You are here
Home > Koppal News > ಶ್ರೀಗವಿಮಠದ ಜಾತ್ರೆಗೆ ದವಸ ದಾನ್ಯ ಅರ್ಪಣೆ

ಶ್ರೀಗವಿಮಠದ ಜಾತ್ರೆಗೆ ದವಸ ದಾನ್ಯ ಅರ್ಪಣೆ

ಮೈ ದುಂಬಿ ಕುಣಿದು ಕೋಲಾಟ ಪ್ರದರ್ಶಿದ ಗುಳೆ ಗ್ರಾಮದ ಗಾದಿಲಿಂಗೇಶ್ವರ ಯುವಕ ಸಂಘದ ಸದಸ್ಯರು
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ  ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದ ಭಕ್ತರು  ಹಾಗೂ ಗಾದಿಲಿಂಗೇಶ್ವರ ಯುವಕ ಸಂಘದ ಸದಸ್ಯರು ಭರ್ಜರಿ ವಾದ್ಯ ಮೇಳದೊಂದಿಗೆ ಮೈನವಿರೇಳಿಸುವ ಕೋಲಾಟವನ್ನು ಮಾರ್ಗದುದ್ದಗಲದಲ್ಲಿ  ಪ್ರದರ್ಶಿಸುತ್ತಾ ಜನರ ಮೆಚ್ಚುಗೆ ಪಡೆದುಕೊಂಡಿತು.  ನಂತರ ಶ್ರೀಗವಿಮಠಕ್ಕೆ ಬಂದು ಮಹಾದಾಸೋಹಕ್ಕೆ ೨೫೦೦ ರೊಟ್ಟಿ ಹಾಗೂ ದವಸ ದಾನ್ಯಗಳನ್ನು ಸಮರ್ಪಿಸಿದರು.  ಜಾನಪದ, ಆಧುನಿಕ,ಸಾಮಾಜಿಕ , ಭಕ್ತಿ ಮೊದಲಾದ ಗೀತೆಗಳಿಗೆ  ಕೋಲಾಟ ಹಾಕುತ್ತಾ ನೋಡುಗರ ಗಮನ ಸೆಳೆಯಿತು. ಪೂಜ್ಯ ಶ್ರೀಗವಿಸಿದ್ಧೇಶ್ವರ  ಮಹಾ ಸ್ವಾಮಿಗಳು ಇವರ  ಕೋಲಾಟ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು. 
ಶ್ರೀಗವಿಮಠದ ಜಾತ್ರೆಗೆ ದವಸ ದಾನ್ಯ ಅರ್ಪಣೆ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಗೆ ಹಿರೇಮನ್ನಾಪುರ ಗ್ರಾಮದ ಭಕ್ತರಿಂದ  ೬೦೦೦,  ಟಣಕಣಕಲ್ ಗ್ರಾಮದಿಂದ ೨೦೦೦, ಹುಲಿಹೈದರ್ ಗ್ರಾಮದಿಂದ ೫೧೦೦ ರೊಟಿ, ಹಾಗೂ ದವಸದಾನ್ಯಗಳು ಮಹಾದಾಸೋಹಕ್ಕೆ ಸಮರ್ಪಣೆಯಾದವು. ದಾನಿಗಳಿಗೆಲ್ಲ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿಗಳು ಆಶಿರ್ವದಿಸಿದ್ದಾರೆ.

Leave a Reply

Top