ಕಾತರಕಿ ಗುಡ್ಲಾನೂರಿನಲ್ಲಿ ತಿಪ್ಪೆಗುಂಡಿ ತೆರವು.

ಕೊಪ್ಪಳ-09- ತಾಲೂಕಿನ ಕಾತರಕಿ ಗುಡ್ಲಾನೂರಿನಲ್ಲಿ  ಕಳೆದ ಎರಡುವರ್ಷಗಳಿಂದ ಅಕ್ರಮವಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿ ಹಾಕಲಾಗಿದ್ದ ತಿಪ್ಪೆಗುಂಡಿಗಳನ್ನು ಗ್ರಾಮ ಪಂಚಾಯತಿ ವತಿಯಿಂದ ತೆರವುಗೊಳಿಸಲಾಯಿತು. ಕಳೆದ ಎರಡು ವರ್ಷಗಳಿಂದ ಈ ಕುರಿತು ಅನೇಕ ಬಾರಿ ನೋಟಿಸ್ ನೀಡಿದರು ಕೇಳದೆ ಅದೇ ಜಾಗೆಯಲ್ಲಿ ತಿಪ್ಪೆ ಗುಂಡಿ ಹಾಕುತ್ತಿದ್ದವರನ್ನು ಇಂದು ಪೋಲಿಸ್ ಸಿಬ್ಬಂದಿ ಸಹಕಾರದೊಂದಿಗೆ ತೆರವು ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲಮ್ಮ ಮಾಂತಪ್ಪನವರ,

ಉಪಾಧ್ಯಕ್ಷೆ ಬಸವರಾಜ ಅಂಗಡಿ, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಪಾರ್ವತಿ ವಿ, ಸದಸ್ಯರಾದ ಲಕ್ಷ್ಮಪ್ಪ ಕೂಚಿ, ಭರಮಪ್ಪ ಹುರಿಜೋಳ, ರಾಮಣ್ಣ ಗುಡ್ಲಾನೂರ, ರಾಜು ಹುರಕಡ್ಲಿ, ಹಿರಿಯರಾದ ಶಂಕ್ರಗೌಡ ನಾಗನಗೌಡ್ರ, ಶಿವಪ್ಪ ಉಳ್ಳಾಗಡ್ಡಿ, ಫಕ್ಕಿರೇಶ ಕಮ್ಮಾರ, ಸಿದ್ದನಗೌಡ ಹಿರೇಗೌಡ್ರ ಇತರರು ಇದ್ದರು.

Please follow and like us:
error