ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು- ಎಚ್.ಜಿ.ರಾಮುಲು

ಗಂಗಾವತಿ : ಇಂದು ಉದ್ಯಮಗಳಲ್ಲಿ ಅತೀ ದೊಡ್ಡ ಸಮಸ್ಯೆಯೆಂದರೆ ಕಾರ್ಮಿಕರದು. ಇದರಿಂದ ಪಾರಾಗಲು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಎಚ್.ಜಿ.ರಾಮುಲು ಹೇಳಿದರು. ಅವರು ನಗರದಲ್ಲಿ ರಾಜ್ಯ ಅಕ್ಕಿ ಗಿರಣಿ ಮಾಲಿಕರ ಸಂಘ ಗಂಗಾವತಿ ತಾಲೂಕ ಘಟಕದ ಆಶ್ರಯದಲ್ಲಿ ರೈಸ್ ಮಿಲ್ಲರ್ಸ್ ಅಸೋಷಿಯೇನಷ್ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಗಂಗಾವತಿ ತಾಲೂಕ ರೈಸ್ ಮಿಲ್ಲರ್ಸ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಸೂರಿಬಾಬು ಅವರನ್ನು ಸನ್ಮಾನಿಸಲಾಯಿತು. ರೈಸ್ ಮಿಲ್ಲರ್ಸ್ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಉದ್ಯಮಿ ಕಲ್ಯಾಣಂ ನಾಗೇಶ್ವರಾವ್, ಎಪಿಎಂಸಿ ಅಧ್ಯಕ್ಷ ಅಮರೇಗೌಡ, ಸುಂಕದ ಲಿಂಗಪ್ಪ ಹಾಗೂ ರೈಸ್ ಮಿಲ್ ಮಾಲಿಕರು, ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply