ಜಾತಿ ಜನಗಣತಿ : ಮುಸ್ಲಿಂ ಬಾಂಧವರಲ್ಲಿ ವಿನಂತಿ

ಕೊಪ್ಪಳ : ದಿ. ೧೧-೪-೨೦೧೫ರಿಂದ ದಿ. ೩೦-೪-೨೦೧೫ರವರೆಗೆ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ‍್ಯವು ಜಾತಿ ಜನಗಣತಿ ಎಂದೇ ಜನಜನಿತವಾಗಿದೆ. ಸದರಿ  ಸಮೀಕ್ಷೆಯ ಕಾರ್ಯಕ್ಕೆ ಸಮೀಕ್ಷಾ ಸಿಬ್ಬಂದಿಗಳು ಪ್ರತಿಮನೆ ಮನೆಗೆ ಭೇಟಿ ನೀಡಿ ಕುಟುಂಬದ ಮಾಹಿತಿ ಸಂಗ್ರಹಿಸುತ್ತಾರೆ. ಸಮೀಕ್ಷೆಗೆ ಬಂದವರಿಗೆ ಸಹಕಾರ ನೀಡಿ  ಜಾತಿ ,ಕುಟುಂಬದ ಸ್ಥಿತಿಗತಿಯ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಕೊಪ್ಪಳ ಜಿಲ್ಲಾ ವಕ್ಫ ಸಮಿತಿಯ ಅಧ್ಯಕ್ಷ ಹಾಫಿಜ್ ಮಹ್ಮದ್ ಮುಸ್ತಫಾ ಕಮಾಲ್ ಖಾದ್ರಿ ಹೇಳಿದರು.
ಅವರು ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡುತ್ತಿದ್ದರು. ಸದರಿ ಅಂಶಗಳಲ್ಲಿ ಸಾಮಾಜಿಕಲ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ  ಅತೀ ಮುಖ್ಯವಾಗಿ ಕಾಲಂ ನಂ, ೫,೬,೭ ಮತ್ತು ೨೭ ಅತೀ ಮಹತ್ವದ್ದಾಗಿದೆ. ಸದರಿ ಕಾಲಂಗಳ ಬಗ್ಗೆ ಸಮೀಕ್ಷಾ ಸಿಬ್ಬಂದಿಗೆ ಸರಿಯಾದ ಮಾಹಿತಿ ನೀಡಬೇಕು. ಕಾಲಂ ೫ ರಲ್ಲಿ ಧರ್ಮ ಇಸ್ಲಾಂ, ಕಾಲಂ ೬ ರಲ್ಲಿ ಜಾತಿ ಮುಸ್ಲಿಂ, ಕಾಲಂ ೭ರಲ್ಲಿ ಉಪಜಾತಿ ನದಾಪ,ಪಿಂಜಾರ, ಶೇಖ್, ಖಾಜಿ… ಇತ್ಯಾದಿ ಕಾಲಂ ೨೭ರಲ್ಲಿ ಕುಲಕಸುಬು ಸಿಕ್ಕಲಗಾರ,ಕಲಾಯಿಗಾರ ಇತ್ಯಾದಿ ತಮಗೆ ಸಂಬಂಧಿಸಿದ ಕಸುಬನ್ನು ಬರೆಸಬೇಕು ಯಾವುದೇ ಕಾಲಂ  ಖಾಲಿ ಬಿಡಬಾರದರು. ಪ್ರತಿಯೊಬ್ಬರು ಸಮೀಕ್ಷೆಗೆ ಸಹಕರಿಸಿ ಕಡ್ಡಾಯವಾಗಿ ಮಾಹಿತಿ ನೀಡಲು ಆಗ್ರಹಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಗೌಸ್ ಪಾಶಾ, ಅಂಜುಮನ್ ಅಯಾತ-ಉಲ್-ಉಲೂಮನ ಅಧ್ಯಕ್ಷ ಜಾಫರ್ ತಟ್ಟಿ, ರಾಜಾಬಕ್ಷಿ ಎಚ್.ವಿ ಉಪಸ್ಥಿತರಿದ್ದರು.  

Leave a Reply