You are here
Home > Koppal News > ಜೂ. ೨೬ ರಂದು ಕೊಪ್ಪಳಕ್ಕೆ ಲೋಕಾಯುಕ್ತ ಎಸ್‌ಪಿ ಕುಂದು, ಕೊರತೆ ದೂರು ಆಹ್ವಾನ.

ಜೂ. ೨೬ ರಂದು ಕೊಪ್ಪಳಕ್ಕೆ ಲೋಕಾಯುಕ್ತ ಎಸ್‌ಪಿ ಕುಂದು, ಕೊರತೆ ದೂರು ಆಹ್ವಾನ.

ಕೊಪ್ಪಳ, ಜೂ.೨೫ – ಕೊಪ್ಪಳ-ರಾಯಚೂರು ಲೋಕಾಯುಕ್ತ ಎಸ್‌ಪಿ ವಿ.ವಿ. ಕುಂಬಾರ್ ಅವರು ಜೂ. ೨೬ ರಂದು ಕೊಪ್ಪಳಕ್ಕೆ ಭೇಟಿ ನೀಡಲಿದ್ದು, ಸಾರ್ವಜನಿಕರಿಂದ ಕುಂದುಕೊರತೆ, ದೂರುಗಳನ್ನು ಸ್ವೀಕರಿಸಿ, ಅಹವಾಲು ಆಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಲೋಕಾಯುಕ್ತ ಎಸ್‌ಪಿ ವಿ.ವಿ. ಕುಂಬಾರ್ ಅವರು ಅಂದು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ೨ ಗಂಟೆಯವರೆಗೆ ಸಾರ್ವಜನಿಕರಿಂದ ಕುಂದುಕೊರತೆ, ದೂರುಗಳನ್ನು ಸ್ವೀಕರಿಸಿ, ಅಹವಾಲು ಆಲಿಸುವರು.  ಲೋಕಾಯುಕ್ತ ಡಿವೈಎಸ್‌ಪಿ ವೆಂಕನಗೌಡ ಎನ್. ಪಾಟೀಲ್ ಅವರು ಸಹ ಉಪಸ್ಥಿತರಿರುವರು. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿ ನೀಡಿ, ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂ. ೧ ಮತ್ತು ೨ ಅನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: ೦೮೫೩೯-೨೨೦೨೦೦ ಅಥವಾ ೨೨೦೫೩೩ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Leave a Reply

Top