ಹೇಮರಡ್ಡಿಮಲ್ಲಮ್ಮ ಜಯಂತೋತ್ಸವ

ಕೊಪ್ಪಳ : ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಮೇ ೧೦ ರವಿವಾರ ದಂದು ಶ್ರೀ ಶಿವಶರಣೆ  ಹೇಮರಡ್ಡಿಮಲ್ಲಮ್ಮ ಜಯಂತೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಅಂದು ಬೆಳಗ್ಗೆ  ೦೫:೦೦ ಗಂಟೆಗೆ ಬಿಲ್ವಾ ಪುಷ್ಟಾರ್ಚನೆ, ಅಭಿಷೇಕ ಜರುಗುವುದು ನಂತರ ೦೮:೦೦ ಗಂಟೆಗೆ ಬನ್ನಿಕಟ್ಟಿಯಿಂದ ಹೊನ್ನಲಾಂಭಿಕದೇವಸ್ಥಾನದ ವರಗೆ ಮಹಿಳೆಯರ ಕುಂಭಮೇಳ ಹಾಗೂ ಡೊಳ್ಳು ವಾದ್ಯಗಳೊಂದಿಗೆ ಶ್ರೀ ಶಿವಶರಣೆ  ಹೇಮರಡ್ಡಿಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ಭಾವಚಿತ್ರ ಮೆರವಣಿಗೆ ಜರುಗುವುದು.
 ಕಾರ್ಯಕ್ರಮಕ್ಕೆ ಆಗಮಿಸಿದ ಸಕಲ ಸದ್ಭಕ್ತರಿಗೆ  ಮಧ್ಯ್ನಾಹ ೧೨:೦೦ ಗಂಟೆಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಜಯಂತೋತ್ಸವದ ಪ್ರಯುಕ್ತ  ಸಾಯಂಕಾಲ ೦೭:೦೦ ಗಂಟೆಗೆ ಬಾಣ ಬಿರುಸು ಮದ್ದು ಸುಡುವ ಕಾರ್ಯಕ್ರಮವಿದ್ದು, ರಾತ್ರಿ ೧೦ ಗಂಟೆಗೆ ಗ್ರಾಮದ ಯುವ ಕಲಾವಿದರಿಂದ  ಧನಿಕರ ದೌರ್ಜನ್ಯ ಎಂಬ ಸುಂದರ ಸಾಮಾಜಿಕ ನಾಟಕವನ್ನು ಅಭಿನಯಿಸುವರು  .
Please follow and like us:
error