ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿಗೆ ಕೊಟ್ಟೂರಿನ  ತುಂಗಭದ್ರ ಶಿಕ್ಷಣ ಸಂಸ್ಥೆಯಲ್ಲಿ  ನಡೆದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ  ದ್ವಿತೀಯ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಅವರುಗಳಲ್ಲಿ ನಟರಾಜ ಜಂಪಿಂಗ್‌ನಲ್ಲಿ ೨ ನೇ ಸ್ಥಾನ, ಹ್ಯಾಮರ್ ತ್ರೋದಲ್ಲಿ ೧ ನೇ  ಸ್ಥಾನ,  ಬ್ರೋಡ್ ಜಂಪ್‌ನಲ್ಲಿ ಬಂಗಾರದ ಪದಕ, ರಿಲೆಯಲ್ಲಿ ೪ ನೇ ಸ್ಥಾನ ಪಡೆದು ವೈಯುಕ್ತಿಕ ಚಾಂಪಿಯನಶಿಪ್ ಪ್ರಶಸಿ ಪಡೆದಿದ್ದಾರೆ.  ಇದೇ ರೀತಿ ಮಂಜುನಾಥ ೨೦೦ ಮೀಟರ್ ಓಟದಲ್ಲಿ ೩ ನೇ ಸ್ಥಾನ, ಬ್ರೋಡ್ ಜಂಪ್‌ನಲ್ಲಿ  ೩ ನೇಸ್ಥಾನ ಹಾಗೂ ಚಂದ್ರಶೇಖರ ೪೦೦ ಮೀಡರ್ ಓಟದಲ್ಲಿ ೪ ನೇ ಸ್ಥಾನ ಪಡೆದಿದ್ದಾರೆ. ಇವರೆಲ್ಲರ ಸಾಧನೆಗಾಗಿ ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿ ಹಾಗೂ ಭೋದಕ,ಭೋದಕೇತರ ಸಿಬ್ಬಂಧಿಗಳು ಶುಭ ಹಾರೈಸಿದ್ದಾರೆ.
Please follow and like us:
error