ಪ್ರಗತಿ-ಬಂಧು ಸ್ವ ಸಹಾಯ ಸಂಘಗಳ ೮ ಒಕ್ಕೂಟಗಳ ಉದ್ಘಾಟನಾ ಸಮಾರಂಭ

  
ಕೊಪ್ಪಳ : ಅಗಷ್ಟ ೭ ಬುಧುವಾರದಂದು ಪಾನಘಂಟಿ ಭಾಗ್ಯಮ್ಮ ಭೀಮಶೇನಪ್ಪ ಮಂಗಲ ಭವನದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಭಾಗ್ಯನಗರ ಕ್ಷೇತ್ರದಲ್ಲಿ ನೂತನವಾಗಿ  ಸಂಘಟಿಸಲ್ಪಟ್ಟಿರುವ ಪ್ರಗತಿ-ಬಂಧು ಸ್ವ ಸಹಾಯ ಸಂಘಗಳ ೮ ಒಕ್ಕೂಟಗಳ ಉದ್ಘಾಟನಾ ಸಮಾರಂಭವನ್ನು ಹೈದರಾಬಾದ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ    ಕೆ.ಬೂದಪ್ಪ ಗೌಡರು ಉದ್ಘಾಟಿಸಿ ಯೋಜನೆ ಕಾರ್ಯಕ್ರಮದಲ್ಲಿ ಶಿಸ್ತು ಮತ್ತು ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು. 
ಭಾಗ್ಯನಗರ  ಗ್ರಾಮ ಪಂಚಾಯತ ಅಧ್ಯಕ್ಷರಾದ  ಹೊನ್ನೂರುಸಾಬ ಬೈರಾಪುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾದ  ರಾಘವೇಂದ್ರ ಪಾನಘಂಟಿ ವಕೀಲರು  ಭಾಗ್ಯನಗರ ಇವರು ಶ್ರಾವಣ ಮಾಸದ ಪ್ರಥಮದಲ್ಲಿ ಈ ಒಂದು ಸಭೆಯು ಸುವರ್ಣ ಮಹೋತ್ಸವ ಕಾರ್ಯಕ್ರಮವಾಗಿದ್ದು ಇದರಲ್ಲಿ ಮಹಿಳೆಯರು ಮತ್ತು ಪುರುಷರು ಹೆಚ್ಚಿನ ಸಹಕಾರ ನೀಡಿರುತ್ತಾರೆ ಎಂದು ತಿಳಿಸಿದರ ಬಾಗ್ಯನಗರದ ಊರಿನ ಗಣ್ಯರಾದ  

ಶ್ರೀನಿವಾಸ ಗುಪ್ತಾ ಇಂತಹ ಒಂದು ಕಾರ್ಯಕ್ರಮಕ್ಕೆ ನಮ್ಮ ಗ್ರಾಮದ ಎಲ್ಲಾ ಹಿರಿಯರ ಸಹಕಾರ ಕೋರುತ್ತಾ ಹೆಚ್ಚಿನ ಸ್ವ ಸಹಾಯ ಸಂಘಗಳು ರಚನೆ ಮಾಡುವಂತೆ ಆಗಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜಿಲ್ಲಾ ನಿರ್ದೇಶಕರಾದ   ಶಿವರಾಯ ಪ್ರಭು, ಯೋಜನಾಧಿಕಾರಿಗಳಾದ   ಧರಣಪ್ಪ ಮೂಲ್ಯ ಹಾಗೂ ಯೂನಿಯನ್ ಬ್ಯಾಂಕ್ ಕೊಪ್ಪಳದ ಪ್ರಭಂದಕರಾದ  ರೋಜನ್ ಉಮೇನರವರು ಮತ್ತು ಸಹಾಯ ಪ್ರಂಭದಕರಾದ   ಸತ್ಯನಾರಾಯಣ ರವರು ಗ್ರಾಮ ಪಂಚಾಯತನ ಸರ್ವ ಸದಸ್ಯರು ಉಪಸ್ಥಿತರಿದ್ದರು. ೮ ಒಕ್ಕೂಟದ ಅಧ್ಯಕ್ಷರಾದ ಕಲಾವತಿ ಪವಾರ ಮತ್ತು ಶಾರದಾ ಬಡಿಗೇರ, ಜಯಶೀಲಾ, ಮಂಜುಳಾ, ಗಂಗಮ್ಮ, ಲಲೀತಾ, ಪದ್ಮಾವತಿ, ಮಹಾದೇವಿ, ಇವರೆಲ್ಲರು ವೇದಿಕೆಯಲಿದ್ದ  ಹಿರಿಯರ ಮೂಲಕ ಫಲ-ತಾಂಬೂಲ ಪಡೆದುಕೊಳ್ಳುವುದರ  ಮೂಲಕ ಜವಾಬ್ಧಾರಿಯನ್ನು ಪಡೆದುಕೊಂಡರು.  
ಕಾರ್ಯಕ್ರಮದ ನಿರೂಪಣೆಯನ್ನು ಇರಕಲ್‌ಗಡದ ಮೇಲ್ವಿಚಾರಕರು ಮಾಡಿದರು. ಜಯಶೀಲಾರವರು  ಎಲ್ಲರನ್ನು ಸ್ವಾಗತಿಸಿದರು. ಭಾಗ್ಯನಗರ ಕಾರ್ಯಕ್ಷೇತ್ರ ಸಾಧನಾ ವರದಿಯನ್ನು ವಲಯದ  ಮೇಲ್ವಿಚಾರಕರಾದ ಗಂಗಮ್ಮ ಓದಿದರು. ಕಾರ್ಯಕ್ರಮದ ಪದಾಧಿಕಾರಿಗಳ ಪರಿಚಯವನ್ನು  ಮಹಿಳಾ ಜ್ಞಾನವಿಕಾಸದ ಸಮನ್ವಯಾಧಿಕಾರಿಯಾದ ಶ್ರೀಮತಿ ಸುಮಾವತಿ ಮಾಡಿದರು ಕಾರ್ಯಕ್ರಮದ ಧನ್ಯವಾದವನ್ನು ಒಕ್ಕೂಟದ ಅಧ್ಯಕ್ಷರಾದ ಲಲಿತಾ ಬಡಿಗೇರವರು ಮಾಡಿದರು. 
  
Please follow and like us:
error

Related posts

Leave a Comment