fbpx

ದಲಿತರ ಓಟ ಬ್ಯಾಂಕ ಮಾಡಿಕೊಂಡ ಕಾಂಗ್ರೆಸ್

ಕೊಪ್ಪಳ : ೬ ದಶ

ಕಗಳನ್ನು ಕಳೆದರೂ ಯಾವುದೇ ಅಭಿವೃದ್ದಿ ಪತ ಕಾಣದೇ ಸರಕಾರದ ಸೌಲಭ್ಯಗಳಿಗೆ ಮರಿಚಿಕೆಯಾಗಿ ಬದುಕುತ್ತಿರುವ ದಲಿತರನ್ನು ಓಟು ಬ್ಯಾಂಕ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಆದರೆ ಬಿಜೆಪಿ ಸರಕಾರವಿದ್ದಾಗ ಪ.ಜಾತಿ, ಪ. ಪಂಗಡಗಳ ಕಾಲೋನಿಗಳಲ್ಲಿ ಸಿಸಿ ರಸ್ತೆ ಸಮುದಾಯ ಭವನ, ಅಂಬೇಡ್ಕರ ಭವನ, ಜಗಜೀವನ್‌ರಾವ್ ಭವನ, ಹಾಗೂ ಗಂಗಾ ಕಲ್ಯಾಣ ಇತರ ಯೋಜನೆಗಳನ್ನು ಹೀಗೆ ಅನೇಕ ಸೌಲತ್ತುಗಳನ್ನು ನೀಡುತ್ತಾ ದಲಿತರ ಅಭಿವೃದ್ದಿಗೋಸ್ಕರ ಶ್ರಮಿಸಿದ ಬಿಜೆಪಿ ಸರಕಾರ ಅದಕ್ಕೋಸ್ಕರ ನರೇದ್ರ ಮೋದಿ ಪ್ರದಾನಿಯಾದರೆ ಇನ್ನಷ್ಟು ದಲಿತರ ಅಭಿವೃದ್ಧಿಗೆ ಬಲಗೊಳಿಸಿದಂತಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ ಅವರು ಎಸ್.ಸಿ ಮೋರ್ಚ ಜಿಲ್ಲಾ ಕಾರ್ಯಕಾರಿಣಿ ಹಾಗೂ ತುಮಕೂರು ಸಮಾವೇಶದ ಪೂರ್ವಬಾವಿ ಸಿದ್ದತೆ ಸಂದರ್ಭದಲ್ಲಿ ಮಾತನಾಡಿದರು.

ಈ ಸಂದರ್ಬದಲ್ಲಿ ಎಸ್.ಸಿ ಮೊರ್ಚ ರಾಜ್ಯ ಕಾರ್ಯದರ್ಶಿಯಾದ ಹೆಚ್ ಹನಮಂತಪ್ಪ, ಸ್ಥಳಿಯರಾದ ಅಪ್ಪಣ್ಣ ಪದಕಿ, ಶಾಮ್ಲ ಕೋನಾಪೂರ, ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷರಾದ ಮಾರೇಶ ಮುಷ್ಟೂರ, ಶರಣಪ್ಪ ಬೊದೂರ, ಬಾಳಪ್ಪ ಬೇವಿನಕಟ್ಟಿ ಕುಷ್ಟಗಿ, ಮಂಜುನಾಥ ಶಿವಪುರ, ಗ್ರಾ. ಪಂ. ಅಧ್ಯಕ್ಷರು, ಇನ್ನಿತರರು ಉಪಸ್ಥಿತರಿದ್ದರು. 
ಕಾರ್ಯನಿರೂಪಣೆಯನ್ನು ನಿಂಗಜ್ಜ ಬಂಡಿಹರಲಾಪೂರ ನೆರವೇರಿಸಿದರು.
Please follow and like us:
error

Leave a Reply

error: Content is protected !!