ಉತ್ತಮ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ – ಸಂದ್ಯಾ ಮಾದಿನೂರ

ಕೊಪ್ಪಳ : ಮಕ್ಕಳಿಗೆ ಬಾಲ್ಯದಲ್ಲಿಯೇ ಸೂಕ್ತವಾದ ರೀತಿಯ ತರಬೇತಿ ಶಿಕ್ಷಣವನ್ನು ನೀಡುತ್ತಾ ಹೋದರೆ ಅದು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ಪ್ರತಿಯೊಂದು ಮಗುವಿಗೂ ಪ್ರತಿಭೆ ಇರುತ್ತದೆ. ಏನನ್ನಾದರೂ ಸಾಧಿಸುವ ಛಲ ಇರಬೇಕು. ಮನಸ್ಸಿದ್ದರೆ ಮಾರ್ಗ ಎನ್ನುವುದು ಮಕ್ಕಳು ಅರಿತುಕೊಳ್ಳಬೇಕು. ಗುರಿಗಳು ಯಾವತ್ತೂ ಉನ್ನತಮಟ್ಟದಲ್ಲಿರಲಿ ಹಾಗಿದ್ದಾಗ ಅಸಾಧ್ಯವಾದದ್ದನ್ನು ಸಾಧಿಸಬಹುದು ಎಂದು ಗೈಡ್ಸ್ ನ ಜಿಲ್ಲಾ ಆಯುಕ್ತೆ, ಹಿರಿಯ ವಕೀಲರಾದ ಸಂಧ್ಯಾ ಮಾದಿನೂರ ಹೇಳಿದರು. ಅವರು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸನ್ಮಾನ ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜಯರಾಜ ಬೂಸದರು ೨೬ ವರ್ಷಗಳ ಸೇವೆಗೆ ಸರಕಾರ ಪ್ರಶಸ್ತಿಯನ್ನು ನೀಡಿದ್ದು ಶ್ಲಾಘನೀಯ. ಅವರ ಸೇವೆ ನಿರಂತರವಾಗಿರಲಿ. ಇಂದು ಅವರನ್ನು ಸನ್ಮಾನಿಸುತ್ತಿರುವುದು ಅಭಿನಂದನಾರ್ಹ ಕಾರ‍್ಯ ಎಂದು ಹೇಳಿದರು. 
ಕಳೆದ ೨೬ ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ, ರಾಜ್ಯಮಟ್ಟದ ಹಾನರ್ ಬ್ಯಾಡ್ಜ್ ಪ್ರಶಸ್ತಿಯನ್ನು ಪಡೆದಿರುವ ಜಯರಾಜ ಬೂಸದರಿಗೆ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.  ಸನ್ಮಾನ ಸ್ವೀಕರಿಸಿದ ಜಯರಾಜ ಬೂಸದರು ಮಾತನಾಡಿ ಸನ್ಮಾನದಿಂದ ಜವಾಬ್ದಾರಿ ಹೆಚ್ಚಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ನ  ನಿರಂತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಶಸ್ತಿ ಪಡೆಯುತ್ತಿರುವ ಸರಸ್ವತಿ ವಿದ್ಯಾಮಂದಿರದ ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚಿನದನ್ನು ಸಾಧಿಸಲಿ ಎಂದರು.
ಇನ್ನೊರ್ವ ಅತಿಥಿ ಮಂಜುನಾಥ ಗೊಂಡಬಾಳ ಜಯರಾಜ ಬೂಸದರ ಸೇವೆಯನ್ನು  ಕುರಿತು ಮಾತನಾಡಿದರು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ, ಮುಖ್ಯೋಪಾಧ್ಯಯರಾದ ರೇಣುಕಾ ಅತ್ತನೂರ ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೆ ಸ್ವಾಗತವನ್ನು ಜಯಶ್ರೀ ಕುಲಕರ್ಣಿ ಮಾಡಿದರು. ನಿರೂಪಣೆಯನು ಶಿವಲೀಲಾ ಹಾಗೂ ವಂದನಾರ್ಪಣೆಯನ್ನು ಚಿದಾನಂದ ನೆರವೇರಿಸಿದರು. 
Please follow and like us:
error