ಜಿಲ್ಲಾ ವಾಲ್ಮೀಕಿ ಸಂಘಕ್ಕೆ ವಾಲ್ಮೀಕಿ ರಾಜಿನಾಮೆ.

ಕೊಪ್ಪಳ ಸೆ.-17- ಕೊಪ್ಪಳ ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಮುಖಂಡ, ನಿವೃತ್ತ ಅಧಿಕಾರಿ ಎಂ. ಹೆಚ್. ವಾಲ್ಮೀಕಿ ರಾಜಿನಾಮೆ ಸಲ್ಲಿಸಿದ್ದಾರೆ. ವಯಕ್ತಿಕ ಕಾರಣಕ್ಕೆ ಸಂಘದ ಕೆಲಸಗಳನ್ನು ಕ್ಷಿಪ್ರವಾಗಿ ಮಾಡಲು ಸಾಧ್ಯವಾಗದ ಕಾರಣ ಸಂಘದ ಬೆಳವಣಿಗೆ ಹಾಗೂ ಸಮಾಜದ ಸಂಘಟನೆಯ ಹಿತದೃಷ್ಟಿಯಿಂದ ರಾಜಿನಾಮೆ ಸಲ್ಲಿಸಿರುವ ಅವರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕರವರಿಗೆ ರಾಜಿನಾಮೆ ಸಲ್ಲಿಸಿದ್ದು ಶೀಘ್ರವೇ ಸಂಘ ಮುಂದಿನ ನಿರ್ಣಯ ಕೈಗೊಳ್ಳಲಿದೆ ಪದಾಧಿಕಾರಿಗಳ ಸಭೆ ಕರೆದು ಸಂಘದ ಕಾರ್ಯಗಳನ್ನು ಮಾಡಲಾಗುವದು ಎಂದು ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.

Leave a Reply