ಭಾಗ್ಯನಗರ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ :

ಕೊಪ್ಪಳ ೦೫ :   ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ೪ ಮತ್ತು ೫ನೇ ತರಗತಿಯ ಮಕ್ಕಳು ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಹಿಂದಿನ ದಿನ ಶಿಕ್ಷಕರಿಗಾಗಿ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಅವರಿಗೆ ವಿವಿಧ ರೀತಿಯ ಆಟಗಳನ್ನು ನಡೆಸಿದರು.  ಕಾರ್ಯಕ್ರಮದ ವಿಶೇಷತೆಯೆಂದರೆ ಎಲ್ಲಾ ಶಿಕ್ಷಕ/ಶಿಕ್ಷಿಯರು ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದ್ದರು.  ೫ನೇತರಗತಿಯ ವಿದ್ಯಾರ್ಥಿಗಳು ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪೂಜೆ ಮಾಡಿ. ನಂತರ ಮುಖೋಪಾಧ್ಯಾಯನಿಯಾದ ಜೋತಿ ಎಸ್.ಎಸ್. ಕೇಕ್ ಕಟ್ಟುಮಾಡಿದರು 
ಶಿಕ್ಷಕರನ್ನು ಚಟುವಟಿಕೆಗಳಿಂದ ಮನರಂಜಿಸುವುದರ ಜೊತೆಗೆ ನಿರೊಪಣೆ ಮಾಡುವುದರಿಂದ ಹಿಡಿದು ಸ್ವಾಗತ, ಪುಷ್ಪಾರ್ಪಣೆ ಮತ್ತು ವಂದನಾರ್ಪಣೆಯನ್ನೂ ಸಹಿತ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಆಚರಿಸಿದರು.  ಈ ಕಾರ್ಯಕ್ರಮಕ್ಕೆ ವಿಶೇಷ ಪ್ರೇಕ್ಷಕ ಅತಿಥಿಗಳಾಗಿ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ. ಕೆ. ರವರು ಭಾಗವಹಿಸಿದ್ದರು. ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾದ  

ರಾಜಶೇಖರ ಪಾಟೀಲ್ ರವರು ಅತಿಥಿಗಳಾಗಿ ಆಗಮಿಸಿ, ಶಾಲಾ ಎಲ್ಲಾ ತರಗತಿಯ ಮಕ್ಕಳು ಸಹಿತ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಹೇಳಿದರು.  ನಂತರ ಶಾಲಾ ಶಿಕ್ಷಕ ಶಿಕ್ಷಕಿಯರು ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ಚರಿತ್ರೆ ಹಾಗೂ ಅವರ ಆರ್ದಶಗಳನ್ನು ಮಕ್ಕಳಿಗೆ ತಿಳಿಸಿದರು.  ಕಾರ್ಯಕ್ರಮದಲ್ಲಿ ದಾನಪ್ಪ ಜಿ. ಕೆ. & ಮುಖೋಪಾಧ್ಯಾಯನಿ ವಿದ್ಯಾರ್ಥಿಯಾದ ಕು|| ಸಾಗರ ಹೆಚ್. ಇವರಿಂದ ಶಿಕ್ಷಕ/ಶಿಕ್ಷಕಿಯರಿಗೆ ಬಹುಮಾನ ವಿತರಿಸಿದರು.  ಅನುಷಾ ದಲಬಂಜನ್ ನಿರೂಪಿಸಿದರು, ರಾಜು ಡಬ್ಬಿನ್ ಸ್ವಾಗತಿಸಿದರು, ವಂದನಾರ್ಪಣೆಯನ್ನು ಐಶ್ವರ್ಯಾ ಕಲ್ಬುರ್ಗಿ ನಡೆಸಿಕೊಟ್ಟಳು.

Please follow and like us:
error