You are here
Home > Koppal News > ಪ್ರಾಣಿ ದಯಾ ಸಂಘದ ವಿರುದ್ಧ ಕ್ರಮಕ್ಕೆ ಪ್ರಗತಿಪರರ ಆಗ್ರಹ: ಜನಾಂದೋಲನ ಸಮಿತಿಯಿಂದ ಧರಣಿ-ಡಿಜಿಗೆ ಮನವಿ ಸಲ್ಲಿಕೆ

ಪ್ರಾಣಿ ದಯಾ ಸಂಘದ ವಿರುದ್ಧ ಕ್ರಮಕ್ಕೆ ಪ್ರಗತಿಪರರ ಆಗ್ರಹ: ಜನಾಂದೋಲನ ಸಮಿತಿಯಿಂದ ಧರಣಿ-ಡಿಜಿಗೆ ಮನವಿ ಸಲ್ಲಿಕೆ

ಬೆಂಗಳೂರು, ನ.5: ನೆಲಮಂಗಲದ ಬಳಿ ಜಾನುವಾರು ಸಾಗಿಸುತ್ತಿದ್ದ ದಲಿತ ವ್ಯಕ್ತಿಯನ್ನು ಹೊಡೆದು ಕೊಂದ ಸಂಘಟನೆಯ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಸಂಘಟನೆಯ ಮುಖ್ಯಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಶನಿವಾರ ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಿರೋಧಿ ಜನಾಂದೋಲನ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ ಟನೆಗಳ ಮುಖಂಡರು ಧರಣಿ ನಡೆಸಿ, ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿ ನಿಂದ ಜಾನುವಾರುಗಳನ್ನು ಕ್ಯಾಂಟರ್ ವಾಹನದಲ್ಲಿ ಸಾಗಿಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಾಣಿ ದಯಾ ಸಂಘಕ್ಕೆ ಸೇರಿದವರೆನ್ನಲಾದ ಕಾರ್ಯಕರ್ತರು, ದಲಿತ ಜನಾಂಗಕ್ಕೆ ಸೇರಿದ ಕೃಷ್ಣಪ್ಪ ಎಂಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಫ್ಲೈ ಓವರ್‌ನಿಂದ ಕೆಳಕ್ಕೆ ತಳ್ಳಿ ಭೀಕರವಾಗಿ ಕೊಲೆ ಮಾಡಿರುವು ದನ್ನು ಸಂಘಟನೆ ತೀವ್ರವಾಗಿ ಖಂಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ಪ್ರಾಣಿ ದಯಾ ಸಂಘಟನೆಯ ಮುಖ್ಯಸ್ಥ ರೆನ್ನಲಾಗಿರುವ ದಯಾನಂದ ಸ್ವಾಮೀಜಿ ಯವರನ್ನು ಈ ಪ್ರಕರಣದಲ್ಲಿ ಆರೋಪಿ ಯನ್ನಾಗಿ ಸೇರಿಸಿ, ಸಂಘಟನೆಯ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಈಗಾಗಲೇ ಕುಖ್ಯಾತ ವಾಗಿರುವ ಹಾಜಬ್ಬ ಮತ್ತು ಹಸನಬ್ಬರ ಬೆತ್ತಲೆ ಪ್ರಕರಣಗಳು ನಡೆದರೂ ಪೊಲೀಸ್ ಇಲಾಖೆ ಕಾನೂನು ಕೈಗೆತ್ತಿಕೊಳ್ಳು ವವರ ಮೇಲೆ ಯಾವುದೇ ರೀತಿಯ ನಿಗಾ ಇಟ್ಟಿಲ್ಲ ಎಂದು ಆರೋಪಿಸಿದರು.
ಕರಾವಳಿಯಲ್ಲಿ ಹಲವು ಬಾರಿ ಜಾನುವಾರು ಸಾಗಾಟ ಮತ್ತು ವ್ಯಾಪಾರದ ಪ್ರಕರಣಗಳಲ್ಲಿ ಪೊಲೀಸ್ ಇಲಾ ಖೆಯ ಈ ರೀತಿಯ ವರ್ತನೆಯಿಂದಲೇ ಬ್ರಹ್ಮಾವರ ಸಮೀಪದ ಪಾಟಾಳಿ ಕೃಷ್ಣಯ್ಯ ಮತ್ತು ಕುಂದಾಪುರ ಸಮೀ ಪದ ಆರ್ಡಿಯಲ್ಲಿ ದಯಾನಂದ ಶೆಟ್ಟಿ ಎಂಬವರು ಸಂಘಪರಿವಾರಕ್ಕೆ ಸೇರಿದ ವ್ಯಕ್ತಿಗಳಿಂದ ಹಲ್ಲೆಗೀಡಾಗಿ, ಮಾರಣಾಂತಿಕ ಪೆಟ್ಟುಗಳಿಂದ ಆಸ್ಪತ್ರೆಯಲ್ಲಿ ಕೊನೆ ಯುಸಿರೆಳೆದಿರುವುದನ್ನು ಅಶೋಕ್ ಸ್ಮರಿಸಿಕೊಂಡರು.
ಮುಂದಿನ ಸೋಮವಾರ ಬಕ್ರೀದ್ ಹಬ್ಬವಿದ್ದು, ಅದರ ಪೂರ್ವದಲ್ಲಿ ಜಾನು ವಾರು ಮಾರಾಟ ಮತ್ತು ಸಾಗಾಟ ಮಾಡುವ ವ್ಯವಹಾರಗಳು ಹೆಚ್ಚು ನಡೆಯುತ್ತಿದ್ದು, ಇದರಲ್ಲಿ ಹೆಚ್ಚಾಗಿ ದಲಿತ ಮತ್ತು ಮುಸ್ಲಿಂ ಜನಾಂಗದವರೇ ತೊಡಗಿಸಿಕೊಂಡಿದ್ದಾರೆ. ಇವರ ವಾಹನಗಳನ್ನು ತಡೆಯುವ ಮತ್ತು ಅವರ ಮೇಲೆ ಹಲ್ಲೆ ನಡೆಯುವ ಹಾಗೂ ಅವರಲ್ಲಿರುವ ವಸ್ತುಗಳನ್ನು ದರೋಡೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದ ಹಲವು ಕಡೆ ಈ ರೀತಿಯ ಘಟನೆಗಳು ವರದಿಯಾಗಿವೆ ಎಂದರು.
ಧರಣಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಸಮತಾ ಸೈನಿಕ ದಳ, ದಸಂಸ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡ ರಾದ ಕೆ.ಎಲ್.ಅಶೋಕ್, ಎಂ.ವೆಂಕಟ ಸ್ವಾಮಿ, ಸರ್ದಾರ್ ಅಹ್ಮದ್ ಖುರೇಶಿ, ಮಾವಳ್ಳಿ ಶಂಕರ್, ಆನಂದ್ ಎಐಸಿಸಿ, ಇಲ್ಯಾಸ್ ಅಹ್ಮದ್, ಎನ್.ವೆಂಕಟೇಶ್, ರೆ.ಫಾ.ಮನೋಹರಚಂದ್ರ ಪ್ರಸಾದ್, ಗಂಗಣ್ಣ, ಸೈಯದ್ ಶಫಿವುಲ್ಲಾ ಸಾಹೇಬ್, ಶಿವಸುಂದರ್, ಕುಮಾರ್ ಸಮತಳ, ದೀಪು, ಸೆಬಾಸ್ಟಿಯನ್, ಪಾರ್ವತೀಶ, ಪ್ರೊ.ನಗರಿಬಾಬಯ್ಯ, ಕೆ.ಎನ್.ಭಗ ವಾನ್, ಕೆ.ಜೆ.ಮನ್ಸೂರ್ ಖುರೇಶಿ, ಅಣ್ಣಯ್ಯ, ಹೈದರ್‌ಬೇಗ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.
ಪ್ರಮುಖ ಬೇಡಿಕೆಗಳು…
ನೆಲ ಮಂಗಲದಲ್ಲಿ ಕೊಲೆಗೀಡಾದ ದಲಿತ ಕೃಷ್ಣಪ್ಪನವರ ಕುಟುಂಬಕ್ಕೆ ಸರಕಾರ 10 ಲಕ್ಷ ರೂ.ಪರಿಹಾರ ಒದಗಿಸಬೇಕು ಮತ್ತು ಅವರ ಪತ್ನಿ, ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಬೇಕು.
ಜಾನುವಾರು ವ್ಯಾಪಾರಕ್ಕೆ ಮತ್ತು ಸಾಗಾಟಕ್ಕೆ ಸರಿಯಾದ ರಕ್ಷಣೆ ಒದಗಿಸಬೇಕು. ಈ ವಿಚಾರ ದಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಅಚ್ಯುತರಾವ್‌ರಿಂದ ಸೂಕ್ತ ಕ್ರಮದ ಭರವಸೆ
ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಿರೋಧಿ ಜನಾಂದೋಲನ ಸಮಿತಿ ನಾಯಕರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದು, ಅವರು ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದ್ದು, ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು. ಜೊತೆಗೆ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಸೂಕ್ತ ರಕ್ಷಣೆ ಕೂಡಾ ನೀಡಲಾಗುವುದು ಎಂದು ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ

Leave a Reply

Top