ಕೆಜೆಪಿ ಕಾರ್ಯಕಾರಿಣಿ ಸರಕಾರದ ಅಳಿವು-ಉಳಿವು ನಿರ್ಧಾರ

ಬೆಂಗಳೂರು, ಜ.3: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರದ ಅಳಿವು-ಉಳಿವಿನ ಸಾಧ್ಯತೆಯ ಬಗ್ಗೆ  ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನವರ ಅಧ್ಯಕ್ಷತೆಯಲ್ಲಿ ನಡೆಯಲಿ ರುವ ಕರ್ನಾಟಕ ಜನತಾ ಪಕ್ಷದ ರಾಜ್ಯ ಕಾರ್ಯಕಾರಣಿ ತೀರ್ಮಾನಿಸಲಿದೆ.
ಯಡಿಯೂರಪ್ಪನವರ ಆಪ್ತ ಶಾಸಕರ ವಿರುದ್ಧ ಬಿಜೆಪಿ ಕತ್ತಿ ಮಸೆಯುತ್ತಿರುವ ಬೆನ್ನಲ್ಲೇ ಶೆಟ್ಟರ್ ನೇತೃತ್ವದ ಸರಕಾರವನ್ನು ಶತಾಯು-ಗತಾಯ ಉರುಳಿಸಲೇಬೇಕೆಂಬ ನಿರ್ಧಾರಕ್ಕೆ ಅವರು ಬಂದಿದ್ದು, ಈ ಬಗ್ಗೆ ಬೆಂಬಲಿಗ ಶಾಸಕ ರೊಂದಿಗೆ ಚರ್ಚಿಸಲಿದ್ದಾರೆಂದು ಗೊತ್ತಾಗಿದೆ.
ಅತ್ತ ಶೆಟ್ಟರ್ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಂತೆಯೇ ಇತ್ತ ಯಡಿಯೂರಪ್ಪ ಮತ್ತವರ ಆಪ್ತ ಶಾಸಕರು ಸರಕಾರದ ಬಜೆಟ್ ಮಂಡನೆಗೆ ಅವಕಾಶ ನೀಡಬಾರದೆಂಬ ತರಾತುರಿ ಯಲ್ಲಿದ್ದಾರೆ. ಈ ಮಧ್ಯೆ ಮಾತನಾಡಿದ ಯಡಿಯೂರಪ್ಪ, ಇದು ಸತ್ತ ಸರಕಾರ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಸರಕಾರವನ್ನು ಉರುಳಿಸುವ ಶಾಸಕರ ಬೆಂಬಲ ತನಗಿದೆ ಎಂದು ಗುಡುಗಿರುವ ಮಾಜಿ ಸಿಎಂ ಬಿಎಸ್‌ವೈ, ತಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ಅಭಿವೃದ್ಧಿ ದೇಶದಲ್ಲೆ 2ನೆ ಸ್ಥಾನದಲ್ಲಿತ್ತು. ಆದರೆ, ಇಂದು ಅದು ಕುಸಿತ ಕಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Please follow and like us:
error