ಮಹಾರಾಷ್ಟ್ರದಲ್ಲಿ ಶಿವಾಜಿ ಕುರಿತು ಸಂಘರ್ಷ

ಮಹಾರಾಷ್ಟ್ರದಲ್ಲಿ ಶಿವಾಜಿ ಕುರಿತು ಸಂಘರ್ಷಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಶಿವಾಜಿ ಕುರಿತ ಸಂಘರ್ಷವು ಪ್ರತಿಕೆಗಳ ಮುಖಪುಟಗಳಲ್ಲಿ ರಾರಾಜಿಸದಿರುವುದು ಅಪರೂಪ. ಇತ್ತೀಚೆಗಿನ ವಿವಾದವು ಶಿವಾಜಿಯ ಜೀವನಚರಿತ್ರಕಾರ ಬಾಬಾಸಾಹೇಬ್ ಪುರಂದರೆ ಅವರಿಗೆ ಪ್ರತಿಷ್ಟಿತ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿರುವುದರ ಕುರಿತಾಗಿದೆ. ನೀವು ಯಾರನ್ನು ನಂಬಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ಪುರಂದರೆಯವರು ಒಬ್ಬ ಲೇಖಕ, ನಾಟಕಕಾರ, ಶಿವಾಜಿಯ ಜೀವನಚರಿತ್ರಕಾರ, ಬ್ರಾಹ್ಮಣ್ಯದ ಇತಿಹಾಸಕಾರ ಅಥವಾ/ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದಾರೆ.ಪುರಂದರೆಯವರಿಗೆ ಪ್ರಶಸ್ತಿಯನ್ನು ಕಳೆದ ಮೇ ತಿಂಗಳಲ್ಲಿ ಘೋಷಿಸಿ ದಾಗಲೇ ವಿರೋಧ ಆರಂಭವಾಗಿತ್ತು. ಆದರೆ, ಬುಧವಾರದಂದು ಪುಣೆಯಲ್ಲಿ ಪ್ರಶಸ್ತಿ ನೀಡಲು ದಿನಾಂಕ ನಿಗದಿಪಡಿಸಿದ ತಕ್ಷಣದಿಂದಲೇ ಅದು ತಾರಕಕ್ಕೇರಿದೆ.ರಾಜ್ಯ ಸರಕಾರ ಹೇಳುವಂತೆ, 93 ವರ್ಷದ ಪುರಂದರೆಯವರು ತನ್ನ ಜೀವನದುದ್ದಕ್ಕೂ 17ನೆ ಶತಮಾನದ ಮರಾಠ ರಾಜ ಶಿವಾಜಿಯ ಸಂದೇಶಗಳನ್ನು ಜನರಿಗೆ ತಲುಪಿಸಲು ಮಾಡಿದ ಪ್ರಯತ್ನವನ್ನು ಗುರುತಿಸುವ ಸಲುವಾಗಿ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಪುರಂದರೆಯವರ ಪರಿಚಿತವಾದ ಕೃತಿಗಳೆಂದರೆ, ಶಿವಾಜಿಯ ಜೀವನದ ಕಥೆಯನ್ನು ವಿವರಿಸುವ ಜೀವನ ಚರಿತ್ರೆಯಾದ ರಾಜಾ ಶಿವಛತ್ರಪತಿ ಮತ್ತು ತುಂಬಾ ಜನಪ್ರಿಯ ನಾಟಕವಾದ ಜನತಾ ರಾಜ. ಆದರೆ, ಅವರು ಬ್ರಾಹ್ಮಣಶಾಹಿ ದೃಷ್ಟಿಯಿಂದ ನೋಡುವ ಮೂಲಕ ಇತಿಹಾಸವನ್ನು ತಿರುಚಿದ್ದಾರೆ ಮತ್ತು ಈ ಮರಾಠ ದೊರೆಯ ನಿಜವಾದ ತಂದೆ ಆತನ ಬ್ರಾಹ್ಮಣ ಗುರುವಾದ ದಾದಾಜಿ ಕೊಂಡದೇವ್ ಎಂದು ಸೂಚಿಸಿದ್ದಾರೆಂಬ ಆರೋಪವನ್ನು ಪುರಂದರೆ ಅವರ ವಿರೋಧಿಗಳು ಮಾಡಿದ್ದಾರೆ. ಈ ವಿರೋಧಿಗಳಲ್ಲಿ ಸಂಬಾಜಿ ಬ್ರಿಗೇಡ್‌ನ ಸಾಂಸ್ಕೃತಿಕ ವೀಕ್ಷಕ ಮತ್ತು ಹಿರಿಯ ಸಾಹಿತಿ ಬಾಲಚಂದ್ರ ನೆಮಾಡೆ, ರಾಷ್ಟೀಯವಾದಿ ಕಾಂಗ್ರೆಸ್ ಪಕ್ಷದ ಜಿತೇಂದ್ರ ಅಹ್ವಾಡ್, ಕಾಂಗ್ರೆಸ್ ಶಾಸಕ ರಾಧಾಕೃಷ್ಣ ವಿಕೆ-ಪಾಟೀಲ್, ಶಿವಾಜಿಯ ವಂಶಸ್ಥ ಮತ್ತು ಎನ್‌ಸಿಪಿ ನಾಯಕ ಉದ್ಯಾನ್ ರಾಜೇ ಬೋಂಸ್ಲೆ ಸೇರಿದ್ದಾರೆ. ವ್ಯಂಗ್ಯವೆಂದರೆ, ಶಿವಾಜಿಯನ್ನು ಅತೀಹೆಚ್ಚು ವೈಭವೀಕರಿಸಿದ ರಾಜಕೀಯ ಪಕ್ಷಗಳಾದ ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಗಳು ಪುರಂದರೆ ಅವರನ್ನು ಬೆಂಬಲಿಸುತ್ತಿರುವುದು. ಸಂಬಾಜಿ ಬ್ರಿಗೇಡ್‌ನ ಕಾರ್ಯಕರ್ತರು ಪ್ರಶಸ್ತಿಯನ್ನು ವಿರೋಧಿಸಿ ಮಂಗಳವಾರ ಅಹ್ಮದ್‌ನಗರ್‌ನಲ್ಲಿರುವ ಮಹಾರಾಷ್ಟ್ರ ಗೃಹ ಸಚಿವ ರಾಮ್ ಶಿಂಧೆ ಅವರ ಕಚೇರಿಯನ್ನು ಧ್ವಂಸಗೊಳಿಸುತ್ತಿದ್ದಂತೆ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆ, ಎನ್‌ಸಿಪಿಯ ಮೇಲೆ ವಾಗ್ದಾಳಿ ಮಾಡಿ, ಅದು ಬ್ರಾಹ್ಮಣ ಮತ್ತು ಮರಾಠರ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.ಯಾವುದರ ಕುರಿತು ವಿವಾದ?ಶಿವಾಜಿಯ ಜೀವನ ಕುರಿತ ವಾದವಿವಾದಗಳು ಮಹಾರಾಷ್ಟ್ರದಲ್ಲಿ ದೀರ್ಘವಾದ ಇತಿಹಾಸ ಹೊಂದಿವೆ. ಪುರಂದರೆ ಅವರ ಮೇಲಿನ ಇತ್ತೀಚಿನ ಪ್ರಹಾರ 2003ರ ಜೇಮ್ಸ್ ಲೆಯ್ನ್ ವಿವಾದದ ತನಕ ಹೋಗುತ್ತದೆ. ಪ್ರತಿಭಟನೆಗಳು ಮತ್ತು ಸಂಬಾಜಿ ಬ್ರಿಗೇಡ್‌ನಿಂದ ಪುಣೆಯ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್‌ಸ್ಟಿಟ್ಯೂಟ್ ಮೇಲೆ ನಡೆದ ದಾಳಿಯ ಬಳಿಕ ಅಮೆರಿಕದ ಪ್ರೊಫೆಸರ್ ಆಗಿರುವ ಲೆಯ್ನೊ ಅವರ ‘ಶಿವಾಜಿ: ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಎಂಬ ಪುಸ್ತಕವನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು.‘‘ಲೆಯ್ನ ಅವರ ಪುಸ್ತಕವು ಶಿವಾಜಿಯ ಜೀವನ ಕುರಿತ ವಿವರಣೆಗಳ ಲ್ಲಿರುವ ಬಹುರೂಪತೆಯನ್ನು ವಿವರಿಸುತ್ತದೆ’’ ಎಂದು ಗುರುತಿಸಿಕೊಳ್ಳಲು ಬಯಸದ ಮುಂಬೈಯ ಇತಿಹಾಸ ತಜ್ಞರೊಬ್ಬರು ಹೇಳುತ್ತಾರೆ. ‘‘ಕೆಲವು ಇತಿಹಾಸಕಾರರು ಈ ಪ್ರದೇಶವನ್ನು ಮುಸ್ಲಿಂ ಪ್ರಾಬಲ್ಯದಿಂದ ಬಿಡುಗಡೆಗೊಳಿಸಿದ ಅರಸನೆಂದು ಬಣ್ಣಿಸಿದರೆ, ಇತರರು- ಹೆಚ್ಚಾಗಿ ಬ್ರಾಹ್ಮಣ ಇತಿಹಾಸಕಾರರು, ಆತನ ಮೇಲಿತ್ತೆನ್ನಲಾದ ದಾದಾಜಿ ಕೊಂಡದೇವ್ ಸಹಿತ ಬ್ರಾಹ್ಮಣರ ಪ್ರಭಾವಕ್ಕೆ ಒತ್ತುನೀಡುತ್ತಾರೆಂಬುದನ್ನು ಲೆಯ್ನಾ ಅವರು ಈ ಪುಸ್ತಕದಲ್ಲಿ ವಿವರಿಸುತ್ತಾರೆ’’ ಎಂದು ಅವರು ಹೇಳುತ್ತಾರೆ.ಆದರೆ, ಲೆಯ್ನ ಅವರ ಪುಸ್ತಕ ವಿವಾದಕ್ಕೆ ಒಳಗಾದುದು ಕೇವಲ ಒಂದೇ ಒಂದು ವಾಕ್ಯಕ್ಕಾಗಿ. ಅದರಲ್ಲಿ ಅವರು, ಶಿವಾಜಿ ಜೈವಿಕ ತಂದೆ ಶಹಾಜಿ ಆಗಿರದೆ, ದಾದಾಜಿ ಕೊಂಡದೇವ್ ಎಂದು ಮಹಾರಾಷ್ಟ್ರೀಯರು ತಮಾಷೆ ಮಾಡುತ್ತಾರೆಂದು ಬರೆದಿದ್ದರು.ಲೆಯ್ನ ಅವರ ಪುಸ್ತಕ ಬಿಡುಗಡೆಯಾದಾಗ ಅದನ್ನು ವಿರೋಧಿಸಿದವರಲ್ಲಿ ಪುರಂದರೆಯವರೂ ಒಬ್ಬರಾಗಿದ್ದು, ಅದನ್ನು ಹಿಂದೆಗೆದುಕೊಳ್ಳಬೇಕೆಂದು ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ಗೆ ಪತ್ರ ಬರೆದ ಕೆಲವರಲ್ಲಿ ಅವರೂ ಸೇರಿದ್ದರು. ಈಗ ಸಂಬಾಜಿ ಬ್ರಿಗೇಡ್‌ನವರು ಅದನ್ನು ಪುರಂದರೆಯವರು ಬರೆದಿದ್ದಾರೆಂದು ಹೇಳುತ್ತಿದ್ದಾರೆ.‘‘ರಾಜಾ ಶಿವಛತ್ರಪತಿಯಲ್ಲಿ ಪುರಂದರೆಯವರು ಶಿವಾಜಿ ತಾಯಿ ಜೀಜಾಬಾಯಿ ನಡುವೆ ಸಂಬಂಧವಿತ್ತೆಂಬ ಅರ್ಥ ಬರುವಂತೆ ಚಿತ್ರಿಸಿದ್ದಾರೆ. ಶಿವಾಜಿಯ ತಂದೆ ಶಹಾಜಿ ಹಾಜರಿಲ್ಲದ ತಂದೆ ಮತ್ತು ದಾದಾಜಿ ಕೊಂಡದೇವ್ ಶಿವಾಜಿಯ ಜೈವಿಕ ತಂದೆ ಎಂಬಂತೆ ಬಣ್ಣಿಸಿದ್ದಾರೆ. ಅಲ್ಲದೇ, ಶಿವಾಜಿಯ ಮೇಲೆ ಶಹಾಜಿಯ ಪ್ರಭಾವಕ್ಕಿಂತ ದಾದಾಜಿ ಕೊಂಡದೇವ್ ಪ್ರಭಾವ ಹೆಚ್ಚಿತ್ತೆಂದು ಹೇಳಿದ್ದಾರೆ’’ ಎಂದು ಸಂಬಾಜಿ ಬ್ರಿಗೇಡ್‌ನ ಅಧ್ಯಕ್ಷ ವಿಶಾಲ್ ಪಸಾಲ್ಕರ್ ಹೇಳುತ್ತಾರೆ.ತನ್ನ ಸ್ವಂತ ಪುಸ್ತಕಕ್ಕೆ ಪುರಂದರೆ ಅವರ ಪುಸ್ತಕ ‘ಕಚ್ಚಾವಸ್ತು’ ಆಗಿತ್ತು ಎಂದು ಲೆಯ್ನಾ ಅವರು ಹೇಳಿದ್ದು, ಇದೆಲ್ಲಾ ವಿಷಯವನ್ನು ಬೆಳಕಿಗೆ ತಂದದ್ದಕ್ಕೆ ನಾವು ಜೇಮ್ಸ್ ಲೆಯ್ನ್‌ರನ್ನು ಅಭಿನಂದಿಸಬೇಕು ಎಂದಿರುವ ಪಸಾಲ್ಕರ್, ಇದಕ್ಕಿಂದ ಮೊದಲು ತಾವು ಪುರಂದರೆಯವರ ಪುಸ್ತಕವನ್ನು ಈ ದೃಷ್ಟಿಕೋನದಿಂದ ಓದಿರಲಿಲ್ಲ ಎಂದಿದ್ದಾರೆ.ಪುರಂದರೆಯವರ ಇತರ ವಿರೋಧಿಗಳು ತಮ್ಮ ಆರೋಪದಲ್ಲಿ ಅಷ್ಟೊಂದು ನಿಖರವಾಗಿಲ್ಲವಾದರೂ, ಅವರು ಶಿವಾಜಿಯ ಜೀವನವನ್ನು ತಿರುಚಿದ್ದಾರೆಂಬ ಬಗ್ಗೆ ಒಮ್ಮತಹೊಂದಿದ್ದಾರೆ.‘‘ಅವರು ಶಿವಾಜಿಯ ತಾಯಿಯನ್ನು ರಾಜಕೀಯವಾಗಿ ಸರಿಯಲ್ಲದ ರೀತಿಯಲ್ಲಿ ಚಿತ್ರಿಸಿದ್ದಾರೆ’’ ಎನ್ನುತ್ತಾರೆ ಮುಂಬೈಯ ರಾಜಕೀಯ ವಿಶ್ಲೇಷಕ ಸುರೇಂದ್ರ ರೊಂಡಾಲೆ. ‘‘ಅವರು ಇತಿಹಾಸಕಾರ ಕೂಡಾ ಆಗಿರಲಿಲ್ಲ. ಅವರು ಮಾಡಿರುವು ದಾದರೂ ಏನೆಂದರೆ ಒಂದು ಜನಪ್ರಿಯ ನಾಟಕವನ್ನು ಬರೆದಿರುವುದು. ಅವರಂತಹವರಿಗೆ ಈ ಪ್ರಶಸ್ತಿಯನ್ನು ನೀಡಿದರೆ, ಮುಂದಿನ ಪೀಳಿಗೆಯವರು ಅವರು ಬರೆದಿರುವುದನ್ನು ನೈಜ ಇತಿಹಾಸ ಎಂದು ತಿಳಿದುಕೊಳ್ಳುತ್ತಾರೆ’’ ಎಂಬ ಅಭಿಪ್ರಾಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ರಾಧಾಕೃಷ್ಣ ವಿಕೆ-ಪಾಟೀಲ್ ಅವರದ್ದು. ಇದೆಲ್ಲ ಜಾತಿಯ ಪ್ರಶ್ನೆಪುರಂದರೆಯವರು ನಿಜವಾಗಿಯೂ ಇದೆಲ್ಲವನ್ನು ಬರೆದಿದ್ದಾರೆಯೇ? ಅವರ ಬೆಂಬಲಿಗರು ಈ ಆರೋಪಗಳನ್ನು ಖಂಡತುಂಡವಾಗಿ ನಿರಾಕರಿಸುತ್ತಾರೆ.ಅವರು ಅಂತದ್ದೇನನ್ನೂ ಬರೆದಿಲ್ಲ ಎನ್ನುವ ಪುಣೆಯ ಇತಿಹಾಸಕಾರ ಪಾಂಡುರಂಗ ಬಲ್ಕವಾಡೆ, ‘‘ಪುರಂದರೆಯವರು ಪರ್ಷಿಯನ್ ಭಾಷೆ ಮತ್ತು ಮೋಡಿ ಬರಹವನ್ನು ಕಲಿತಿದ್ದುದರಿಂದ ಪುಸ್ತಕ ಬರೆಯುವ ಮೊದಲು ಶಿವಾಜಿಗೆ ಸಂಬಂಧಿಸಿದ ಸಾವಿರಾರು ದಾಖಲೆಗಳನ್ನು ಓದಿದ್ದರು’’ ಎನ್ನುತ್ತಾರೆ. ‘‘ಅವರನ್ನು ವಿರೋಧಿಸುವವರು ಯಾರೂ ಇತಿಹಾಸಕಾರರಲ್ಲ. ಅವರು ವಿನಯಶೀಲರಾಗಿದ್ದು, ತನ್ನನ್ನು ಲಾವಣಿಕಾರ ಎಂದು ಕರೆದುಕೊಳ್ಳುತ್ತಾರೆ. ಅಷ್ಟು ಮಾತ್ರಕ್ಕೆ ಅವರು ಇತಿಹಾಸಕಾರರಲ್ಲವೆಂದು ಅರ್ಥವಲ್ಲ. ಅವರು ಯಾರ ಕುರಿತೂ ಪಕ್ಷಪಾತ ತೋರಿಲ್ಲ ಮತ್ತು ಯಾವುದೇ ಜಾತಿ ಅಥವಾ ಸಮುದಾಯವನ್ನು ನಿಂದಿಸಿಲ್ಲ’’ ಎಂಬುದು ಬಲ್ಕವಾಡೆ ಅವರ ಅಭಿಪ್ರಾಯ.ಪುರಂದರೆಯವರ ಮೇಲಿನ ಮತ್ತೆಲ್ಲ ಆರೋಪಗಳ ಹಿಂದಿರುವ ನಿಜವಾದ ವಿಷಯವೆಂದರೆ ಕೋಮುವಾದಿ ಮತ್ತು ಜಾತಿ ರಾಜಕೀಯ ಎನ್ನುತ್ತಾರೆ ಬಲ್ಕವಾಡೆ ಮತ್ತು ಕೆಲವು ಇತಿಹಾಸಕಾರರು. ಪುರಂದರೆ ಅವರನ್ನು ಗೌರವಿಸಬಯಸುವ ಬಿಜೆಪಿ ನೇತೃತ್ವದ ಸರಕಾರ ಬ್ರಾಹ್ಮಣ ಮುಖ್ಯಮಂತ್ರಿಯ ನಾಯಕತ್ವ ಹೊಂದಿದೆ ಮತ್ತು ಅದನ್ನು ಬೆಂಬಲಿಸುತ್ತಿರುವ ಶಿವಸೇನೆಯು ಉತ್ಸಾಹಿ ಹಿಂದುತ್ವ ಬೆಂಬಲಿಗ ಪಕ್ಷ. ‘‘ಪುರಂದರೆಯವರ ಕೃತಿಯಲ್ಲಿ ಶಿವಾಜಿಗೆ ಖಂಡಿತವಾಗಿಯೂ ಒಂದು ದೈವಿಕ ಛಾಯೆಯನ್ನು ಕೊಡಲಾಗಿದೆ. ಅವರು ಮಕ್ಕಳಿಗಾಗಿ ಶಿವಾಜಿ ಕುರಿತು ಬರೆದಿರುವ ಒಂದು ಕೃತಿಯಲ್ಲಿ ಆತನನ್ನು ವಿಷ್ಣುವಿನ ಹಲವು ಅವತಾರಗಳು ಎಂಬಂತೆ ಬಣ್ಣಿಸಲಾಗಿದೆ ಕೂಡಾ’’ ಎಂದು ಮುಂಬೈಯ ಇತಿಹಾಸಕಾರ ಹೇಳುತ್ತಾರೆ.‘‘ಹೆಚ್ಚಿನ ಇತಿಹಾಸಕಾರರು ಶಿವಾಜಿಯನ್ನು ಜನಸಾಮಾನ್ಯರ ರಾಜ ಎಂದು ಬಣ್ಣಿಸುತ್ತಾರಾದರೂ, ಪುರಂದರೆಯವರ ಶಿವಾಜಿ- ಬ್ರಾಹ್ಮಣ ಸಂಪ್ರದಾಯಗಳ ರಕ್ಷಕ’’ ಎಂದು ರೊಂಡಾಲೆ ವ್ಯಾಖ್ಯಾನಿಸುತ್ತಾರೆ.ಸಂಬಾಜಿ ಬ್ರಿಗೇಡ್ ಮರಾಠಾ-ಕುಣುಬಿ ಜನಾಂಗದವರ ಸಂಘಟನೆಯಾಗಿದ್ದು, ಹೆಚ್ಚು ಜಾತ್ಯತೀತವಾಗಿ ಹಿಂದುತ್ವ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡಿರುವ ಎನ್‌ಸಿಪಿಯು ಬಹುತೇಕ ಮರಾಠರಿಂದ ಕೂಡಿರುವ ಪಕ್ಷ.ಪ್ರಸ್ತುತ ವಿವಾದದ ಹಿಂದಿರುವ ಲೆಕ್ಕಾಚಾರವನ್ನು ಸಂಬಾಜಿ ಬ್ರಿಗೇಡ್‌ನ ನಾಯಕ ವಿವರಿಸುತ್ತಾರೆ. ‘‘ಪುರಂದರೆಯವರು ಶಿವಾಜಿಯನ್ನು ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿಸುತ್ತಾರೆ. ಅದು ನಿಜವಲ್ಲ. ಯಾಕೆಂದರೆ ಆತನ ಸೇನೆಯಲ್ಲಿ 35 ಶೇಕಡಾ ಮಂದಿ ಮುಸ್ಲಿಮರಾಗಿದ್ದರು. ಆತ ಕೇವಲ ಮೊಗಲರ ವಿರೋಧಿಯಾಗಿದ್ದ. ಅದು ಬೇರೆಯೇ ವಿಷಯ. ಶಿವಸೇನೆ ಈಗ ಮಾತನಾಡುತ್ತಿಲ್ಲ. ಯಾಕೆಂದರೆ, ಅದು ಮುಸ್ಲಿಂ ವಿರೋಧಿ. ಬಿಜೆಪಿ ಪುರಂದರೆಯವರನ್ನು ಗೌರವಿಸಲು ಬಯಸಿದ್ದು ಯಾಕೆಂದರೆ, ಅವರು ಆರೆಸ್ಸೆಸ್‌ನವರು’’ ಎಂದು ಪಸಾಲ್ಕರ್ ವಿವರಿಸುತ್ತಾರೆ.ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಶಿವಾಜಿ ಕುರಿತ ಸಂಘರ್ಷವು ಪ್ರತಿಕೆಗಳ ಮುಖಪುಟಗಳಲ್ಲಿ ರಾರಾಜಿಸದಿರುವುದು ಅಪರೂಪ. ಇತ್ತೀಚೆಗಿನ ವಿವಾದವು ಶಿವಾಜಿಯ ಜೀವನಚರಿತ್ರಕಾರ ಬಾಬಾಸಾಹೇಬ್ ಪುರಂದರೆ ಅವರಿಗೆ ಪ್ರತಿಷ್ಟಿತ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿರುವುದರ ಕುರಿತಾಗಿದೆ. ನೀವು ಯಾರನ್ನು ನಂಬಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ಪುರಂದರೆಯವರು ಒಬ್ಬ ಲೇಖಕ, ನಾಟಕಕಾರ, ಶಿವಾಜಿಯ ಜೀವನಚರಿತ್ರಕಾರ, ಬ್ರಾಹ್ಮಣ್ಯದ ಇತಿಹಾಸಕಾರ ಅಥವಾ/ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದಾರೆ.ಪುರಂದರೆಯವರಿಗೆ ಪ್ರಶಸ್ತಿಯನ್ನು ಕಳೆದ ಮೇ ತಿಂಗಳಲ್ಲಿ ಘೋಷಿಸಿ ದಾಗಲೇ ವಿರೋಧ ಆರಂಭವಾಗಿತ್ತು. ಆದರೆ, ಬುಧವಾರದಂದು ಪುಣೆಯಲ್ಲಿ ಪ್ರಶಸ್ತಿ ನೀಡಲು ದಿನಾಂಕ ನಿಗದಿಪಡಿಸಿದ ತಕ್ಷಣದಿಂದಲೇ ಅದು ತಾರಕಕ್ಕೇರಿದೆ.
ರಾಜ್ಯ ಸರಕಾರ ಹೇಳುವಂತೆ, 93 ವರ್ಷದ ಪುರಂದರೆಯವರು ತನ್ನ ಜೀವನದುದ್ದಕ್ಕೂ 17ನೆ ಶತಮಾನದ ಮರಾಠ ರಾಜ ಶಿವಾಜಿಯ ಸಂದೇಶಗಳನ್ನು ಜನರಿಗೆ ತಲುಪಿಸಲು ಮಾಡಿದ ಪ್ರಯತ್ನವನ್ನು ಗುರುತಿಸುವ ಸಲುವಾಗಿ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಪುರಂದರೆಯವರ ಪರಿಚಿತವಾದ ಕೃತಿಗಳೆಂದರೆ, ಶಿವಾಜಿಯ ಜೀವನದ ಕಥೆಯನ್ನು ವಿವರಿಸುವ ಜೀವನ ಚರಿತ್ರೆಯಾದ ರಾಜಾ ಶಿವಛತ್ರಪತಿ ಮತ್ತು ತುಂಬಾ ಜನಪ್ರಿಯ ನಾಟಕವಾದ ಜನತಾ ರಾಜ. ಆದರೆ, ಅವರು ಬ್ರಾಹ್ಮಣಶಾಹಿ ದೃಷ್ಟಿಯಿಂದ ನೋಡುವ ಮೂಲಕ ಇತಿಹಾಸವನ್ನು ತಿರುಚಿದ್ದಾರೆ ಮತ್ತು ಈ ಮರಾಠ ದೊರೆಯ ನಿಜವಾದ ತಂದೆ ಆತನ ಬ್ರಾಹ್ಮಣ ಗುರುವಾದ ದಾದಾಜಿ ಕೊಂಡದೇವ್ ಎಂದು ಸೂಚಿಸಿದ್ದಾರೆಂಬ ಆರೋಪವನ್ನು ಪುರಂದರೆ ಅವರ ವಿರೋಧಿಗಳು ಮಾಡಿದ್ದಾರೆ. ಈ ವಿರೋಧಿಗಳಲ್ಲಿ ಸಂಬಾಜಿ ಬ್ರಿಗೇಡ್‌ನ ಸಾಂಸ್ಕೃತಿಕ ವೀಕ್ಷಕ ಮತ್ತು ಹಿರಿಯ ಸಾಹಿತಿ ಬಾಲಚಂದ್ರ ನೆಮಾಡೆ, ರಾಷ್ಟೀಯವಾದಿ ಕಾಂಗ್ರೆಸ್ ಪಕ್ಷದ ಜಿತೇಂದ್ರ ಅಹ್ವಾಡ್, ಕಾಂಗ್ರೆಸ್ ಶಾಸಕ ರಾಧಾಕೃಷ್ಣ ವಿಕೆ-ಪಾಟೀಲ್, ಶಿವಾಜಿಯ ವಂಶಸ್ಥ ಮತ್ತು ಎನ್‌ಸಿಪಿ ನಾಯಕ ಉದ್ಯಾನ್ ರಾಜೇ ಬೋಂಸ್ಲೆ ಸೇರಿದ್ದಾರೆ. ವ್ಯಂಗ್ಯವೆಂದರೆ, ಶಿವಾಜಿಯನ್ನು ಅತೀಹೆಚ್ಚು ವೈಭವೀಕರಿಸಿದ ರಾಜಕೀಯ ಪಕ್ಷಗಳಾದ ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಗಳು ಪುರಂದರೆ ಅವರನ್ನು ಬೆಂಬಲಿಸುತ್ತಿರುವುದು. ಸಂಬಾಜಿ ಬ್ರಿಗೇಡ್‌ನ ಕಾರ್ಯಕರ್ತರು ಪ್ರಶಸ್ತಿಯನ್ನು ವಿರೋಧಿಸಿ ಮಂಗಳವಾರ ಅಹ್ಮದ್‌ನಗರ್‌ನಲ್ಲಿರುವ ಮಹಾರಾಷ್ಟ್ರ ಗೃಹ ಸಚಿವ ರಾಮ್ ಶಿಂಧೆ ಅವರ ಕಚೇರಿಯನ್ನು ಧ್ವಂಸಗೊಳಿಸುತ್ತಿದ್ದಂತೆ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆ, ಎನ್‌ಸಿಪಿಯ ಮೇಲೆ ವಾಗ್ದಾಳಿ ಮಾಡಿ, ಅದು ಬ್ರಾಹ್ಮಣ ಮತ್ತು ಮರಾಠರ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.ಯಾವುದರ ಕುರಿತು ವಿವಾದ?ಶಿವಾಜಿಯ ಜೀವನ ಕುರಿತ ವಾದವಿವಾದಗಳು ಮಹಾರಾಷ್ಟ್ರದಲ್ಲಿ ದೀರ್ಘವಾದ ಇತಿಹಾಸ ಹೊಂದಿವೆ. ಪುರಂದರೆ ಅವರ ಮೇಲಿನ ಇತ್ತೀಚಿನ ಪ್ರಹಾರ 2003ರ ಜೇಮ್ಸ್ ಲೆಯ್ನ್ ವಿವಾದದ ತನಕ ಹೋಗುತ್ತದೆ. ಪ್ರತಿಭಟನೆಗಳು ಮತ್ತು ಸಂಬಾಜಿ ಬ್ರಿಗೇಡ್‌ನಿಂದ ಪುಣೆಯ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್‌ಸ್ಟಿಟ್ಯೂಟ್ ಮೇಲೆ ನಡೆದ ದಾಳಿಯ ಬಳಿಕ ಅಮೆರಿಕದ ಪ್ರೊಫೆಸರ್ ಆಗಿರುವ ಲೆಯ್ನೊ ಅವರ ‘ಶಿವಾಜಿ: ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಎಂಬ ಪುಸ್ತಕವನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು.‘‘ಲೆಯ್ನ ಅವರ ಪುಸ್ತಕವು ಶಿವಾಜಿಯ ಜೀವನ ಕುರಿತ ವಿವರಣೆಗಳ ಲ್ಲಿರುವ ಬಹುರೂಪತೆಯನ್ನು ವಿವರಿಸುತ್ತದೆ’’ ಎಂದು ಗುರುತಿಸಿಕೊಳ್ಳಲು ಬಯಸದ ಮುಂಬೈಯ ಇತಿಹಾಸ ತಜ್ಞರೊಬ್ಬರು ಹೇಳುತ್ತಾರೆ. ‘‘ಕೆಲವು ಇತಿಹಾಸಕಾರರು ಈ ಪ್ರದೇಶವನ್ನು ಮುಸ್ಲಿಂ ಪ್ರಾಬಲ್ಯದಿಂದ ಬಿಡುಗಡೆಗೊಳಿಸಿದ ಅರಸನೆಂದು ಬಣ್ಣಿಸಿದರೆ, ಇತರರು- ಹೆಚ್ಚಾಗಿ ಬ್ರಾಹ್ಮಣ ಇತಿಹಾಸಕಾರರು, ಆತನ ಮೇಲಿತ್ತೆನ್ನಲಾದ ದಾದಾಜಿ ಕೊಂಡದೇವ್ ಸಹಿತ ಬ್ರಾಹ್ಮಣರ ಪ್ರಭಾವಕ್ಕೆ ಒತ್ತುನೀಡುತ್ತಾರೆಂಬುದನ್ನು ಲೆಯ್ನಾ ಅವರು ಈ ಪುಸ್ತಕದಲ್ಲಿ ವಿವರಿಸುತ್ತಾರೆ’’ ಎಂದು ಅವರು ಹೇಳುತ್ತಾರೆ.ಆದರೆ, ಲೆಯ್ನ ಅವರ ಪುಸ್ತಕ ವಿವಾದಕ್ಕೆ ಒಳಗಾದುದು ಕೇವಲ ಒಂದೇ ಒಂದು ವಾಕ್ಯಕ್ಕಾಗಿ. ಅದರಲ್ಲಿ ಅವರು, ಶಿವಾಜಿ ಜೈವಿಕ ತಂದೆ ಶಹಾಜಿ ಆಗಿರದೆ, ದಾದಾಜಿ ಕೊಂಡದೇವ್ ಎಂದು ಮಹಾರಾಷ್ಟ್ರೀಯರು ತಮಾಷೆ ಮಾಡುತ್ತಾರೆಂದು ಬರೆದಿದ್ದರು.ಲೆಯ್ನ ಅವರ ಪುಸ್ತಕ ಬಿಡುಗಡೆಯಾದಾಗ ಅದನ್ನು ವಿರೋಧಿಸಿದವರಲ್ಲಿ ಪುರಂದರೆಯವರೂ ಒಬ್ಬರಾಗಿದ್ದು, ಅದನ್ನು ಹಿಂದೆಗೆದುಕೊಳ್ಳಬೇಕೆಂದು ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ಗೆ ಪತ್ರ ಬರೆದ ಕೆಲವರಲ್ಲಿ ಅವರೂ ಸೇರಿದ್ದರು. ಈಗ ಸಂಬಾಜಿ ಬ್ರಿಗೇಡ್‌ನವರು ಅದನ್ನು ಪುರಂದರೆಯವರು ಬರೆದಿದ್ದಾರೆಂದು ಹೇಳುತ್ತಿದ್ದಾರೆ.‘‘ರಾಜಾ ಶಿವಛತ್ರಪತಿಯಲ್ಲಿ ಪುರಂದರೆಯವರು ಶಿವಾಜಿ ತಾಯಿ ಜೀಜಾಬಾಯಿ ನಡುವೆ ಸಂಬಂಧವಿತ್ತೆಂಬ ಅರ್ಥ ಬರುವಂತೆ ಚಿತ್ರಿಸಿದ್ದಾರೆ. ಶಿವಾಜಿಯ ತಂದೆ ಶಹಾಜಿ ಹಾಜರಿಲ್ಲದ ತಂದೆ ಮತ್ತು ದಾದಾಜಿ ಕೊಂಡದೇವ್ ಶಿವಾಜಿಯ ಜೈವಿಕ ತಂದೆ ಎಂಬಂತೆ ಬಣ್ಣಿಸಿದ್ದಾರೆ. ಅಲ್ಲದೇ, ಶಿವಾಜಿಯ ಮೇಲೆ ಶಹಾಜಿಯ ಪ್ರಭಾವಕ್ಕಿಂತ ದಾದಾಜಿ ಕೊಂಡದೇವ್ ಪ್ರಭಾವ ಹೆಚ್ಚಿತ್ತೆಂದು ಹೇಳಿದ್ದಾರೆ’’ ಎಂದು ಸಂಬಾಜಿ ಬ್ರಿಗೇಡ್‌ನ ಅಧ್ಯಕ್ಷ ವಿಶಾಲ್ ಪಸಾಲ್ಕರ್ ಹೇಳುತ್ತಾರೆ.ತನ್ನ ಸ್ವಂತ ಪುಸ್ತಕಕ್ಕೆ ಪುರಂದರೆ ಅವರ ಪುಸ್ತಕ ‘ಕಚ್ಚಾವಸ್ತು’ ಆಗಿತ್ತು ಎಂದು ಲೆಯ್ನಾ ಅವರು ಹೇಳಿದ್ದು, ಇದೆಲ್ಲಾ ವಿಷಯವನ್ನು ಬೆಳಕಿಗೆ ತಂದದ್ದಕ್ಕೆ ನಾವು ಜೇಮ್ಸ್ ಲೆಯ್ನ್‌ರನ್ನು ಅಭಿನಂದಿಸಬೇಕು ಎಂದಿರುವ ಪಸಾಲ್ಕರ್, ಇದಕ್ಕಿಂದ ಮೊದಲು ತಾವು ಪುರಂದರೆಯವರ ಪುಸ್ತಕವನ್ನು ಈ ದೃಷ್ಟಿಕೋನದಿಂದ ಓದಿರಲಿಲ್ಲ ಎಂದಿದ್ದಾರೆ.ಪುರಂದರೆಯವರ ಇತರ ವಿರೋಧಿಗಳು ತಮ್ಮ ಆರೋಪದಲ್ಲಿ ಅಷ್ಟೊಂದು ನಿಖರವಾಗಿಲ್ಲವಾದರೂ, ಅವರು ಶಿವಾಜಿಯ ಜೀವನವನ್ನು ತಿರುಚಿದ್ದಾರೆಂಬ ಬಗ್ಗೆ ಒಮ್ಮತಹೊಂದಿದ್ದಾರೆ.
‘‘ಅವರು ಶಿವಾಜಿಯ ತಾಯಿಯನ್ನು ರಾಜಕೀಯವಾಗಿ ಸರಿಯಲ್ಲದ ರೀತಿಯಲ್ಲಿ ಚಿತ್ರಿಸಿದ್ದಾರೆ’’ ಎನ್ನುತ್ತಾರೆ ಮುಂಬೈಯ ರಾಜಕೀಯ ವಿಶ್ಲೇಷಕ ಸುರೇಂದ್ರ ರೊಂಡಾಲೆ. ‘‘ಅವರು ಇತಿಹಾಸಕಾರ ಕೂಡಾ ಆಗಿರಲಿಲ್ಲ. ಅವರು ಮಾಡಿರುವು ದಾದರೂ ಏನೆಂದರೆ ಒಂದು ಜನಪ್ರಿಯ ನಾಟಕವನ್ನು ಬರೆದಿರುವುದು. ಅವರಂತಹವರಿಗೆ ಈ ಪ್ರಶಸ್ತಿಯನ್ನು ನೀಡಿದರೆ, ಮುಂದಿನ ಪೀಳಿಗೆಯವರು ಅವರು ಬರೆದಿರುವುದನ್ನು ನೈಜ ಇತಿಹಾಸ ಎಂದು ತಿಳಿದುಕೊಳ್ಳುತ್ತಾರೆ’’ ಎಂಬ ಅಭಿಪ್ರಾಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ರಾಧಾಕೃಷ್ಣ ವಿಕೆ-ಪಾಟೀಲ್ ಅವರದ್ದು. ಇದೆಲ್ಲ ಜಾತಿಯ ಪ್ರಶ್ನೆಪುರಂದರೆಯವರು ನಿಜವಾಗಿಯೂ ಇದೆಲ್ಲವನ್ನು ಬರೆದಿದ್ದಾರೆಯೇ? ಅವರ ಬೆಂಬಲಿಗರು ಈ ಆರೋಪಗಳನ್ನು ಖಂಡತುಂಡವಾಗಿ ನಿರಾಕರಿಸುತ್ತಾರೆ.ಅವರು ಅಂತದ್ದೇನನ್ನೂ ಬರೆದಿಲ್ಲ ಎನ್ನುವ ಪುಣೆಯ ಇತಿಹಾಸಕಾರ ಪಾಂಡುರಂಗ ಬಲ್ಕವಾಡೆ, ‘‘ಪುರಂದರೆಯವರು ಪರ್ಷಿಯನ್ ಭಾಷೆ ಮತ್ತು ಮೋಡಿ ಬರಹವನ್ನು ಕಲಿತಿದ್ದುದರಿಂದ ಪುಸ್ತಕ ಬರೆಯುವ ಮೊದಲು ಶಿವಾಜಿಗೆ ಸಂಬಂಧಿಸಿದ ಸಾವಿರಾರು ದಾಖಲೆಗಳನ್ನು ಓದಿದ್ದರು’’ ಎನ್ನುತ್ತಾರೆ. ‘‘ಅವರನ್ನು ವಿರೋಧಿಸುವವರು ಯಾರೂ ಇತಿಹಾಸಕಾರರಲ್ಲ. ಅವರು ವಿನಯಶೀಲರಾಗಿದ್ದು, ತನ್ನನ್ನು ಲಾವಣಿಕಾರ ಎಂದು ಕರೆದುಕೊಳ್ಳುತ್ತಾರೆ. ಅಷ್ಟು ಮಾತ್ರಕ್ಕೆ ಅವರು ಇತಿಹಾಸಕಾರರಲ್ಲವೆಂದು ಅರ್ಥವಲ್ಲ. ಅವರು ಯಾರ ಕುರಿತೂ ಪಕ್ಷಪಾತ ತೋರಿಲ್ಲ ಮತ್ತು ಯಾವುದೇ ಜಾತಿ ಅಥವಾ ಸಮುದಾಯವನ್ನು ನಿಂದಿಸಿಲ್ಲ’’ ಎಂಬುದು ಬಲ್ಕವಾಡೆ ಅವರ ಅಭಿಪ್ರಾಯ.
ಪುರಂದರೆಯವರ ಮೇಲಿನ ಮತ್ತೆಲ್ಲ ಆರೋಪಗಳ ಹಿಂದಿರುವ ನಿಜವಾದ ವಿಷಯವೆಂದರೆ ಕೋಮುವಾದಿ ಮತ್ತು ಜಾತಿ ರಾಜಕೀಯ ಎನ್ನುತ್ತಾರೆ ಬಲ್ಕವಾಡೆ ಮತ್ತು ಕೆಲವು ಇತಿಹಾಸಕಾರರು. ಪುರಂದರೆ ಅವರನ್ನು ಗೌರವಿಸಬಯಸುವ ಬಿಜೆಪಿ ನೇತೃತ್ವದ ಸರಕಾರ ಬ್ರಾಹ್ಮಣ ಮುಖ್ಯಮಂತ್ರಿಯ ನಾಯಕತ್ವ ಹೊಂದಿದೆ ಮತ್ತು ಅದನ್ನು ಬೆಂಬಲಿಸುತ್ತಿರುವ ಶಿವಸೇನೆಯು ಉತ್ಸಾಹಿ ಹಿಂದುತ್ವ ಬೆಂಬಲಿಗ ಪಕ್ಷ. ‘‘ಪುರಂದರೆಯವರ ಕೃತಿಯಲ್ಲಿ ಶಿವಾಜಿಗೆ ಖಂಡಿತವಾಗಿಯೂ ಒಂದು ದೈವಿಕ ಛಾಯೆಯನ್ನು ಕೊಡಲಾಗಿದೆ. ಅವರು ಮಕ್ಕಳಿಗಾಗಿ ಶಿವಾಜಿ ಕುರಿತು ಬರೆದಿರುವ ಒಂದು ಕೃತಿಯಲ್ಲಿ ಆತನನ್ನು ವಿಷ್ಣುವಿನ ಹಲವು ಅವತಾರಗಳು ಎಂಬಂತೆ ಬಣ್ಣಿಸಲಾಗಿದೆ ಕೂಡಾ’’ ಎಂದು ಮುಂಬೈಯ ಇತಿಹಾಸಕಾರ ಹೇಳುತ್ತಾರೆ.‘‘ಹೆಚ್ಚಿನ ಇತಿಹಾಸಕಾರರು ಶಿವಾಜಿಯನ್ನು ಜನಸಾಮಾನ್ಯರ ರಾಜ ಎಂದು ಬಣ್ಣಿಸುತ್ತಾರಾದರೂ, ಪುರಂದರೆಯವರ ಶಿವಾಜಿ- ಬ್ರಾಹ್ಮಣ ಸಂಪ್ರದಾಯಗಳ ರಕ್ಷಕ’’ ಎಂದು ರೊಂಡಾಲೆ ವ್ಯಾಖ್ಯಾನಿಸುತ್ತಾರೆ.ಸಂಬಾಜಿ ಬ್ರಿಗೇಡ್ ಮರಾಠಾ-ಕುಣುಬಿ ಜನಾಂಗದವರ ಸಂಘಟನೆಯಾಗಿದ್ದು, ಹೆಚ್ಚು ಜಾತ್ಯತೀತವಾಗಿ ಹಿಂದುತ್ವ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡಿರುವ ಎನ್‌ಸಿಪಿಯು ಬಹುತೇಕ ಮರಾಠರಿಂದ ಕೂಡಿರುವ ಪಕ್ಷ.ಪ್ರಸ್ತುತ ವಿವಾದದ ಹಿಂದಿರುವ ಲೆಕ್ಕಾಚಾರವನ್ನು ಸಂಬಾಜಿ ಬ್ರಿಗೇಡ್‌ನ ನಾಯಕ ವಿವರಿಸುತ್ತಾರೆ. ‘‘ಪುರಂದರೆಯವರು ಶಿವಾಜಿಯನ್ನು ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿಸುತ್ತಾರೆ. ಅದು ನಿಜವಲ್ಲ. ಯಾಕೆಂದರೆ ಆತನ ಸೇನೆಯಲ್ಲಿ 35 ಶೇಕಡಾ ಮಂದಿ ಮುಸ್ಲಿಮರಾಗಿದ್ದರು. ಆತ ಕೇವಲ ಮೊಗಲರ ವಿರೋಧಿಯಾಗಿದ್ದ. ಅದು ಬೇರೆಯೇ ವಿಷಯ. ಶಿವಸೇನೆ ಈಗ ಮಾತನಾಡುತ್ತಿಲ್ಲ. ಯಾಕೆಂದರೆ, ಅದು ಮುಸ್ಲಿಂ ವಿರೋಧಿ. ಬಿಜೆಪಿ ಪುರಂದರೆಯವರನ್ನು ಗೌರವಿಸಲು ಬಯಸಿದ್ದು ಯಾಕೆಂದರೆ, ಅವರು ಆರೆಸ್ಸೆಸ್‌ನವರು’’ ಎಂದು ಪಸಾಲ್ಕರ್ ವಿವರಿಸುತ್ತಾರೆ.
-VB news online
Please follow and like us:
error