You are here
Home > Koppal News > ಅನಧಿಕೃತ ಡಾಬಾ ತೆರವುಗೊಳಿಸಲು ಸಿಇಓ ೨ ದಿನಗಳ ಗಡುವು

ಅನಧಿಕೃತ ಡಾಬಾ ತೆರವುಗೊಳಿಸಲು ಸಿಇಓ ೨ ದಿನಗಳ ಗಡುವು

 ಜಿಲ್ಲೆಯಾದ್ಯಂತ ಇರುವ ಅನಧಿಕೃತ ಡಾಬಾಗಳು, ಹೋಟೆಲ್, ರೆಸ್ಟೋರೆಂಟ್, ಹೋಟೆಲ್, ಇನ್ನಿತರೆ ತಾತ್ಕಾಲಿಕ ಹೋಟೆಲ್‌ಗಳನ್ನು ಎರಡು ದಿನಗಳ ಒಳಗಾಗಿ ತೆರವುಗೊಳಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಸೂಚನೆ ನೀಡಿದ್ದಾರೆ.
  ಜಿಲ್ಲೆಯಲ್ಲಿ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಡಾಬಾ, ರೇಸ್ಟೋರೆಂಟ್, ಹೋಟಲ್ಸ್ ಹಾಗೂ ಇನ್ನಿತರ ತಾತ್ಕಾಲಿಕ ಹೋಟಲ್‌ಗಳು ಯೆಥೇಚವಾಗಿ ಬೆಳೆಯುತ್ತಿದ್ದು ಇವುಗಳಲ್ಲಿ ಅಕ್ರಮವಾಗಿ ಮದ್ಯಪಾನ ಪೂರೈಕೆ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.  ಆದ್ದರಿಂದ ಇಂತಹ ಅನಧಿಕೃತ  ಡಾಬಾಗಳು, ಹೋಟೆಲ್, ರೆಸ್ಟೋರೆಂಟ್, ಹೋಟೆಲ್, ಇನ್ನಿತರೆ ತಾತ್ಕಾಲಿಕ ಹೋಟೆಲ್‌ಗಳನ್ನು ಏ. ೨೬ ರ ಒಳಗಾಗಿ ತೆರವುಗೊಳಿಸಬೇಕು.  ಇಲ್ಲದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ.ರವಿ ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply

Top