ರಾಕೇಶ್ ಕಾಂಬ್ಳೇಕರ್‌ಗೆ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ.

ಕೊಪ್ಪಳ
ಮಾ. ೦೫ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ
ಕೊಡಮಾಡುವ ೨೦೧೩-೧೪ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಕೊಪ್ಪಳ
ಜಿಲ್ಲೆಯ ರಾಕೇಶ್ ಕಾಂಬ್ಳೇಕರ್ ಆಯ್ಕೆಯಾಗಿದ್ದಾರೆ.
      ಸ್ವಾಮಿ ವಿವೇಕಾನಂದ
ರಾಜ್ಯ ಯುವ ಪ್ರಶಸ್ತಿಯ ವೈಯಕ್ತಿಕ ವಿಭಾಗಕ್ಕೆ ಕೊಪ್ಪಳದ ರಾಕೇಶ್ ಕೃಷ್ಣಾಜಿರಾವ್
ಕಾಂಬ್ಳೇಕರ್ ಆಯ್ಕೆಯಾಗಿದ್ದು, ಪ್ರಶಸ್ತಿಯು ೧೦ ಸಾವಿರ ರೂ.ಗಳ ನಗದು ಬಹುಮಾನ ಹಾಗೂ
ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.  ಮಾ. ೦೮ ರಿಂದ ೧೦ ರವರೆಗೆ ದಕ್ಷಿಣ ಕನ್ನಡ
ಜಿಲ್ಲೆ ಮೂಡಬಿದ್ರೆಯಲ್ಲಿ ಜರುಗುವ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ರಾಕೇಶ್
ಕಾಂಬ್ಳೇಕರ್ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕೊಪ್ಪಳದ ಯುವ ಸಬಲೀಕರಣ
ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Please follow and like us:
error