You are here
Home > Koppal News > ಅತಿಥಿ ಉಪನ್ಯಾಸಕರ ಸೇವೇಕಾಯಂಮಾತಿಗಾಗಿ ಆಗ್ರಹ

ಅತಿಥಿ ಉಪನ್ಯಾಸಕರ ಸೇವೇಕಾಯಂಮಾತಿಗಾಗಿ ಆಗ್ರಹ

ಹೈದರಾಬಾದ್ ಕರ್ನಾಟಕ ಮಂಡಳಿ ೩೭೧(ಜೆ)ಕಲಂ ಅಡಿಯಲ್ಲಿ 
     ಕೊಪ್ಪಳ : ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರುಗಳಿಗೆ ಹತ್ತಾರು ವರ್ಷಗಳು ಉರುಳಿದರೂ ಇವರಿಗೆ ಸೇವಾಭದ್ರತೆ, ಸೇವಾಕಾಯಂಮಾತಿ, ವೇತನದಲ್ಲಿ ಹೆಚ್ಚಳ ಈ ಮೊದಲಾದ ಸೌಲಭ್ಯಗಳು ಇರುವದಿಲ್ಲ.   ಎಲ್ಲ ಶೈಕ್ಷಣಿಕ ಅರ್ಹತೆಗಳಿದ್ದರೂ ಅವಕಾಶಗಳೇ ಇಲ್ಲದಂತಾಗಿದೆ. ಕಾರಣ ಹಿಂದುಳಿದ ಜಿಲ್ಲೆಗಳ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿಯೇ ಹೈದರಾಬಾದ್ ಕರ್ನಾಟಕ ಮಂಡಳಿ ೩೭೧(ಜೆ) ಕಲಂಗೆ ಅನುಮೋದನೆ ಸಿಕ್ಕಿದೆ. 
        ಈಗಲಾದರೂ ೧೦-೧೨ ವರ್ಷ ಸೇವೆ ಸಲ್ಲಿಸಿದ ಈ ಭಾಗದ ಅಭ್ಯರ್ಥಿಗಳಿಗೆ ಅವಕಾಶ ಸಿಗುವಂತಾಗಬೇಕು. ವಯೋಮಿತಿ ಮೀರಿರುವ ಶೈಕ್ಷಣಿಕ ಅರ್ಹತೆ ಇರುವ ಉಪನ್ಯಾಸಕರ ಸೇವೆ ಮೊದಲು ಕಾಯಂಗೊಳಿಸಬೇಕೆಂದು ಕೊಪ್ಪಳ ಜಿಲ್ಲಾ ಅತಿಥಿ/ಅರೆಕಾಲಿಕ ಉಪನ್ಯಾಸಕರ ಸಂಘ(ರಿ)ದ ಅಧ್ಯಕ್ಷರು ಹಾಗೂ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕರಾದ   ವೀರಣ್ಣ.ಎಸ್. ಸಜ್ಜನರ ಪ್ರಕಟಣೆಗೆ ತಿಳಿಸಿದ್ದಾರೆ. 

Leave a Reply

Top