You are here
Home > Koppal News > ಜಡೆ ಹೆಣೆದು,ಮೆಹಂದಿ ಹಚ್ಚಿ ಸಂಭ್ರಮಿಸಿದ ಯುವತಿಯರು.

ಜಡೆ ಹೆಣೆದು,ಮೆಹಂದಿ ಹಚ್ಚಿ ಸಂಭ್ರಮಿಸಿದ ಯುವತಿಯರು.

ಭಾಗ್ಯನಗರ- ೨೦- ಭಾಗ್ಯನಗರದ ನೀರಿನ ಟ್ಯಾಂಕ್ ಹತ್ತಿರ ಯತ್ನಟ್ಟಿ ರಸ್ತೆಯಲ್ಲಿ ಪ್ರತಿಷ್ಟಾಪಿಸಲಾಗಿರುವ ಗಣೇಶ. ಗಣೇಶ ಹಬ್ಬದ ನಿಮಿತ್ಯ , ಶ್ರೀ ಗೌರಿ ಶಂಕರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ {ರಿ} ಇವರ ೧೨ ನೇ ವರ್ಷ ಪ್ರತಿಷ್ಟಾಪಿಸಿರುವ  ಗಣೇಶೊತ್ಸವದ ನಿಮಿತ್ಯ ಹಲವಾರು ವಿವಿಧ ಸ್ಫರ್ಧೆಗಳು ಜರುಗಿದವು. ಮಹಿಳೆಯರಿಗಾಗಿ ಜಡೆಹೆಣೆಯುವ, ಮೆಹೆಂದಿ ಹಾಕುವ, ರಂಗೋಲಿ ಸ್ಪರ್ಧೆ, ಒಂದು ನಿಮಿಷದಲ್ಲಿ ಟೀ ಸ್ಪೂನ್ ನಿಂದ ಬಕೇಟ್‌ನಲ್ಲಿ ಚೆಂಡು ಹಾಕುವುದು ಹಾಗೂ ಅತ್ತೆ ಸೊಸೆಯರ ಆಟ ಅತ್ತೆ ಬಲೂನನ್ನು ಉದಿ ಕೊಟ್ಟರೆ ಸೊಸೆಯರು ಅದನ್ನು ಕಾಲಿನಿಂದ ತುಳಿದು ಬಲೂನ್ ಒಡೆಯುವ ಆಟ. ಹೀಗೆ ಹಲವಾರು ಮನೋರಂಜನೆಯ ಆಟಗಳು  ಜನರನ್ನು ಸೆಳೆದವು. ಎಲ್ಲಾ ಆಟಗಳು ಪ್ರಾರಂಭಿಸುವ ಮೊದಲು ಉದ್ಘಾಟನೆ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಮುಖ್ಯ ಅತಿಥಿ  ಪ್ರಕಾಶಗೌಡ ಮಾತನಾಡಿ ಸ್ಪರ್ಧೆಯಲ್ಲಿ ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗ


ಳಾದ  ಬಸವರಾಜ ಕರುಗಲ್ ಮಾತನಾಡಿ ಯುವಕರು ಸೇರಿ ಇಂತಹ ಕಾರ್ಯಕ್ರಮಗಳನ್ನು ನಿಯೋಜಿಸಿ ಎಲ್ಲರನ್ನು ಒಗ್ಗೂಡಿಸಿಕೊಂಡ ಹೋಗುವುದು ಶ್ಲಾಘನೀಯ  ಎಂದರು.  ಶಿಕ್ಷಕಿಯರಾದ ತುಳುಜಾಬಾಯಿ ಮಾತನಾಡಿ ಮಹಿಳೆಯರು ಅಡುಗೆ ಮನೆಯಿಂದ ಹೊರಬಂದು ಸ್ಪರ್ಧೆಗಳಲ್ಲಿ ಭಾಗವಹಿಸಿರಿವುದು ಸ್ವಾಗತಾರ್ಹ, ಇಂತಹ ವೇದಿಕೆಗಳಿಂದ ನಿಮ್ಮಲ್ಲಿರುವ ಪ್ರತಿಭೆ ನಾಲ್ಕು ಜನರಿಗೆ ತಿಳಿಯುತ್ತದೆ ಎಂದು ಹೇಳಿದರು.  ನಾಗರಾಜನಾಯಕ ಡೊಳ್ಳಿನ ಮಾತನಾಡಿ ಇಂದಿನ ಯುವಕರು ಡಿಜೆ ಆಧುನಿಕ ನೃತ್ಯ ಮಾರುಹೊಗುತ್ತಿರುವ ಈ ಸಮಯದಲ್ಲಿ ಜಾನಪದ ಶೈಲಿಯಲ್ಲಿ ಗಣೇಶನ ಮೂರ್ತಿ ಮೆರವಣಿಗೆಯನ್ನು ಭಜನಾತಂಡದೊಂದಿಗೆ  ಎತ್ತಿನ ಚಕ್ಕಡಿಯಲ್ಲಿ ತಂದು ಪ್ರತಿಷ್ಟಾಪಿಸಿರುವುದು ವಿಶೇಷವಾಗಿತ್ತು ಎಂದರು, ಈ ಸಮಾರಂಭದ ಅಧ್ಯಕ್ಷರಾದ ಸುಭಾಷ ಕಲಾಲ ಹಾಗೂ ಸದಸ್ಯರಾದ ವೆಂಕಟೇಶ ನವಲಿ, ಮಂಜುನಾಥ ಜಾಣ, ಪರುಶುರಾಮ ತಟ್ಟಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಹಣಗಿ, ಮತ್ತಿತ್ತರರು ಸಮಾರಂಭದಲ್ಲಿ ಹಾಜರಿದ್ದರ.

Leave a Reply

Top