ಜ.೦೮ ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ.

ಕೊಪ್ಪಳ, ಜ.೦೬ (ಕ ವಾ) ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಉದ್ಯಮಶೀಲತೆ ಅರಿವು ಕಾರ್ಯಕ್ರಮ ಜ.೦೮ ರಂದು ಕುಷ್ಟಗಿಯಲ್ಲಿ ಆಯೋಜಿಸಲಾಗಿದೆ.
       ಜ.೦೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕುಷ್ಟಗಿಯ ಬಸ್‌ಸ್ಟಾಂಡ್ ರಸ್ತೆಯಲ್ಲಿರುವ ರಾಜಕುಮಾರ ಕಲ್ಯಾಣ ಮಂಟಪದಲ್ಲಿ ಈ ಒಂದು ದಿನದ ಉದ್ಯಮಶೀಲತೆ ಅರಿವು ಕಾರ್ಯಕ್ರಮ ನಡೆಯಲಿದೆ  ಕಾರ್ಯಕ್ರಮದಲ್ಲಿ ಉದ್ಯಮಶೀಲತೆಯ ಪರಿಚಯ, ಉದ್ಯಮಶೀಲತೆಯ ಗುಣಲಕ್ಷಣಗಳು, ಹೊಸದಾಗಿ ಉದ್ಯಮಗಳನ್ನು ಪ್ರಾರಂಭ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಜಿಲ್ಲೆಯಲ್ಲಿಯ ಸಂಪನ್ಮೂಲಗಳ ಪರಿಚಯ, ಉದ್ಯಮಗಳ ಆಯ್ಕೆ ವಿಧಾನ, ಹೊಸದಾಗಿ ಉದ್ಯಮಗಳನ್ನು  ಪ್ರಾರಂಭಿಸುವವರಿಗೆ ದೊರೆಯುವ ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳ ಮಾಹಿತಿಗಳನ್ನು ನೀಡಲಾಗುವದು. ಭಾಗವಹಿಸಲಿಚ್ಛಿಸುವವರು ಕಾರ್ಯಕ್ರಮದ ಸ್ಥಳ ಮತ್ತು ದಿನದಂದು ಬೆಳಿಗ್ಗೆ ೧೦ ಗಂಟೆಗೆ ನೇರವಾಗಿ ಆಗಮಿಸಿ ತಮ್ಮ ಹೆಸರನ್ನು ನೋದಾಯಿಸಿಕೊಂಡು, ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೯೮೬೩೩೨೭೩೬ ಅಥವಾ ೯೯೪೫೭೦೯೫೭೮ ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ.
Please follow and like us:
error