ಶ್ರೀ ಗವಿಸಿದ್ದೇಶ್ವರ ಗೆಳಯರ ಬಳಗದಿಂದ ‘ಗವಿಮಠ ಜಾತ್ರೆಗೆ ೨೧೧ ಕ್ವಿಂಟಲ್ ಮಾದಲಿ’

ಈ ಬಾರಿ ಗವಿಸಿದ್ದೇಶ್ವರ ಜಾತ್ರೆಗೆ ೨೧೧ ಕ್ವಿಂಟಲ್ ಮಾದಲಿ ಮಾಡುತ್ತಿರುವದಾಗಿ ಶ್ರೀ ಗವಿಸಿದ್ದೇಶ್ವರ ಗೆಳೆಯರ ಬಳಗ ತಿಳಿಸಿದೆ.

ನಗರದ ಬಸವರಾಜ ಪುರದ ಪುರದರ ಪ್ಲಾಂಟ್‌ನಲ್ಲಿ ಸೇರಿದ ಗೆಳೆಯರ ಬಳಗದ ಸದಸ್ಯರು ಮೇಲಿನ ಸೇವೆಯನ್ನು ನಿರ್ವಹಿಸುವ ಬಗ್ಗೆ ಚರ್ಚಿಸಿದ್ದರು. ೨೦೧೦ ನೇ ಇಸ್ವಿಯಲ್ಲಿ ೫೧ ಕ್ವಿಂಟಲ್‌ನಿಂದ ಪ್ರಾರಂಭವಾಗಿದ್ದ ಮಾದಲಿ ಸೇವೆ ಕಳೆದ ವರ್ಷ ೨೦೧ ಕ್ವಿಂಟಲ್ ಮಾಡಿಸಲಾಗಿತ್ತು. ಈ ವರ್ಷ ೨೧೧ ಕ್ವಿಂಟಲ್  ಮಾದಲಿ ಮಾಡಿಸಲಾಗುವುದು.
೨೧೧ ಕ್ವಿಂಟಲ್ ಮಾದಲಿ ತಯಾರಾಗಲು ೯೧ ಕ್ವಿಂಟಲ್ ಗೋದಿ, ೧೧೨ ಕ್ವಿಂಟಲ್ ಬೆಲ್ಲ, ೩ ಕ್ವಿಂಟಲ್ ಕಡ್ಲಿಬೆಳೆ, ೨ ಕ್ವಿಂಟಲ್ ಕೊಬ್ಬರಿ, ೨ ಕ್ವಿಂಟಲ್ ಪುಟಾಣಿ, ೫೦ ಕೆ.ಜಿ ಶುಂಠಿ, ೪೦ ಕೆ.ಜಿ. ಗಸಗಸೆ ೧೦ ಕೆ.ಜಿ. ಯೆಲಕ್ಕಿಯನ್ನು ಬಳಸಲಾಗುತ್ತದೆ. 
ಈ ಮಾದಲಿ ತಯಾರಿಸುವ ಸೇವೆಯಲ್ಲಿ ಕೊಪ್ಪಳ ನಗರ ಮಾತ್ರವಲ್ಲದೇ ಸುತ್ತ ಮುತ್ತಲಿನ ಗ್ರಾಮದವರು  ಸಹ ಕೈಜೋಡಿಸಲಿದ್ದು ನಗರದ ನಂದಿನಗರ ಶಿವಪ್ಪ ಶೆಟ್ಟರ ಇವರ ಮಿಲ್‌ನಲ್ಲಿ ಗೋದಿ ಹಿಟ್ಟನ್ನು ಮಾಡಿಸಿ ನಂತರ ಸಿದ್ಧತೆ ಮಾಡಿಸಿದ ಮೇಲೆ ದಿ.೦೬-೦೧-೨೦೧೫ ರಂದು   ಬಸವರಾಜ ಪುರದ ಇವರ ಮಿಲ್‌ನ ಆವರಣದಿಂದ ಗವಿಮಠಕ್ಕೆ ಅರ್ಪಿಸಲಾಗುವುದು. 
ಮಾದಲಿ ತಯಾರಿಸುವ ಸಂಬಂಧ ಸೇರಿದ ಶ್ರೀ ಗವಿಸಿದ್ದೇಶ್ವರ ಗೆಳೆಯರ ಬಳಗದ ಬಸವರಾಜ ಪುರದ, ಚಂದ್ರಶೇಖರ ಕವಲೂರು, ರಾಜೇಂದ್ರ ಶೆಟ್ಟರ, ಚಂದ್ರಯ್ಯ ಮಾಹಾಂತಯ್ಯನಮಠ, ರೇಣುಕಾರಾಧ್ಯ ಕೆ.ಕೆ. ಮಠ, ಬಸವರಾಜ ರಾಜೂರು (ಗೌರಾ), ಪತ್ರೆಪ್ಪ ಪಲ್ಲೆದ, ಮಹೇಂದ್ರ ಚೋಪ್ರಾ, ಗವಿಸಿದ್ದಪ್ಪ ತಳಕಲ್, ಸುರೇಶ ಓಜನಳ್ಳಿ, ಶರಣಪ್ಪ ಬಿನ್ನಾಳ (ಹಲಗೇರಿ) ಪ್ರಾಣೇಶ ಮಾದಿನೂರು, ಶರಣಬಸಪ್ಪ ಇನ್ನಿತರ ಸದಸ್ಯರು ಸೇರಿ ೨೧೧ ಕ್ವಿಂಟಲ್ ಮಾದಲಿ ತಯಾರಿಸಿ ಶೀ ಮಠಕ್ಕೆ ಅರ್ಪಿಸುವ ಬಗ್ಗೆ ನಿರ್ಧರಿಸಲಾಯಿತು.

Leave a Reply