You are here
Home > Koppal News > ರೈತರ ಆತ್ಮಹತ್ಯೆ ನಿರಂತರವಾಗಿರುವದು ವಿಷಾದನೀಯ ಕೊಡತಗೇರಿ.

ರೈತರ ಆತ್ಮಹತ್ಯೆ ನಿರಂತರವಾಗಿರುವದು ವಿಷಾದನೀಯ ಕೊಡತಗೇರಿ.

ಯಲಬುರ್ಗಾ -15- ರಾಜ್ಯದಲ್ಲಿ ನಿತ್ಯ ರೈತರ ಆತ್ಮಹತ್ಯೆ ನೆಡೆಯುತ್ತಿರುವದು ವಿಷಾದನೀಯ ಎಂದು ಕರವೇ ಯುವಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಹೇಳಿದರು ಅವರು ಯಲಬುರ್ಗಾ ತಾಲೂಕ ಕೊಮಲಾಪುರ ಕರವೇ ಯುವಸೈನ್ಯ ಗ್ರಾಮ ಘಟಕ ಉದ್ಘಾಟಿಸಿ ಮತ್ತು ರಾಜ್ಯಪ್ರಶಸ್ತಿ ಪುರಸ್ಕೃತ ಎಚ್.ಎಸ್.ಪಾಟೀಲ ಸಾಹಿತಿ ಅಲಮಪ್ರಭು ಬೇಟದೂರ ಹಾಗೂ ಕರಿಗಾರ ಮತ್ತು ಕುಕನೂರ ಪಿಎಸ್‌ಐ ವಿಶ್ವನಾಥ ಹಿರೇಗೌಡ್ರ ರನ್ನು ಸನ್ಮಾನಿಸಿ ಮಾತನಾಡಿದ ಅವರು ರೈತರು ಉತ್ತಿ ಬೇಳೆದು ಎಲ್ಲರಿಗೂ ಅನ್ನ ನೀಡುವ ಅನ್ನದಾತ ಇಂದು ಸಾವಿಗೆ ತೆಲೆ ಭಾಗುತ್ತಿರುವದು ವಿಪರ್ಯಾಸ ಸರಕಾರ ಎಚ್ಚತ್ತುಕೊಂಡು ರೈತರಿಗೆ ಅನಉಕೂಲವಾಗುವ ಮತ್ತು ವೈಜ್ಞಾನಿಕ ಬೇಳೆಗಳ ಬಗ್ಗೆ ಅರಿವನ್ನು ಮೂಡಿಸುವದರ ಗಮನಹಸಿಬೇಕು ಎಂದ ಅವರು ನಮ್ಮ ಸಂಘಟನೆ ನಾಡು,ನುಡಿ,ನೆಲ,ಜಲ,ಸಂಸ್ಕೃತಿ ರಕ್ಷಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯ ಬದ್ಧವಾಗಿದೆ ಎಂದು ಹೇಳಿದರು. ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ಹಿರೇಗೌಡ್ರ ಮಾತನಾಡಿ ಇಂತಹ ಸಂಘಟನೆ ಸಮಾಜಮೂಖಿಯಾಗಿ ಕೆಲಸ ಮಾಡುತ್ತಿರುವದು ಶ್ಲಾಘನೀಯ ನಿಮ್ಮಗೆ ನಾವು ಯಾವುಗಲು ಪ್ರತ್ಸಾಹಿಸುತ್ತೇವೆ ಅದೇ ರೀತಿ ಗ್ರಾಮೀಣ ಭಾಗದಲ್ಲಿ ನೀವು ಮಕ್ಕಳಿಗೆಗಾಗಿ ಆಸ್ತಿ ಮಾಡದೇ ಅವ

ರಿಗೆ ಉತ್ತಮ ಶಿಕ್ಷಣ ನೀಡುವದರ ಮೂಲಕ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಎಂದು ಹೇಳಿದರು. ನಂತರ ಹಿರಿಯ ಸಾಹಿತಿ ಅಲ್ಲಮ ಪ್ರಭು ಬೇಟದೂರ ಮಾತನಾಡಿ ರೈತರು ರಾಸಾಯನಿಕ ಗೊಬ್ಬರ ಹೆಚ್ಚು ಬಳಸದೆ ಕೃಷಿಯನ್ನು ಮಾಡುವದರಿಂದ ಭೂಮಿಯ ಫಲವತ್ತತೆಯನ್ನು ಕಾಪಡುವದರ ಜೋತಗೆ ಉತ್ತಮ ಫಸಲು ತಗೆಯಬಹುದು ಕರವೇ ಯುವಸೈನ್ಯ ಇಂತಹ ಗ್ರಾಮದಲ್ಲಿ ಘಟಕ ಉದ್ಘಾಟನೆ ಮಾಡುವದರ ಮೂಲಕ ಗ್ರಾಮೀಣ ಪ್ರದೇಶದಲ್ಲಿಯು ಸಂಘಟನೆಯ ಬಗ್ಗೆ ಮತ್ತು ಕನ್ನಡ ಬಗ್ಗೆ ನಾಡಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಮ್ಮ ಕಾರ್ಯ ಮೆಚ್ಚುವತಂದ್ದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್,ಎಸ್,ಪಾಟೀಲ ವಹಿಸಿಕೊಂಡು ಮಾತನಾಡಿದರು . ಕಾರ್ಯಕ್ರಮದಲ್ಲಿ ಸಾಹತಿ ಕರಿಗಾರ ಜಿಲ್ಲಾಧ್ಯಕ್ಷ ಸಂತೋಷ ಕವಲೂರ,ಯಲಬುರ್ಗಾ ತಾಲೂಕ ಸಂಚಾಲಕ ಕೃಷ್ಣ ಅಬ್ಬಿಗೇರಿ,ತಾಲೂಕ ಅಧ್ಯಕ್ಷ ನಾಗರಾಜ ಹಾಲಳ್ಳಿ ,ಉಮೇಶ ಉಪ್ಪಾರ,ಮಾರುತಿ ಚಾಮಲಾಪೂರ,ಭರತ ಚಳಗೇರಿ,ನಾಗರಾಜ ಮಂಗಳೂರ.ತಳಕಲ್ಲ ಗ್ರಾ.ಪಂ ಅಧ್ಯಕ್ಷ  ಸೇರಿದಂತೆ ಉಪಸ್ಥಿತರಿದ್ದರು.

Leave a Reply

Top