ಇಂದಿನಿಂದ ವೃತ್ತಿ ನಿರತ ಆಯುಷ್ ವೈದ್ಯರ ಅನಿರ್ಧಿಷ್ಟಾವಧಿ ಮುಷ್ಕರ

ಕೊಪ್ಪಳ,ಜು.೧೯: ರಾಜ್ಯದ ವೃತ್ತಿನಿರತ ಆಯುಷ್ ವೈದ್ಯರ ಒಂದಂಶದ ಬೇಡಿಕೆ ವೃತ್ತಿ ನಿರತ ಆಯುಷ್ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಆಲೋಪತಿ ಔಷಧಿಗಳನ್ನು ಬಳಸಲು ಅನುಮತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ದಿ.೨೦ ಅನಿರ್ಧಿಷ್ಟಾವಧಿ ಮುಷ್ಕರ್ ಹಮ್ಮಿಕೊಳ್ಳಲಾಗಿದೆ ಎಂದು ಆಯುಷ್ ಪೆಡರೆಷನ್ ಆಫ್ ಇಂಡಿಯಾದ ಜಿಲ್ಲಾ ಘಟಕ ಕೊಪ್ಪಳದ ಅಧ್ಯಕ್ಷ ಡಾ.ಶ್ರೀನಿವಾಸ ಹ್ಯಾಟಿ, ಕಾರ್ಯದರ್ಶಿ ಡಾ.ಸಿ.ಎಸ್.ಕರಮುಡಿ ತಿಳಿಸಿದ್ದಾರೆ. 
ಇಂದು ದಿ.೨೦ ರಂದು ಬೆಳಗೆ ೯ ಕ್ಕೆ ನಗರದ ಗವಿಮಠದಿಂದ ಗಡಿಯಾರ ಕಂಬ ಅಶೋಕ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಜಿಲ್ಲಾ ಆಡಳಿತ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು.

Related posts

Leave a Comment