ವಚನ ಶ್ರಾವಣ ಕಾರ್ಯಕ್ರಮ

ಲಿಂಗಾಯತ ಪ್ರಗತಿಶೀಲ ಸಂಘ, ಮಹೇಶ್ವರ ಸೇವಾ ಸಮಿತಿ, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳ ಕೊಪ್ಪಳ ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ ಕಾರ್ಯಕ್ರಮವನ್ನು ಕೊಪ್ಪಳ ನಗರದ ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದಲ್ಲಿ ದಿ. ೧೭-೦೮-೨೦೧೪ ರವಿವಾರ ಮತ್ತು ೧೮-೦೮-೨೦೧೪ ಸೋಮವಾರದಂದು ಸಂಜೆ ೬-೩೦ಕ್ಕೆ ಆಚರಿಸಲಾಗುವುದು.
ದಿ. ೧೭ ರಂದು ವಾಣಿಜ್ಯೋದ್ಯಮಿ ಶಾಂತಣ್ಣ ಮುದಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿ ಉಪನ್ಯಾಸಕರಾಗಿ ಪ್ರಕಾಶ ಅಸುಂಡಿ,  ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ ಗದಗ ಆಗಮಿಸಿ ಶರಣ ಜೇಡರ ದಾಸಿಮಯ್ಯ ಇವರ ಕುರಿತು ಉಪನ್ಯಾಸ ನೀಡುವರು. ದಾಸೋಹ ಸೇವೆಯನ್ನು ವೀರಣ್ಣ ನಾಗಪ್ಪ ಬಳ್ಳಾಬಳ್ಳಿ ವಹಿಸಿಕೊಂಡಿದ್ದಾರೆ.
ದಿ. ೧೮ ರಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಗಣಾವರಿ ವಹಿಸಲಿದ್ದಾರೆ. ಅತಿಥಿ ಉಪನ್ಯಾಸಕರಾಗಿ ಸಿ.ಎಚ್.ನಾರನಾಳ ಸಂಪಾದಕರು, ಸುದ್ದಿ ಚಿಂತನ ಪತ್ರಿಕೆ ಗಂಗಾವತಿ ಇವರ ಆಗಮಿಸಿ ಶರಣರ ಸಾಮಾಜಿಕ ಚಿಂತನೆ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ದಾಸೋಹ ಸೇವೆಯನ್ನು ಶ್ರೀಮತಿ ಶಾರಮ್ಮ ಎನ್. ಪಾವಲಿಶೆಟ್ಟರ ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ರಾಜೇಶ ಸಸಿಮಠ   ತಿಳಿಸಿದ್ದಾರೆ.
Please follow and like us:
error