ಮಂಗಳೂರು ಗ್ರಾಮ ಪಂಚಾಯತಿಯಲ್ಲಿ ಹೈದ್ರಾಬಾದ ಕರ್ನಾಟಕ ದಿನಾಚರಣೆ.

ಕೊಪ್ಪಳ-17- ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿಯಲ್ಲಿ ಹೈದ್ರಾಬಾದ ಕರ್ನಾಟಕ ವಿಮೋಚನ ದಿನಾಚರಣೆಯ ಅಂಗವಾಗಿ ರಾಷ್ಟ್ರದ್ವಜಾರೋಹಣವನ್ನು ಮಾಡಲಾಯಿತು. ಸೆ. ೧೭ ರಂದು ಬೆಳಿಗ್ಗೆ ೯  ಗಂಟೆಗೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶೋಭಾ ಶಂಕ್ರಪ್ಪ ನಿಂಗಾಪೂರ ದ್ವಜಾರೋಹಣವನ್ನು ನೆರವೆರಿಸಿದರು. ಮತ್ತು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಐಶ್ವರ್ಯ ಜೋತಿ ಸಂಗಡಿಗರು ರಾಷ್ಟ್ರಿಯ ಗೀತೆಯನ್ನು ಹಾಡುವುದರೊಂದಿಗೆ ರಾಷ್ಟ್ರದ್ವಜೊಕ್ಕೆ ಗೌರವನ್ನು ಕೊಡಲಾಯಿತು.
    ಈ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರನ್ನು ನೆನಪಿಸಿಸಿಕೊಂಡು ಸಿಹಿ ಹಂಚಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್

ಯಕ್ಷರು, ಸರ್ವಸದಸ್ಯರು, ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಸಮಸ್ತ ಗುರು ಹಿರಿಯರು, ಭಾಗವಹಿಸಿದ್ದರು.

Please follow and like us:
error