ಜಾತಿ ಜನಗಣತಿಯಲ್ಲಿ ಭೋವಿ-ವಡ್ಡರ್ ಎಂದು ನಮೂದಿಸಿ-ಸಿದ್ಧರಾಮೇಶ್ವರ ಶ್ರೀಗಳು

ಕೊಪ್ಪಳ: ಇದೇ ಎಪ್ರೀಲ್ ೧೧ ರಿಂದ ಆರಂಭವಾಗುವ ಜಾತಿ ಜನಗಣತಿಯಲ್ಲಿ ಭೋವಿ, ವಡ್ಡರ್ ಎಂದು ನಮೂದಿಸಿ ಬೇರೆ ಯಾವುದೇ ಪದ ಚಿಹ್ನೆಗಳನ್ನು ತುಂಬಿಸಬೇಡಿ ಎಂದು ಬಾಗಲಕೋಟೆ-ಚಿತ್ರದುರ್ಗದ ಭೋವಿಗುರುಪೀಠದ ಅಧ್ಯಕ್ಷರಾದ ಶ್ರೀಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ಕೋರಿದ್ದಾರೆ. 
ಅವರು ಕೊಪ್ಪಳ ಜಿಲ್ಲೆಯಲ್ಲಿ ಜಾತಿ ಜನಗಣತಿಯ ಜಾಗೃತಿಯಾತ್ರೆ ಕೈಗೊಂಡು ಭಾರತ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕರ್ನಾಟಕ ಸರ್ಕಾರವು ದಿನಾಂಕ: ೧೧ ಏಪ್ರಿಲ್ ೨೦೧೫ ರಿಂದ ೩೦ ಏಪ್ರಿಲ್ ೨೦೧೫ ರವರೆಗೆ ಜಾತಿ ಜನಗಣತಿ ನಡೆಸುತ್ತಿರುವುದು ಶ್ಲಾಘನೀಯ. 
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳಿಗೆ ಮುಖ್ಯವಾಗಿ ಜಾತಿಯನ್ನು ಆಧಾರವಾಗಿ ಪರಿಗಣಿಸುತ್ತಿರುವುದು ನಮಗೆ ತಿಳಿದಿರುವ ವಿಷಯವಾಗಿದೆ. ಭಾರತದಲ್ಲಿ ಮೀಸಲಾತಿ ಜಾರಿಯಾದ ದಿನದಿಂದ ಇಂದಿಗೆ ಸುಮಾರು ೨೫% ರಷ್ಟು ಭೋವಿ ಸಮುದಾಯ ಅಭಿವೃದ್ದಿ ಹೊಂದಬೇಕಾಗಿತ್ತು ಆದರೆ ಇದುವರೆಗೂ ಆಗಿರುವ ಪ್ರಯೋಜನ ಕೇವಲ ಶೇ೪% ಮಾತ್ರ ಎಂಬುವುದು ಶೋಚನೀಯ ಸಂಗತಿಯಾಗಿದೆ. ಜಾತಿಗೆ ಅನುಗುಣವಾಗಿ ಮೀಸಲಾತಿ ಮತ್ತು ಇತರೆ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಯಂತ್ರ ನೋಡಿಕೊಳ್ಳಬೇಕಾಗಿರುತ್ತದೆ. ಅನುಸೂಚಿತ ಜಾತಿಯಲ್ಲಿ ಸುಮಾರು ಶೇ೧೧% ರಷ್ಟು ಇರುವ ಭೋವಿ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳಲ್ಲಿ ಅತ್ಯಂತ ಕಡಿಮೆಯಾಗಿದ್ದು ಅದನ್ನು ಮುಂದಿನ ದಿನಗಳಲ್ಲಿ ಪಡೆಯುವಂತಹ ಕೆಲಸವಾಗಬೇಕಾಗಿದೆ. ಅದನ್ನು ಆಳುವಂತಹ ಸರ್ಕಾರಗಳು ಕಲ್ಪಿಸಿಕೊಡಬೇಕಾಗಿದೆ.ಭೋವಿ ಸಮಾಜದ ವಲಸೆ ಹೋಗಿರುವಂತಹ ಕುಟುಂಬಗಳನ್ನು ಆಯಾ ಗ್ರಾಮದ ಮುಖಂಡರು ಜನಗಣತಿ ಸಂದರ್ಭದಲ್ಲಿ ಕರೆಯಿಸಿಕೊಂಡು ತಪ್ಪದೇ ಗಣತಿಯಲ್ಲಿ ಭಾಗವಹಿಸಿ ಕುಟುಂಬದ ಸ್ಥಿತಿಗತಿಯನ್ನು ಗಣತಿದಾರರ ಮುಂದೆ ವಿವರಿಸಲು ಸಹಕಾರಿಯಾಗಬೇಕಾಗಿದೆ.
ಈ ನಿಟ್ಟಿನಲ್ಲಿ ಭೋವಿ ಸಮಾಜವನ್ನು ಸರ್ಕಾರವು ಗುರುತಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿ ಕೈಪಿಡಿಯ ಪ್ರಕಾರ  ಭೋವಿ ಮತ್ತು ವಡ್ಡರ್, ಎಂಬುದರ ಸಂಕೇತವಾಗಿ ಸಮಾಜದ ಬಾಂಧವರು ಜಾತಿ ಜನಗಣತಿಯಲ್ಲಿ  ಎಂದು ನಮೂದಿಸಬೇಕಾಗಿದೆ.  ವೃತ್ತಿಸೂಚಕವಾದ ಬಂಡಿ ವಡ್ಡರ್, ಗಿರಣಿ ವಡ್ಡರ್, ಪಾತ್ರೋಟಿ, ಕಲ್ಲು ವಡ್ಡರ್, ಮಣ್ಣು ವಡ್ಡರ್, ಭಾವಿ ವಡ್ಡರ್, ಉಪ್ಪು ವಡ್ಡರ್ ಮತ್ತು ತಾನಕಗಳು ಹಾಗೂ ಬೆಡಗುಗಳನ್ನು ನಮೂದಿಸಬಾರದೆಂದು ಎಂದು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಸತ್ಯಪ್ಪ ಭೋವಿ ಗೌರಿಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೋವಿ, ಹನುಮಂತಪ್ಪ ಗಂಗಾವತಿ, ಯಮನೂರಪ್ಪ ಭೋವಿ, ಸೂಚಪ್ಪ ಭೋವಿ, ನಾಗಪ್ಪ ಚಿಕ್ಕೋಪ, ರಮೇಶ ಯರಡೋಣಿ, ಮಾಸ್ತಿ ಭೋವಿ,ಸುರೇಶ ಕಿನ್ನಾಳ, ಗಾಳೆಪ್ಪ ಗಂಗಾವತಿ, ಭೀಮಜ್ಜ ಭೈರನಾಯಕನಹಳ್ಳಿ,

Related posts

Leave a Comment