You are here
Home > Koppal News > ಇಂದ್ರ ಧನುಷ್ ಯೋಜನೆಗೆ ಸಚಿವ ಪಿ.ಟಿ.ಪರಮೇಶ್ವರ ನಾಯಕ್ ಚಾಲನೆ

ಇಂದ್ರ ಧನುಷ್ ಯೋಜನೆಗೆ ಸಚಿವ ಪಿ.ಟಿ.ಪರಮೇಶ್ವರ ನಾಯಕ್ ಚಾಲನೆ

ಹೊಸಪೇಟೆ: ಮಿಷನ್ ಇಂದ್ರ ಧನುಷ್ ಯೋಜನೆ ಸಾಕಾರಕ್ಕೆ ಶ್ರಮಿಸಬೇಕು ಎಂದು ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ ಹೇಳಿದರು.
ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ನಗರದ ಹಳೇ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಜಿಲ್ಲಾ ಮಟ್ಟದ ಮಿಷನ್ ಇಂದ್ರ ಧನುಷ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯ ವೃದ್ಧಿಗಾಗಿ ಕ್ರಮ ಕೈಗೊಂಡಿದೆ. ಇದಕ್ಕಾಗಿ ದೇಶದ ೨೦೧ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ರಾಜ್ಯದ ಬೆಂಗಳೂರು ನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಏಳು ಮಾರಕರೋಗಗಳಾದ ಬಾಲಕ್ಷಯ, ಗಂಟಲುಮಾರಿ, ಧರ್ನುವಾಯು, ನಾಯಿಕೆಮ್ಮು, ಹೆಪಟೈಟಸ್‌ಬಿ, ಪೊಲೀಯೊ, ದಡಾರನಂಥ ಮಾರಕರೋಗಗಳಿಗೆ ಇಂದ್ರ ಧನುಷ್ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದರು.
ಬಂಡವಾಳ ಬೇಡ: ಕೆಲ ಖಾಸಗಿ ಆಸ್ಪತ್ರೆಗಳು ಹೆರಿಗೆಯನ್ನೇ ಬಂಡವಾಳ ಮಾಡಿಕೊಂಡು ಸಿಝರೀನ್ ಮಾಡಿಸುತ್ತಿವೆ. ಇದರಿಂದ ಶೇ.೬೦ರಷ್ಟು ಸಿಝರೀನ್ ಹೆರಿಗೆಯಾಗುತ್ತಿವೆ. ಗರ್ಭಿಣಿಯರಿಗೆ ಮಾನಸಿಕ ಒತ್ತಡ ಹೇರಿ ಈ ಕೆಲ್ಸ ಮಾಡಲಾಗುತ್ತಿದೆ ಎಂದರು. ವೈದ್ಯರಲ್ಲೂ ಪ್ರಾಮಾಣಿಕರಿದ್ದಾರೆ. ಹಳ್ಳಿಗಳಲ್ಲಿ ಈಗಲೂ ವೈದ್ಯರನ್ನು ದೇವರ ಸಮಾನ ಎಂದು ಭಾವಿಸುತ್ತಾರೆ. ವೈದ್ಯರು ಪ್ರಾಮಾಣಿಕವಾಗಿ ಬಡವರ ಸೇವೆ ಮಾಡಬೇಕು ಎಂದು ಹೇಳಿದರು. ಪರಿಸರ ಹಾಳಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಇದರಿಂದಾಗಿ ಇಂದ್ರ ಧನುಷ್ ಯೋಜನೆ ರೂಪಿಸಲಾಗಿದೆ. ತುಂಗಭದ್ರಾ ನದಿ ನೀರು ಕಲುಷಿತಗೊಂಡಿರುವ ಕುರಿತು ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಲಾಗಿದೆ. ಆ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪರಿಸರ ಹಾಗೂ ಕುಡಿವ ನೀರಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಇದರಿಂದ ರೋಗಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜಿ.ಪಂ. ಅಧ್ಯಕ್ಷೆ ಅನಿತಾ ಆನಂದ್, ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಶ್ರೀಕಂಠ್, ತಾ.ಪಂ. ಅಧ್ಯಕ್ಷೆ ಸುಲೋಚನಮ್ಮ, ಹುಡಾ ಅಧ್ಯಕ್ಷ ಎಲ್.ಸಿದ್ದನಗೌಡ, ಜಿ.ಪಂ. ಸದಸ್ಯ ಅನ್ನದಾನರಡ್ಡಿ, ತಾ.ಪಂ. ಸದಸ್ಯ ರಹಮತ್‌ಗೌಡ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ನ ಅಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಮೂರ್ತಿ, ಡಿ. ವೆಂಕಟರಮಣ, ಜಿ.ಪಂ. ಮಾಜಿ ಸದಸ್ಯ ಕೆ.ಎಂ. ಹಾಲಪ, ಮುಖಂಡರಾದ ಸಾಲಿಸಿದಯ್ಯಸ್ವಾಮಿ, ಬಿ.ಕಾಂ. ಮಾಬುಸಾಬ್, ಡಿಎಚ್‌ಒ ಡಾ. ರಮೇಶ್‌ಬಾಬು, ಟಿಎಚ್‌ಒ ಡಾ. ಮಲ್ಲೇಶಪ್ಪ ಇತರರಿದ್ದರು. ಡಾ. ಬಸವರಾಜ ಬೆಣ್ಣಿ, ಎಂ.ಪಿ. ದೊಡ್ಡಮನಿ ನಿರೂಪಿಸಿದರು.

Leave a Reply

Top