ತಾಲೂಕ ಮಟ್ಟದ ಯುವಜನ ಮೇಳ

ಗ್ರಾಮ ಪಂಚಾಯತ ಬೂದಗುಂಪಾದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ತಾಲೂಕ ಮಟ್ಟದ ಯುವಜನ ಮೇಳ ೨೦೧೨-೧೩ ನೇ ಸಾಲಿನ ಕಾರ್ಯಕ್ರಮವನ್ನು ದಿ. ೨೫/೧೨/೨೦೧೨ ರಂದು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಸರಕಾರಿ ಪ್ರೌಢಶಾಲೆ ಬೂದಗುಂಪಾ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. 
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀಮತಿ ಪಾರಮ್ಮ ಸಿದ್ದಪ್ಪ ಗೊಬ್ಬಿ ಗ್ರಾ.ಪಂ ಅಧ್ಯಕ್ಷರು ಬೂದಗುಂಪಾ  ಇವರು ವಹಿಸಿಕೊಂಡಿದ್ದರು. ಉದ್ಘಾಟನೆಯನ್ನು ಜನಾರ್ಧನ ಹುಲಗಿ ಜಿ.ಪಂ  ಸದಸ್ಯರು, ಡೊಳ್ಳು ಬಡಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಎನ್.ಎಸ್. ಪಾಟೀಲ ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿಗಳು ತಾಲೂಕ ಮಟ್ಟದ ಯುವಜನ ಮೇಳ ಕುರಿತು ಪ್ರಸ್ತಾವಿಕ ಭಾಷಣವನ್ನು ಮಾಡಿದರು. ಇವರ ಜೊತೆಗೆ  ಎ.ವಿ.ಗುರುರಾಜ, ಬಸವರಾಜ ಪೆದ್ಲ, ನಿಂಗಪ್ಪ ಕುದರಿಮೋತಿ, ಫಕಿರಪ್ಪ ಎಮ್ಮಿ, ಹನುಮಂತಪ್ಪ ಹೊಳೆಯಾಚೆ, ರಾಕೇಶ ಕಾಂಬ್ಳೆಕರ, ಮಂಜಪ್ಪ ಜಿನಿನ್ನ, ವೆಂಕಟೇಶ ಈಳಿಗೇರ, ಸಂಘದ ಅಧ್ಯಕ್ಷರಾದ ಮಹೇಶ ಬಡಿಗೇರ ಉಪಾಧ್ಯಕ್ಷರಾದ ನಿಂಗಪ್ಪ ಅಡಗಿ ಹಾಗೂ ಬೂದಗುಂಪಾ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು ಗ್ರಾಮದ ಗುರು ಹಿರಿಯರು ಯುವಕ ಯುವತಿಯರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಮಧುಸುಧನ ಡೊಳ್ಳಿನನವರು ನಿರ್ವಹಿಸಿದರು. 
Please follow and like us:

Related posts

Leave a Comment