ಕೊಪ್ಪಳಕ್ಕೆ ಸದಾನಂದಗೌಡ ಬರಲಿ !

ಕೊಪ್ಪಳ : ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ವಿ.ಸದಾನಂದಗೌಡರು ಈಗ ಪ್ರಸ್ತುತ ಲೋಕಸಭೆಯ ಸದಸ್ಯರು. ಅವರು 6ತಿಂಗಳೊಳಗಾಗಿ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಇದಕ್ಕಾಗಿ ಪ್ರಶಸ್ತವಾದ ಕ್ಷೇತ್ರವೆಂದರೆ ಕರಡಿ ಸಂಗಣ್ಣ ತೆರವು ಮಾಡಿದ ಕೊಪ್ಪಳ ಕ್ಷೇತ್ರ. ಇಷ್ಟರಲ್ಲಿಯೇ ಇಲ್ಲಿ ಉಪಚುನಾವಣೆ ನಡೆಯಬೇಕಾಗಿದೆ. ಕರಡಿ ಸಂಗಣ್ಣ ಮುಖ್ಯಮಂತ್ರಿಗಳಿಗಾಗಿ ಕ್ಷೇತ್ರ ಬಿಟ್ಟುಕೊಡಲು ಸಿದ್ದವಾಗಿದ್ದಾರೆ. ಅವರಿಗೆ ಮಂತ್ರಿಗಿರಿ ಜೊತೆಗೆ ವಿಧಾನಪರಿಷತ್ ಸ್ಥಾನ ಸಿಗುವ ಸಂಭವವಿದೆ.
ಮುಖ್ಯಮಂತ್ರಿಗಳೇ ಸ್ಪರ್ಧಿಸಿದರೆ ಚುನಾವಣೆ ರಂಗೇಳುವುದು ಖಚಿತ. ಅದರ ಜೊತೆಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ನಾನಾಯೋಜನೆಗಳು ಬರುತ್ತವೆ. ಇದರಿಂದ ಕೊಪ್ಪಳದ ಅಭಿವೃದ್ದಿ ಸಾಧ್ಯ. ಅಲ್ಲದೇ ಕರಡಿ ಸಂಗಣ್ಣ ಮಂತ್ರಿಯಾಗುವುದರಿಂದ ಇನ್ನೂ ಉತ್ತಮ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು ಎನ್ನುತ್ತಾರೆ ಅಭಿಮಾನಿಗಳು ಮತ್ತು ಜನತೆ.
ಈಗಾಗಲೇ ಅಂದಣ್ಣ ಅಗಡಿ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲು ಹೋಗಿದ್ದಾರೆ….

Leave a Reply