೮ನೇ ದಿನಕ್ಕೆ ಉಚಿತ ಕರಾಟೆ ತರಬೇತಿ

 ಕೊಪ್ಪಳ  : ನಗರದ ಕರಾಟೆ ಸಂಸ್ಥೆಯಾದ “ಝೆನ್ ಕರಾಟೆ ಐಕೀ ಡೂ” (Zಇಓ ಏಂಖಂಖಿಇ IಏIಇ ಆಔ) ಸಂಸ್ಥೆಯಿಂದ  ನಡೆದಿರುವ ” ೧೦ ದಿನದ ಉಚಿತ ಕರಾಟೆ ತರಬೇತಿ ಶಿಬಿರ” ವು ಯಶಸ್ವಿಯಾಗಿ ನಡೆಯುತ್ತಿದೆ.   ಸರಕಾರಿ ಶಾಸಕರ ಮಾದರಿಯ ಹಿರಿಯ ಪ್ರಥಮಿಕ ಶಾಲೆ ಆವರಣ, ಸ್ಟೇಷನ್ ರಸ್ತೆ ಯಲ್ಲಿ ೮ನೇ ದಿನ ವಿದ್ಯಾರ್ಥಿಗಳು ಆತ್ಮರಕ್ಷಣೆಯ ರಕ್ಷಣಾತ್ಮಕ ತಂತ್ರಗಳು, ಮತ್ತು ವ್ಯಾಯಾಮ ದಲ್ಲಿ ಕಿಕ್, ಪಂಚ್, ಉಸಿರು ಮತ್ತು ಮನಸ್ಸನ್ನು ಸಮತೋಲನದಲ್ಲಿಡಲು ಧ್ಯಾನ, ಮೊದಲಾದ ವಿಷಯಗಳ ಕುರಿತು ಕರಾಟೆ ಕೋಚ್ ಶ್ರೀನಿವಾಸ ಪಂಡಿತ ರಿಂದ ತರಬೇತಿ ಪಡೆಯುತ್ತಿದ್ದಾರೆ. ಉಚಿತವಾಗಿ ನಡೆಯುತ್ತಿರುವ ಕರಾಟೆ ತರಬೇತಿಯನ್ನು ನಡೆಸುತ್ತಿರುವ ಸೆನ್‌ಸೈ ಸಂಸ್ಥಾಪಕ  ಮಲ್ಲಿಕಾರ್ಜುನ ಕೊತಬಾಳರಿಗೆ, ಕರಾಟೆ ಕೋಚ್ ಶ್ರೀನಿವಾಸ ಪಂಡಿತರಿಗೆ ಪಾಲಕರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.  

Leave a Reply