ಒಳಚರಂಡಿ ಸ್ವಚ್ಛತೆಗೆ ಯಂತ್ರಗಳನ್ನು ಬಳಸಲು ಸೂಚನೆ

ಕೊಪ್ಪಳ ಡಿ. : ಸೆಪ್ಟಿಕ್ ಟ್ಯಾಂಕ್ ಹಾಗೂ ಒಳಚರಂಡಿಗಳ ಸ್ವಚ್ಛತೆಯನ್ನು ಕೆಲಸಗಾರರಿಂದ ಮಾಡಿಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರಾದ ಅಶ್ವಿನಿ ಬಿ.ಎಂ. ಅವರು ತಿಳಿಸಿದ್ದಾರೆ.
  ಸೆಪ್ಟಿಕ್ ಟ್ಯಾಂಕ್ ಹಾಗೂ ಒಳಚರಂಡಿಗಳ ಸ್ವಚ್ಚತೆಯನ್ನು ಕೆಲಸಗಾರರಿಂದ ಮಾಡಿಸುವುದು ಕಾನೂನಿಗೆ ವಿರುದ್ಧವಾಗಿದ್ದು, ಇದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲು ಕಾಯ್ದೆಯಲ್ಲಿ ಅವಕಾಶವಿದೆ.  ಸೆಪ್ಟಿಕ್ ಟ್ಯಾಂಕ್ ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಈಗ ಆಧುನಿಕ ಯಂತ್ರಗಳು ನಗರಸಭೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇವುಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರಾದ ಅಶ್ವಿನಿ ಬಿ.ಎಂ. ಅವರು  ತಿಳಿಸಿದ್ದಾರೆ.
Please follow and like us:
error