ಬಿಜೆಪಿ ಮುಳುಗುತ್ತಿರುವ ಹಡಗು- ರಾಯರಡ್ಡಿ


ಯಲಬುರ್ಗಾ: ಸ್ವಜನಪಕ್ಷಪಾತ, ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರಕಾರ ಮುಳುಗುತ್ತಿರುವ ಹಡಗಾಗಿದೆ. ಸ್ವಪಕ್ಷದವರ ಸ್ವಾರ್ಥದಿಂದಲೇ ಸರಕಾರ ಪತನವಾಗಲಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರಡ್ಡಿ ಹೇಳಿದರು. ಅವರು ಯಲಬುರ್ಗಾ ಪಟ್ಟಣದ ವಿವಿದ ವಾರ್ಡಗಳಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಡಿಗೆ, ಜನರ ಬಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು. ಬಿಜೆಪಿ ಬಣಗಳಾಗಿ ಒಡೆದು ತಮ್ಮ ತಮ್ಮಲ್ಲೇ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಭ್ರಷ್ಟಾಚಾರಗಳಲ್ಲಿ ತೊಡಗಿರುವ ಎಲ್ಲ ಸಚಿವರು ಜೈಲು ಪಾಲಾಗುವುದು ಖಚಿತ , ಕಾಂಗ್ರೆಸ್ 50 ವರ್ಷಗಳಿಂದ ಭದ್ರತೆ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಗಳನ್ನು ಕೈಗೊಂಡಿದೆ. ನಾಡಿನ ಸಮಗ್ರ ಅಭಿವೃದ್ದಿಗೆ ಪ್ರಯತ್ನಿಸುತ್ತಿದೆ. ಈ ಸಲ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು . ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಿಮಶೇಪ್ಪ ಹಳ್ಳಿ, ಬಸವಲಿಂಗಪ್ಪ ಭೂತೆ,ಬಸವರಾಜ ಉಳ್ಳಾಗಡ್ಡಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.

Leave a Reply