ಕೊಳೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ.

ಕೊಪ್ಪಳ-03- ಕೊಳೂರು ಕ್ಲಸ್ಟರ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂದ್ರಾಳದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಶಂಕ್ರಪ್ಪಗಾಂಜಿ  ವಹಿಸಿದ್ದರು. ಉದ್ಘಾಟಕರಾಗಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ ಶಹಪೂರ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಪ್ಪಳದ ಬಿಜೆಪಿ ಯುವ ಮೋರ್ಚಾ ಜಿಲ್ಲಾಅಧ್ಯಕ್ಷ ಮಂಜುನಾಥ ಪೊಲೀಸ್ ಪಾಟೀಲ್, ಹಂದ್ರಾಳ ಗ್ರಾ. ಪಂ ಸದಸ್ಯರುಗಳಾದ ಬಸಣ್ಣ ಗಡಾದ, ಫಕೀರಪ್ಪ ಕುರ್ತಕೋಟಿ, ಫಕೀರಪ್ಪ ಹಡಪದ, ಕೆಂಚಮ್ಮ ಹಡಪದ, ಹನುಮವ್ವ ಕೊಳೋರು, ಮತ್ತು ಊರಿನ ಹಿರಿಯರಾದ ಗವಿಸಿದ್ದಯ್ಯ ಹಿರೇಮಠ, ಶಂಕ್ರಪ್ಪ ದೇವರಮನಿ, ಯಂಕಣ್ಣ ಕೊಡದಾಳ, ಬಸವರಾಜ ಮಂಡಪ್ಪನವರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಹನುಮಂತಪ್ಪ ಕೊಡ್ಲಿ, ಮುಖ್ಯೋಪಾದ್ಯಾಯರಾದ ದಾಕ್ಷಾಯಣಿ ಹಿರೇಮಠ, ಹಂದ್ರಾಳದ ಹಾಲು ಉತ್ಪಾದಕರ ಒಕ್ಕೂಟದ ನಿಗಮ ಅಧ್ಯಕ್ಷ ಉಮೇಶ ಶಹಪೂರ ಉಪಸ್ಥಿತರಿದ್ದರು.

Leave a Reply