You are here
Home > Koppal News > ಅತಿಥಿ ಉಪನ್ಯಾಸಕರ ವೇತನ ನೇರವಾಗಿ ಬ್ಯಾಂಕ ಖಾತೆಗೆ ಜಮಾ ಆಗಲಿ-ವಿನಂತಿ

ಅತಿಥಿ ಉಪನ್ಯಾಸಕರ ವೇತನ ನೇರವಾಗಿ ಬ್ಯಾಂಕ ಖಾತೆಗೆ ಜಮಾ ಆಗಲಿ-ವಿನಂತಿ

ಕೊಪ್ಪಳ : ರಾಜ್ಯದ ಸರಕಾರಿ ಪದವಿ ಕಾಲಜುಗಳಲ್ಲಿ ೧೦೫೦೦ ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಾದ ಪ್ರತಿ ತಿಂಗಳು ವೇತನ ನೀಡುವುದು. ವೇತನವನ್ನು ೨೫೦೦೦ ರೂಗಳಿಗೆ ನಿಗದಿಗೊಳಿಸುವುದು, ಸೇವಾ ಭದ್ರತೆ ಖಾಯಂಆತಿ ಇನ್ನಿತರೆ ಪ್ರಮುಖ ಬೇಡಿಕೆಗಳಿಗಾಗಿ ಹಲವಾರು ಬಾರಿ ಅನಿರ್ಧಿಷ್ಠ ಅವಧಿ ಧರಣಿ, ಪಾದಯಾತ್ರೆ, ಉಪವಾಸ ಸತ್ಯಾಗ್ರಹ ಮತ್ತು ಆತ್ಮ ಹತ್ಯೆ ಮಾಡಿಕೊಳ್ಳುವಂತಹ ಕ್ರೀಯೆಯಲ್ಲಿ ತೊಡಗಿದರೂ ಮುಖ್ಯ ಮಂತ್ರಿಗಳಾಗಲಿ ಉನ್ನತ ಶಿಕ್ಷಣ ಸಚಿವರಾಗಲಿ, ಮತ್ತು ಸಂಬಂಧ ಪಟ್ಟ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ  ಈ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಗಮನ ಹರಿಸುತ್ತಿಲ್ಲ. 
ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಗಳಲ್ಲಿ ಒಂದಾಧ ವೇತನವನ್ನು ಪ್ರತಿತಿಂಗಳು ನೀಡುವುದು. ಮತ್ತು ಈ ವೇತನವನ್ನು ನೇರವಾಗಿ ಬ್ಯಾಂಕ ಖಾತೆಗೆ ಜಮಾ ಆಗುವ ಕ್ರಮವ ಕೈಗೊಳ್ಳುವುದು. ಸರಕಾರ ಇಂದು ಅತಿಥಿ ಉಪನ್ಯಾಸಕರಲ್ಲಿಯೇ ಕೊಡುವ ವೇತನದಲ್ಲಿ ತಾರತಮ್ಯ ಮಾಡುತ್ತದೆ. ೮೦೦೦ ಮತ್ತು ೧೦೦೦೦ ವೇತನವನ್ನು ನೀಡುತ್ತದೆ. ಹುದ್ದೇ ಒಂದೆ ಆದರೂ ವೇತನ ನೀಡುವಲ್ಲಿ ಸರಕಾರ ತಾರತಮ್ಯ ಮಾಡುತ್ತಿದೆ. ಈ ಕೊಡುವ ವೇತನವನ್ನಾದರೂ ಸರಕಾರ ಸರಿಯಾಗಿ ಕೊಡುತ್ತಿಲ್ಲ. ವರ್ಷಕ್ಕೆ ಒಮ್ಮೆ ಅಥವಾ  ಎರಡು ಬಾರಿ ಮಾತ್ರ ವೇತನ ನೀಡುತ್ತಿದೆ. ಇದಕ್ಕೆ ಕಾರಣ ಸರಕಾರದಿಂದ ಬಿಡುಗಡೆಯಾದ ವೇತನ ಮೊದಲು ಉನ್ನತಶಿಕ್ಷಣ ಇಲಾಖೆಯ  ಆಯುಕ್ತರ ಕಛೇರಿಗೆ ಹೊಗುತ್ತದೆ. ಆಯುಕ್ತರ ಕಛೇರಿಯಿಂದ ವಿಭಾಗೀಯ ಜಂಟಿ ನಿರ್ದೇಶಕರ ಕಛೇರಿಗೆ, ಜಂಟಿ ನಿರ್ದೇಶಕರ ಕಛೇರಿಯಿಂದ ಕಾಲೇಜಿನ ಪ್ರಾಚಾರ್ಯರಿಗೆ, ಪ್ರಾಚಾರ್ಯರು ವೇತನ ಬಿಲ್ ಪಾವತಿ ಮಾಡಿ ಖಜಾನೆ ಇಲಾಖೆಗೆ ಕಳುಹಿಸುತ್ತಾರೆ. ಖಜಾನೆ ಇಲಾಖೆಯಿಂದ ಬಿಡುಗಡೆಯಾದ ವೇತನ ಚೆಕ್ ಮೂಲಕ ಅತಿಥಿ ಉಪನ್ಯಾಸಕರ ಕೈ ಸೇರ ಬೇಕಾದರೆ ಶೈಕ್ಷಣಿಕ ವರ್ಷವೇ ಕಳೆದು ಹೋಗಿರುತ್ತದೆ. 
ಇಷ್ಟೊತ್ತಿಗಾಗಲೇ ಅತಿಥಿ ಉಪನ್ಯಾಸಕರೆಲ್ಲರೂ ತಮ್ಮ ಕುಟುಂಬದ ನಿರ್ವಹಣೆಗಾಗಿ ಹಲವಾರು ವ್ಯಕ್ತಿಗಳಲ್ಲಿ ಸಾಲ ಮಾಡಿ ಸಾಲಗಾರರ ಕಾಟ ತಾಳದೇ ಕಣ್ಣು ತಪ್ಪಿಸಿ ತಿರುಗಾಡುವ ಪ್ರಸಂಗ ಬಂದಿರುತ್ತದೆ. ಕಾರಣ ಸರಕಾರ ಈ ಅವೈಜ್ಞಾನಿಕ ಪದ್ದತಿಯ ವೇತನ ನೀಡುವ ಕ್ರಮವನ್ನು ಕೈಬಿಟ್ಟು ಅತಿಥಿ ಉಪನ್ಯಾಸಕರ ವೇತನವನ್ನು ಪ್ರತಿ ತಿಂಗಳು ನೀಡಬೇಕು ಮತ್ತು ವೇತನ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಕ್ರಮವನ್ನು ಸರಕಾರ ಕೈಗೊಳ್ಳಬೇಕೆಂದು ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರ ಪರವಾಗಿ ಕೊಪ್ಪಳ ಜಿಲ್ಲಾ ವ್ಯಾಪ್ತಿ ಹೈದ್ರಾಬಾದ್ ಕರ್ನಾಟಕ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸಹ ಕಾರ್ಯದರ್ಶಿ ಬಸವರಾಜ ಆರ್. ಹುಳಕಣ್ಣವರ ವಿನಂತಿಸಿಕೊಂಡಿದ್ದಾರೆ.  

Leave a Reply

Top