ದೊಣ್ಣೆ ಆರ್ ಆರ್ ಎಸ್ ಸಂಸ್ಕೃತಿ- ಸಿಎಂ ಸಿದ್ದರಾಮಯ್ಯ

ಕೊಪ್ಪಳ : ರಾಜ್ಯಸರಕಾರ ನಿದ್ರಾವಸ್ಥೆಯಲ್ಲಿದ್ದು ಅದನ್ನು ಎಚ್ಚರಿಸಲು ದೊಣ್ಣೆ ತರಬೇಕೆಂದು ಹೇಳಿಕೆ ನೀಡಿದ ಮಾಜಿ ಸಿಎಂ ಬಿಎಸ್ ವೈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ದೊಣ್ಣೆ ಆರ್ ಆರ್ ಎಸ್ ಸಂಸ್ಕೃತಿ ಅಂತ ಆರೋಪಿಸಿದ್ರು. ಕೊಪ್ಪಳದ ಬಸಾಪುರ ಗ್ರಾಮದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವ್ರು ನಮ್ಮ ಸರ್ಕಾರದ ಸಚಿವರ ವಿರುದ್ದ ಪ್ರತಿಭಟನೆ ಮಾಡುತ್ತಿರೋ ಬಿಜೆಪಿ ನಾಯಕರು ರಾಜಕೀಯ ಪ್ರೇರಿತವಾದದ್ದು.ಕಾಂಗ್ರೆಸ್ ಶಾಸಕರ್ಯಾರು ಭೂ ಓತ್ತುವರಿ ಮಾಡಿಲ್ಲ ಎಂದು ಸಚಿವರನ್ನು ಸಮರ್ಥಿಸಿಕೊಂಡರು.
 ನಿಗಮ ಮಂಡಳಿ ಗಳಿಗೆ ನೇಮಕಾತಿ ವಿಷಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಅಂದ್ರು. 
ಸಂಸದೀಯ ಕಾರ್ಯದರ್ಶಿಯಾಗಲು ಯಾವ ಶಾಸಕರು ಹಿಂದೇಟು ಹಾಕ್ತಿಲ್ಲ ಇದೆಲ್ಲ ಊಹಾಪೋಹ. ನಾನು ಯಾವ ಶಾಸಕರೊಂದಿಗೂ ಈ ಕುರಿತು ಚರ್ಚೆ ನಡೆಸಿಲ್ಲ ಅಂತ ಸಿಎಂ ಹೇಳಿದ್ರು.
ಆಲ್ಲದೇ ಧಾರವಾಡದ ಉಗ್ರವಾದಿಗಳ ಚಟುವಟಿಕೆಯಲ್ಲಿ ಯಾರೂ ಅರೆಸ್ಟ್ ಆಗಿಲ್ಲ.ಆರೆಸ್ಟ್ ಆಗಿದ್ದ್ದಾರೆ ಅನ್ನೋ ಮಾತು ಸತ್ಯಕ್ಕೆ ದೂರ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ  ಶಾಸಕ ರಾಘವೇಂದ್ರ ಹಿಟ್ನಾಳ, ಕಾಂಗ್ರೆಸ್  ಜಿಲ್ಲಾಧ್ಯಕ್ಷ ಬಸವರಾಜ್ ಹಿಟ್ನಾಳ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಕಾಂಗ್ರೆಸ್ ನ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. 

Leave a Reply