ಜಾನಪದ ಲೋಕವನ್ನ ಪ್ರೀತಿಸಿ ಉಳಿಸಿ- ಕೂಡ್ಲೆಪ್ಪ ಗೊಂದಿ

 ಬೇವೂರು: ಇಂದಿನ ಮಕ್ಕಳು ಪಾಠದ ಜೊತೆಗೆ ಪಠ್ಯತರ ಚಟುವಟಿಕೆಗಳಾದ ಕಲೆ ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಅತ್ಯಂತಸಂತಸದ ಸಂಗತಿ. ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಮ್ಮ ಸಂಸ್ಥೆಯ ಸಹಯೋಗದಲ್ಲಿ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳು ಜರುಗಬೇಕು. ಮಕ್ಕಳು ತಮ್ಮ ಓದು ಬರಹದ ಜೊತೆಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಮ್ಮ ಸಾಹಿತ್ಯ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರೀತಿಸಿ ಗೌರವಿಸಬೇಕು. ಹಿರಿಯರು ಉಳಿಸಿ ಬೆಳಸಿದ ಈ ಜಾನಪದ ಸಾರಸತ್ವಲೋಕಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರತಿಯೊಬ್ಬ ಕನ್ನಡಿಗರು ಶ್ರಮಿಸಬೆಕಾಗಿದ್ದು ಆದ್ಯ ಕರ್ತವ್ಯ ಹಾಗೂ ಮುಂದಿನ ದಿನಮಾನಗಳಲ್ಲಿ ಪಾಠದ ಜೊತೆಗೆ ಸಾಂಸ್ಕೃತಿಕ ವಿಷಯವನ್ನು ಐಚ್ಚಿಕವಾಗಿ ಅಭ್ಯಾಸಿಸಿ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಬೆಕೆಂದು ಜಾನಪದ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕೂಡಲಸಂಗಮೇಶ್ವರ ವಿಧ್ಯಾಭಿವೃದ್ದಿ ಸಂಸ್ಥೆಯ ಅಧ್ಯಕ್ಷರಾದ  ಕೂಡ್ಲೆಪ್ಪ ಗೊಂದಿಯವರು ಮಾತನಾಡಿದರು.
ಬಸವರಾಜ ಮೇಟಿ ಪ್ರಾರ್ಥಿಸಿದರೆ, ಸುನಿತಾ ಜತ್ತಿ ಸ್ವಾಗತಿಸಿದರು. ಮಾರುತಿ ಗುರಿಕಾರ ನಿರೂಪಿಸಿದರೆ. ದ್ಯಾಮಣ್ಣ ಗೊಂದಿ ಪ್ರಾಸ್ಥವಿಕವಾಗಿ ಮಾತನಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾ.ಪಂ ಸದಸ್ಯೆಯಾದ  ಶ್ರೀಮತಿ ಚನ್ನವ್ವ ತಳವಾರ ವಹಿಸಿದ್ದರು.   ಯಮನಪ್ಪ ಗಡ್ಡದ,   ರುದ್ರಪ್ಪ ಕೊಳಜಿ ಹಾಗೂ ಮಾನಪ್ಪ ಬಡಿಗೇರ ವೇದಿಕೆಯಮೆಲಿದ್ದರು ಕೊನೆಗೆ ಸತ್ಯನಾರಾಯಣ ಸೋನಾರ ಕಾರ್ಯಕ್ರಮಕ್ಕೆ ವಂದಿಸಿದರು.

Leave a Reply