ಕೊಪ್ಪಳ ನಗರಸಭೆಯಿಂದ ನೀರಿನ ದರ ಪರಿಷ್ಕರಣೆ

ಕೊಪ್ಪಳ ಡಿ. : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ  ನೀರು ಸರಬರಾಜು ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ನೀರಿನ ದರವನ್ನು ಪರಿಷ್ಕರಿಸಲಾಗಿದ್ದು, ಪರಿಷ್ಕೃತ ದರ ೨೦೧೧  ರ ಆಗಸ್ಟ್ ೦೧ ರಿಂದಲೇ ಅನ್ವಯವಾಗಲಿದೆ ಎಂದು ನಗರಸಭೆ ಪೌರಾಯುಕ್ತರಾದ ಅಶ್ವಿನಿ ಬಿ.ಎಂ. ಅವರು ತಿಳಿಸಿದ್ದಾರೆ.
  ಸರ್ಕಾರದ ಆದೇಶ ಮತ್ತು ರಾಜ್ಯ ನೀರು ಸರಬರಾಜು ಇಲಾಖೆಯ ನಿರ್ದೇಶನದಂತೆ ಕೊಪ್ಪಳ ನಗರಸಭೆಯು ನೀರು ಸರಬರರಾಜು ದರ ಮತ್ತು ನಿರ್ವಹಣಾ ದರವನ್ನು ಪರಿಷ್ಕರಿಸಿದೆ.  ಗೃಹ ಬಳಕೆ ನೀರಿನ ದರ ಮಾಸಿಕ ರೂ. ೧೨೦,  ವರ್ಷಕ್ಕೆ ರೂ. ೧೪೪೦ ಗಳನ್ನು ನಿಗದಿಪಡಿಸಲಾಗಿದೆ.  ಗೃಹೇತರ ಬಳಕೆಗೆ ಮಾಸಿಕ ರೂ. ೨೪೦, ವರ್ಷಕ್ಕೆ- ರೂ. ೨೮೮೦.  ವಾಣಿಜ್ಯ ಕೈಗಾರಿಕೆಗೆ ಮಾಸಿಕ ರೂ. ೪೮೦, ವರ್ಷಕ್ಕೆ ರೂ. ೫೭೮೦ ರಂತೆ ದರ ಪರಿಷ್ಕರಿಸಲಾಗಿದೆ.  ಒಂದು ಬಾರಿ ನೀರು ಸಂಪರ್ಕ ಪಡೆಯಲು ವಿಧಿಸುವ ದರವನ್ನೂ ಸಹ ಪರಿಷ್ಕರಿಸಲಾಗಿದ್ದು, ಗೃಹ ಬಳಕೆಗೆ ರೂ. ೨೦೦೦, ಗೃಹೇತರ ಬಳಕೆಗೆ ರೂ. ೪೦೦೦ ಮತ್ತು ವಾಣಿಜ್ಯ ಕೈಗಾರಿಕೆಗೆ ರೂ. ೮೦೦೦ ದರ ವಿಧಿಸಲಾಗುವುದು, ಇದರಲ್ಲಿ ರೋಡ್ ಕಟಿಂಗ್, ಬೋರ್ ಚಾರ್ಜ್‌ಗಳು ಪ್ರತ್ಯೇಕವಾಗಿರುತ್ತವೆ.  ಪರಿಷ್ಕೃತ ದರಗಳನುಸಾರ ಸಾರ್ವಜನಿಕರು ೨೦೧೧ ರ ಆಗಸ್ಟ್ ೦೧ ರಿಂದ ನೀರಿನ ದರವನ್ನು ಭರಿಸಿ, ನಗರಸಭೆಯೊಡನೆ ಸಹಕರಿಸುವಂತೆ ಪೌರಾಯುಕ್ತರಾದ ಅಶ್ವಿನಿ ಬಿ.ಎಂ.  ಮನವಿ ಮಾಡಿದ್ದಾರೆ.
Please follow and like us:
error