇತ್ತೀಚೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ೫೯ ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ೧೫ ದಿನಗಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ರಂಗಕಲಾ ಸನ್ಮಾನ ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿನ ಕವಲೂರ ಗ್ರಾಮದ ರಂಗಭೂಮಿ ಕಲಾವಿದ ಬಸವರಾಜ ಹೆಸರೂರ ಇವರಿಗೆ ರಂಗ ಕಲಾಸನ್ಮಾನ ನೀಡಿ ಗೌರವಿಸಲಾಯಿತು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಪ್ರತಿ ವರ್ಷ ಆಯ್ದ ರಂಗ ಕಾಲಾವಿದರನ್ನು ಗುರಿತಿಸಿ ಅವರಿಗೆ ಸನ್ಮಾನಿಸುವ ಪರಂಪರೆಯನ್ನು ಹೊಂದಿರುವ ಈ ಸಂಘದ ಗೌರವಕ್ಕೆ ಈ ಬಾರಿ ಕೊಪ್ಪಳ ತಾಲೂಕಿನ ಕಲಾವಿದರು ಆಯ್ಕೆಯಾಗಿ ಸನ್ಮಾನಿಸಿರುವುದು ಜಿಲ್ಲೆಯ ಎಲ್ಲ ರಂಗಕಲಾವಿದರಿಗೆ ಸಂತಸವನ್ನುಂಟು ಮಾಡಿದೆ. ಈ ಗೌರವಕ್ಕೆ ಪಾತ್ರರಾದ ಬಸವರಾಜ ಹೆಸರೂರನ್ನು ಜಿಲ್ಲೆಯ ಎಲ್ಲ ರಂಗ ಕಲಾವಿದರು ಅಭಿನಂದಿಸಿದ್ದಾರೆ.

Leave a Reply