ಗಣಿಗಾರಿಕೆ ಪುನಾರಂಭ: ಸುಪ್ರೀಂಕೋರ್ಟ್ ನಕಾರ

 : ಹಾನಿಯನ್ನು ಸರಿಪಡಿಸುವವರೆಗೂ ರಾಜ್ಯದಲ್ಲಿ ಗಣಿಗಾರಿಗೆ ಅನುಮತಿ ಇಲ್ಲ
ನವದೆಹಲಿ: ರಾಜ್ಯದಲ್ಲಿ ಗಣಿಗಾರಿಕೆ ಪುನಾರಂಭಿಸಲು ಅನುಮತಿ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ಹಸಿರು ಪೀಠ ಶುಕ್ರವಾರ ಸಾರಾಸಗಟು ತಿರಸ್ಕರಿ ಸಿದೆ.
’ಗಣಿಗಾರಿಕೆಯಿಂದಾದ ಹಾನಿಯನ್ನು ಸರಿಪಡಿಸುವವರೆಗೂ ರಾಜ್ಯದಲ್ಲಿ ಗಣಿಗಾರಿಕೆ ಪುನಾರಂಭಿ ಸಲು ಅನುಮತಿ ನೀಡುವುದಿಲ್ಲ’ ಎಂಬ ಇಂಗಿತವನ್ನು ಪೀಠ ವ್ಯಕ್ತಪಡಿಸಿದೆ.
ಗಣಿಗಾರಿಕೆ ಸ್ಥಗಿತಗೊಳಿಸಿರುವುದರಿಂದ ರಾಜ್ಯಕ್ಕಾಗಿರುವ ಅನಾನುಕೂಲಗಳನ್ನು ವಿವರಿಸಿ, ಗಣಿಗಾರಿಕೆ ಪುನಾರಂಭಿಸಲು ಅನುಮತಿ ಕೋರಿ ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ ಅರ್ಜಿ ಸಲ್ಲಿಸಿತ್ತು. ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಪೀಠ ರಾಜ್ಯದ ಬೇಡಿಕೆಯನ್ನು ತಿರಸ್ಕರಿ ಸಿತು.
ಮೂರು ಜಿಲ್ಲೆಗಳ ಗಣಿಗಾರಿಕೆ ಸ್ಥಗಿತ: ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಹಸಿರು ಪೀಠ ಕೇಂದ್ರ ಉನ್ನತಾ ಧಿಕಾರ ಸಮಿತಿ (ಸಿ‌ಇಸಿ) ಸಲ್ಲಿಸಿದ್ದ ವರದಿಯನ್ನಾಧರಿಸಿ ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.
ಅಲ್ಲದೇ ಈ ಮೂರೂ ಜಿಲ್ಲೆಗಳಲ್ಲಿ ನಡೆದಿರುವ ಗಣಿಗಾರಿಕೆಯಿಂದಾದ ಹಾನಿ ಪ್ರಮಾಣದ ತಳಸ್ಪರ್ಶಿ ಅಧ್ಯಯನ ನಡೆಸುವಂತೆ, ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿರೀಸರ್ಚ್ ಆರು.ಯಂಡ್ ಎಜುಕೇಷನ್ (ಐಸಿ‌ಎಫ್‌ಆರ್‌ಇ)ಸಂಸ್ಥೆಗೆ ಸೂಚಿಸಿತ್ತು. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಅಧ್ಯಯನ ನಡೆಸಿರುವ ಸಂಸ್ಥೆ, ‘ಬಳ್ಳಾರಿ ಪರಿಸರ ಸರಿಮಾಡಲಾರದಷ್ಟು ಹಾನಿಯಾಗಿದೆ’ ಎಂದು ನವೆಂಬರ್ ೫ ರಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತ್ತು. ಉಳಿದೆರಡು ಜಿಲ್ಲೆಗಳಲ್ಲಿ ಅಧ್ಯಯನ ನಡೆಸುತ್ತಿದೆ.
ಕೋರ್ಟ್‌ಗೆ ಸರ್ಕಾರದ ಮನವಿ: ‘ರಾಜ್ಯದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಹಾನಿಯಾಗಿದೆ. ಅಲ್ಲದೆ ಗಣಿಗಾರಿಯನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಅವಲಂಬಿಸಿದ್ದ ಲಕ್ಷಾಂತರ ಮಂದಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ.
ಇದನ್ನು ಕೇವಲ ಪರಿಸರ ಸಮಸ್ಯೆ ಎಂದು ಪರಿಗಣಿಸದೇ, ಸಾಮಾಜಿಕ-ಆರ್ಥಿಕ ಸಮಸ್ಯೆ ಎಂದು ಪರಿಗಣಿಸಿ ಗಣಿಗಾರಿಕೆ ಪುನಾರಂಭಿಸಲು ಅನುಮತಿ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ ಮನವಿ ಮಾಡಿತ್ತು.
ಅಲ್ಲದೇ ಗಣಿಗಾರಿಕೆಯಿಂದಾಗಿರುವ ಹಾನಿ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿತ್ತು.
ಗಣಿಗಾರಿಕೆಯಿಂದ ಪರಿಸರದ ಮೇಲಾಗಿರುವ ಹಾನಿ ಪ್ರಮಾಣ ತೀವ್ರವಾಗಿದ್ದು, ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಪರಿಸರ ಮರುಸ್ಥಾಪಿಸುವ ಕಾರ್ಯಯೋಜನೆಗೆ ಪೀಠ ಸಂತೃಪ್ತವಾಗಿಲ್ಲ.
Please follow and like us:
error