ಶಿಕ್ಷಣದಿಂದ ಸಮಾಜದ ಅಭಿವೃದ್ದಿ ಸಾಧ್ಯ : ಚಂದ್ರಶೇಖರ ಕಂಬಾರ

 ವಿವಿಧ ಕ್ಷೇತ್ರದಲ್ಲಿ ಸಾಧಿಸಬೇಕಾದರೆ ಮೂಲಭೂತವಾಗಿ ಶಿಕ್ಷಣದ ಅವಶ್ಯವಿದೆ. ಪ್ರತಿಯೊಬ್ಬರು ಕೂಡ ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ದಿ ಸಾಧ್ಯವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಚಂದ್ರಶೇಖರ ಕಂಬಾರ ಹೇಳಿದರು.
ಅವರು ನಗರದ ಶ್ರೀ ಸಿರಸಪಯ್ಯಸ್ವಾಮಿ ಮಠಕ್ಕೆ ಹಾಗೂ ವಿಶ್ವಕರ್ಮ ವಿದ್ಯಾರ್ಥಿಗಳ ನಿಲಯಕ್ಕೆ   ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಬೇಟಿ ನೀಡಿ ವಸತಿ ನಿಲಯವನ್ನು ಪರಿಶೀಲಿಸಿದ ನಂತರ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ವಿಶ್ವಕರ್ಮ ಸಮಾಜವು ಇತರೆ ಸಮಾಜದಂತೆ ಮುಂದುವರೆಯಲು ಪ್ರತಿಯೊಬ್ಬರು ಶಿಕ್ಷಣ ಪಡೆಯುವುದು ಅವಶ್ಯವಾಗಿದೆ. ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಏನಾದರು ಬದಲಾವಣೆಯನ್ನು ತರಲು ಸಾಧ್ಯ ಜೊತೆಗೆ ಕೊಪ್ಪಳ ಜಿಲ್ಲೆಯು ಪುರಾತನ ಕಾಲದಿಂದ ಬಹಳ ವಿಶೇಷತೆ ಪಡೆದ ಜಿಲ್ಲೆಯಾಗಿದ್ದು, ವಿಶೇಷವಾಗಿ ಶಿರಸಪ್ಪಯ್ಯನ ಮಠ ಬಹಳ ಅದ್ಬುತವಾದುದ್ದು ಕಾರಣ ಇಲ್ಲಿ ನಾನು ಬೇಟಿ ನೀಡಿದ್ದು ಆನಂದಮಾಯವಾಗಿದೆ, ಸಮಾಜದ ವ್ಯಕ್ತಿಯೊಬ್ಬರಲ್ಲಿ ನಾನೊಬ್ಬ. ನಾನೋಮ್ಮೆ ದ.ರಾ. ಬೆಂದ್ರೆಯವರನ್ನು ಬೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತ, ಕಂಬಾರ ಎಂದರೆ ನನಗೆ ಬಹಳ ಮುಜುಗರವಾಗುತ್ತದೆ ಕಾರಣ ಅದನ್ನು ಬದಲಾಯಿಸಿ ಚಂದ್ರಶೇಖರ ಪಾಟೀಲ ಎಂದು ಕರೆಯುತ್ತೆನೆ ಅಂತಾ ಹೇಳಿದಾಗ ಅದಕ್ಕೆ ನಾನು ನಿಮಗೆ ಬೇಂದ್ರೆಯೆಂದರೆ (ಚಿಪಿಗೇರಿ) ಅಂತ ಆಗುತ್ತೆ ಆಗ ನಾನು ನಿಮಗೆ ದ.ರಾ ಚೆಪ್ಪೆಗೇರ ಅಂತಾ ಅನ್ನಬಹುದೆ ಅಂತಾ ಹೇಳುತ್ತಾ ನನಗೆ ಕಂಬಾರ ಅಂದರೆ ನನಗೆ ಹೆಮ್ಮೆ ಕಾರಣ ನನಗೆ ಅದೇ ಹೆಸರು ಇರಲಿ ಅಂತಾ ಹೇಳಿದರು. 

ಜಿಲ್ಲೆ ಹಾಗೂ ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಿರಸಪ್ಪಯ್ಯ ಮಠದ ಸ್ವಾಮಿಗಳಾದ ಶ್ರೀ ಶಿರಸಪ್ಪಯ್ಯ ಮಹಾಸ್ವಾಮಿಗಳು ಹಾಗೂ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಶೇಖರಪ್ಪ, ಗೌರವಾಧ್ಯಕ್ಷ ರುದ್ರಪ್ಪ ಬಡಿಗೇರ, ಖಜಾಂಚಿಯಾದ ದೇವಪ್ಪ ಕಮ್ಮಾರ, ನಿರ್ದೆಶಕರಾದ ಕಾಳಪ್ಪ ಡಂಬ್ರಳ್ಳಿ, ಎಚ್ಚರಸ್ವಾಮಿ, ಮನೋಹರಶಿಲ್ಪಿ, ಕುಬೇರ ಹನಕುಂಟಿ, ಹಗೂ ವಿದ್ಯಾರ್ಥಿಗಳ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.   

Leave a Reply