ರಾಜ್ಯ ಬಜೆಟ್‌ನ ಮುಖ್ಯಾಂಶಗಳು:

ರಾಜ್ಯ ಬಜೆಟ್ ಮಂಡನೆ

 ಸಂಪೂರ್ಣ ಬಜೆಟ್ ವಿವರ
ಸಂಪೂರ್ಣ ಬಜೆಟ್ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು, ಮಾ. 13: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2015-16ನೆ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ.

* ಯುವ ಕ್ರೀಡಾ ಮಿತ್ರ ಅಡಿಯಲ್ಲಿ ಕ್ರೀಡಾ ಶಾಲೆ/ ನಿಲಯಗಳಿಗೆ ವಾರ್ಷಿಕ 25 ಸಾವಿರ ರೂ.
* 50 ಗರಡಿ ಮನೆಗಳಿಗೆ ತಲಾ 5 ಲಕ್ಷದಂತೆ 2.5 ಕೋಟಿ ರೂ. ಅನುದಾನ
* ಜನರಲ್​ ತಿಮ್ಮಯ್ಯ ರಾಷ್ಟ್ರೀಯ ವತಿಯಿಂದ ಯುವ ಜನರಿಗೆ ಸಾಹಸ ಕ್ರೀಡಾ ತರಬೇತಿ
* “ಯುವಚೇತನ” ಕಾರ್ಯಕ್ರಮದಡಿ ಉದ್ಯೋಗ ಸೃಷ್ಟಿಗೆ 1 ಲಕ್ಷ ರೂ. ಪ್ರೋತ್ಸಾಹ ಧನ
* ಕ್ರೀಡಾ ಮನೋ ವಿಜ್ಞಾನ ವಿಭಾಗ ಸ್ಥಾಪನೆಗೆ 1 ಕೋಟಿ ರೂ. ಅನುದಾನ
* ಯುವ ಕ್ರೀಡಾ ಪಟುಗಳ ಪ್ರೋತ್ಸಾಹಕ್ಕೆ ಫೆಲೋಷಿಫ್ ಆಯ್ಕೆ ಪ್ರಕ್ರಿಯೆ
* ಎನ್ನೆಸ್ಸೆಸ್‌​ ವತಿಯಿಂದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿಗೆ 1 ಕೋಟಿ ರೂ.
* ಕ್ರೀಡಾ ಮತ್ತು ಯೋಜನಾ ಸೇವಾ ಇಲಾಖೆಗೆ ಒಟ್ಟು 147 ಕೋಟಿ ರೂ. ಅನುದಾನ
* ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಇ- ಆಸ್ಪತ್ರೆ ತಂತ್ರಾಂಶ ಅನುಷ್ಠಾನ
* ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ
* ಸಾಂಕ್ರಾಮಿಕ ರೋಗಗಳ ಪತ್ತೆಗೆ ರಾಜ್ಯದ 5ಕಡೆ ಲ್ಯಾಬೋರೇಟರಿಗಳ ಸ್ಥಾಪನೆ
* ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ, ಬಾಗಲಕೋಟೆ, ಮೈಸೂರಿನಲ್ಲಿ ಪ್ರಯೋಗಾಲಯ
* ಹೆಣ್ಣು ಭ್ರೂಣ ಹತ್ಯೆ ತಡೆಗೆ ಕ್ರಮ
* ಆರೋಗ್ಯ ಸಹಾಯವಾಣಿ (104) ಫೋನ್​ ಡಾಕ್ಟರ್​ ಕಾರ್ಯಕ್ರಮ
* ಎಲ್ಲಾ ಜಿಲ್ಲೆಗಳಲ್ಲಿ ದಂತ ಪ್ರಯೋಗಾಲಯ ಸ್ಥಾಪನೆ
* ಮಂಗಳೂರ, ಗದಗದಲ್ಲಿ ಸಂಯುಕ್ತ್​ ಆಯುಷ್​ ಆಸ್ಪತ್ರೆ ಸ್ಥಾಪನೆ
* ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವಧನ ಹೆಚ್ಚಳ
* ಕಾರ್ಯಕರ್ತೆಯರಿಗೆ 500, ಸಹಾಯಕರಿಗೆ 250ರೂ. ಹೆಚ್ಚಳ
* ಆಸಿಡ್​ ದಾಳಿಗೊಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ
* ಅಂಗನವಾಡಿ ಕೇಂದ್ರಗಳಲ್ಲಿ ಸೋಲಾರ್​ ದೀಪ, ಫ್ಯಾನ್​ಗಳ ಅಳವಡಿಕೆ
* ಹೆಣ್ಣು ಮಕ್ಕಳ ಶೋಷಣೆ ತಡೆಗೆ ಹೆಣ್ಣು ಮಕ್ಕಳ ನೀತಿ
* ಮಾಜಿ ದೇವದಾಸಿಯರಿಗೆ ಸಹಾಯಧನ
* ಮಾಜಿ ದೇವದಾಸಿಯರ ಮಾಸಾಶನ 100ರೂ. ಗೆ ಹೆಚ್ಚಳ
* ವಸತಿ ರಹಿತ ಮಾಜಿ ದೇವದಾಸಿಯರಿಗೆ ವಸತಿ ಸೌಲಭ್ಯ
* ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲದ ಮೊತ್ತ ಹೆಚ್ಚಳ
* 1 ಲಕ್ಷ ರೂ.ಗಳಿಂದ ಎರಡು ಲಕ್ಷ ರೂ.ಗೆ ಹೆಚ್ಚಳ
* ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರೋತ್ಸಾಹ ಧನ
* ವಿಜಯಪುರ ಮಹಿಳಾ ಸಾಧನಾಶ್ರಮ ಕಟ್ಟಡ ನಿರ್ಮಾಣಕ್ಕೆ 2 ಕೋಟಿ
* ನಿಡುಮಾಮಿಡಿ ಮಠದ ಆಶ್ರಯದಲ್ಲಿ ಸ್ಥಾಪಿಸಿರುವ ಮಹಿಳಾ ಸಾಧನಾಶ್ರಮ
* ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಯೋಜನೆ ವಿಸ್ತರಣೆ
* ಆಧಾರ್​ಯೋಜನೆಯಡಿ 5,200 ವಿಕಲಚೇತನರಿಗೆ ನೀಡಿದ್ದ ಸಾಲ ಮನ್ನ
* ಶ್ರವಣದೋಷ ಶಾಲೆಗಳಲ್ಲಿ ಉಪಗ್ರಹ ಆಧಾರಿತ ಶಿಕ್ಷಣ
* ವಿಕಲಚೇತನ ಸಹಾಯವಾಣಿ ಕೇಂದ್ರ ಸ್ಥಾಪನೆ
* ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ದರ ಶೇ.1ರಷ್ಟು ಏರಿಕೆ
*ತಂಬಾಕು ಉತ್ಪನ್ನಗಳ ಮೇಲಿನ ವ್ಯಾಟ್ ಶೇ.20ಕ್ಕೆ ಏರಿಕೆ
* ಅಬಕಾರಿ ಸುಂಕ ಶೇ.6ರಿಂದ ಶೇ. 20ಕ್ಕೆ ಏರಿಕೆ
* ಅಬಕಾರಿಯಿಂದಲೇ 15,200 ಕೋಟಿ ರಾಜಸ್ವ ಸಂಗ್ರಹ ಗುರಿ
* ಆಸ್ತಿ ಖರೀದಿ ಸರಳೀಕರಣ ಮೂಲಕ ತೆರಿಗೆ ಸಂಗ್ರಹ ಹೆಚ್ಚಳ ಗುರಿ
* ಆಸ್ತಿ ಖರೀದಿ ಸರಳೀಕರಣದಿಂದ ಭ್ರಷ್ಟಾಚಾರಕ್ಕೂ ಕಡಿವಾಣ
* ಶಾಲಾ ಕಾಲೇಜುಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ,
* ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ
* ಟೆಲಿ ಶಿಕ್ಷಣ ಕಾರ್ಯಕ್ರಮ ಸಾವಿರ ಶಾಲೆಗಳಿಗೆ ವಿಸ್ತರಣೆ
* “ಶಾಲೆಗಾಗಿ ನಾವು ನೀವು” ಕಾರ್ಯಕ್ರಮ ಅನುಷ್ಠಾನ
* ಖಾಸಗಿ ಸಹಭಾಗಿತ್ವದಲ್ಲಿ ಶೈಕ್ಷಣಿಕ ಅಭಿವೃದ್ಧಿ  ಕಾರ್ಯಕ್ರಮ
* ಶಾಲಾ ಕಾಲೇಜುಗಳಲ್ಲಿ,ಸೋಲಾರ್​ ಎಜುಕೇಷನಲ್ ಕಿಟ್ ಅಳವಡಿಕೆ
* ಕಿಟ್ ಅಳವಡಿಸಿದ ಶಾಲೆಗಳು ಗ್ರೀನ್​ ಪವರ್​ ಶಾಲೆಗಳೆಂದು ಘೋಷಣೆ
* ಗ್ರಾಮೀಣ ಭಾಗದ ಮಕ್ಕಳಿಗಾಗಿ ಸ್ಪರ್ಧಾಕಲಿ ಕಾರ್ಯಕ್ರಮ ಅನುಷ್ಠಾನ
* ರಾಷ್ಟ್ರೀಯ ಅಂತರಾಷ್ಟ್ರಿಯ ಪರೀಕ್ಷೆಗಳಲ್ಲಿ ಪಾಲ್ಗೋಳ್ಳಲು ಉತ್ತೆಜನ
* ಚಿಕ್ಕಬಳ್ಳಾಪುರ ಸರಕಾ ಬಿಎಡ್​ ಕಾಲೇಜು ಉನ್ನತೀಕರಣ
* ವಸತಿರಹಿತ ಎಸ್ಸಿ/ ಎಸ್ಟಿ ಬಡಕುಟುಂಬಗಳಿಗೆ ಮನೆ
* ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷ ಮನೆ , ನಗರ ಪ್ರದೇಶಗಳಲ್ಲಿ 50 ಸಾವಿರ ಮನೆಗಳ ನಿರ್ಮಾಣ
* ನಿವೇಶನ ರಹಿತ ಎಸ್ಸಿ/ ಎಸ್ಟಿ ಬಡಕುಟುಂಬಗಳಿಗೆ ನಿವೇಶನ
* ಗ್ರಾಮೀಣ ಪ್ರದೇಶದಲ್ಲಿ 35 ಸಾವಿರ ನಿವೇಶನ
* ನಗರ ಪ್ರದೇಶಗಳಲ್ಲಿ  15 ಸಾವಿರ ನಿವೇಶನಗಳ ಹಂಚಿಕೆ
* ಸ್ಮಶಾನ ಭೂಮಿ ಇಲ್ಲದ ಕಡೆ ಹಂತ ಹಂತವಾಗಿ ಹಂಚಿಕೆ
* ಗ್ರಾಮಾಂತರ ಪ್ರದೇಶದ ಪ.ಜಾತಿ, ಪಂಗಡದವರಿಗೆ ಅನ್ವಯ
* ಪ.ಜಾತಿ, ಪಂಗಡದವರ ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ಒತ್ತು
* ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ
* ಸರಳ ವಿವಾಹ ಯೋಜನೆ ಜಾರಿ
* ಜೀವನೋಪಾಯಕ್ಕೆ  50 ಸಾವಿರ ರೂ. ನೆರವು
* ಸಮಾಜ ಕಲ್ಯಾಣ ಇಲಾಖೆಗೆ 4584 ಕೋಟಿ ರೂ. ಅನುದಾನ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ – 4232 ಕೋಟಿ ರೂ.
* ಪಶು ಸಂಗೋಪನೆಗೆ – 1882 ಕೋಟಿ ರೂ.
* ತೋಟಗಾರಿಕೆ ವಲಯಕ್ಕೆ – 760 ಕೋಟಿ ರೂ.
* ರೇಷ್ಮೆ ಇಲಾಖೆಗೆ – 186 ಕೋಟಿ ರೂ.
* ಮೀನುಗಾರಿಕೆ ಇಲಾಖೆಗೆ – 297 ಕೋಟಿ ರೂ.
* ಸಹಕಾರ ಇಲಾಖೆಗೆ – 1323 ಕೋಟಿ ರೂ.
* ಜಲಸಂಪನ್ಮೂಲ ಇಲಾಖೆ – 12,956 ಕೋಟಿ ರೂ.
* ಅರಣ್ಯ ಇಲಾಖೆಗೆ – 1757 ಕೋಟಿ
* ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ – 16,204 ಕೋಟಿ
* ಉನ್ನತ ಶಿಕ್ಷಣ ಇಲಾಖೆ – 3896 ಕೋಟಿ
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ – 6107 ಕೋಟಿ
* ವಸತಿ ಇಲಾಖೆಗೆ – 3819 ಕೋಟಿ
* ಕಾರ್ಮಿಕ ಮತ್ತು ಉದ್ಯೋಗ – 852 ಕೋಟಿ
* ಕನ್ನಡ ಮತ್ತು ಸಂಸ್ಕೃತಿ – 303 ಕೋಟಿ
* ಕ್ರೀಡೆ ಮತ್ತು ಯುವಜನ – 147 ಕೋಟಿ
* ಆಹಾರ ಮತ್ತು ನಾಗರಿಕ ಸರಬರಾಜು – 2120 ಕೋಟಿ
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – 9728 ಕೋಟಿ
* ಯೋಜನೆ ಮತ್ತು ಪ್ರದೇಶಾಭಿವೃದ್ಧಿ – 1,761 ಕೋಟಿ
* ನಗರಾಭಿವೃದ್ಧಿ – 50 ಕೋಟಿ ರೂ.
* ಬಿಬಿಎಂಪಿ, ಬಿಡಿಎ, ಮೆಟ್ರೋ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ- 4,770 ಕೋಟಿ ರೂ.

Please follow and like us:
error

Related posts

Leave a Comment