ಜನ್ಮ ಭೂಮಿ ಮತ್ತು ಕರ್ಮಭೂಮಿಯ ಋಣ ತೀರಿಸಲು ಅವಕಾಶ ಕೊಡಿ- ಸಿ.ವಿ ಚಂದ್ರಶೇಖರ.

ಕೊಪ್ಪಳ.ನ,೨೦ ನನಗೆ ಜನ್ಮ ನೀಡಿದ್ದು ರಾಯಚೂರು ಜಿಲ್ಲೆಯಾದರೆ ನನ್ನ ಬದುಕು ರೂಪಿಸಿರುವುದು ಕೊಪ್ಪಳ ಜಿಲ್ಲೆ ಜನ್ಮ ಭೂಮಿ ಮತ್ತು ಕರ್ಮಭೂಮಿಯ ಋಣ ತೀರಿಸಲು ರಾಯಚೂರು ಕೊಪ್ಪಳ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಆಯ್ಕೆ ಮಾಡಿ ತಮ್ಮ ಸೇವೆಗೆ ಅವಕಾಶ ಕೊಡಿ ಎಂದು. ನಿಯೋಜಿತ ಬಿ.ಜೆ.ಪಿ ಅಭ್ಯರ್ಥಿ ಸಿ.ವಿ. ಚಂದ್ರಶೇಖರ ಹೇಳಿದರು
ಅವರು ಗುರುವಾರ ಸಂಜೆ ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿರುವ ತೋಟದ ಮನೆ ಆವರಣದಲ್ಲಿ ಏರ್ಪಡಿಸಿದ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ರಾಯಚೂರು ಕೊಪ್ಪಳ ವಿಧಾನ ಪರಿಷತ್ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯ ಆರಂಬಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು. ಈಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿದೇರ್ಶಕನಾಗಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಈ ಭಾಗದ ಜನರಿಗೆ ಚಿರಪರಿಚಿತ ವ್ಯಕ್ತಿಯಾಗಿದ್ದೇನೆ ಸಂಸದ ಸಂಗಣ್ಣ ಕರಡಿ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾಜಿ ಶಾಸಕ ಬಸನಗೌಡ
ಈ ಸಮಾರಂಭದ ಉದ್ಘಾಟನೆಯನ್ನು ಸಂಸದ ಸಂಗಣ್ಣ ಕರಡಿ ನೇರವೇರಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ನಗರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಕವಲೂರು. ವಹಿಸಿದ್ದರು. ವೇದಿಕೆಯ ಮೇಲೆ ಬಿಜೆಪಿ ಮುಖಂಡರಾದ ಸಂಗಪ್ಪ ಒಕ್ಕಳದ, ವೀರಪಾಕ್ಷಪ್ಪ ಅಗಡಿ, ನಾಗನಗೌಡ ಡಂಬರಹಳ್ಳಿ, ಗವಿಸಿದ್ದಪ್ಪ, ಕಂದಾರಿ, ಮಾರುತೆಪ್ಪ ಹಲಗೇರಿ, ಪೀರಾಹುಸೇನ ಹೋಸಹಳ್ಳಿ, ವಿ.ಎಂ. ಭೂಸನೂರಮಠ, ರಾಘವೇಂದ್ರ ಪಾನಗಂಟಿ, ಅಪ್ಪಣ್ಣ ಪದಕಿ,  ಜಿಲ್ಲಾ ವಕ್ತಾರ ಚಂದ್ರಶೇಖರ ಪಾಟೀಲ್ ಹಲಗೇರಿ, ಮಾಧ್ಯಮ ಪ್ರತಿನಿಧಿ ಪರಮಾನಂದ ಯಾಳಗಿ, ಹಾಲೇಶ ಕಂದಾರಿ, ತೋಟಪ್ಪ ಕಾಮನೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬ್ಯಾಗವಾಟ ಎಂ.ಎಲ್.ಸಿ ಹಾಲಪ್ಪ ಆಚಾರ ಅವರ ನನ್ನನ್ನೂ ಗುರುತಿಸಿ ನನಗೆ ಮಾರ್ಗ ದರ್ಶನ ನೀಡಿ ಈ ಚುನಾವಣೆಯ ಸ್ಪರ್ಧಾಕಣಕ್ಕೆ ನಿಲ್ಲಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷದ ಮುಖಂಡರ ಸಹಯೋಗದಲ್ಲಿ ಈ ಅವಳಿ ಜಿಲ್ಲೆಯ ಜನಪ್ರತಿನಿಧಿ ಮತದಾರರ ಬೆಂಬಲ ಪಡೆದು ಆಯ್ಕೆಯಾಗಿ ಈ ಭಾಗದ ಸರ್ವೋತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ರಾಯಚೂರು ಕೊಪ್ಪಳ ವಿಧಾನ ಪರಿಷತ್ತಿನ ನಿಯೋಜಿತ ಬಿ.ಜೆ.ಪಿ ಅಭ್ಯರ್ಥಿ ಸಿ.ವಿ. ಚಂದ್ರಶೇಖರ ಹೇಳಿದರು.

Please follow and like us:
error