ಕೊಪ್ಪಳ ಜಿಲ್ಲಾ ಪ.ಜಾ. ವಿಭಾಗದ ಕಾಂಗ್ರೇಸ ಸಭೆ ಯಶಸ್ವಿ

ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿಯ ಪರಿಶಿಷಠ ಜಾತಿ ವಿಭಾಗದ ಕೊಪ್ಪಳ ಜಿಲ್ಲಾ ಅದ್ಯಕ್ಷರಾದ  ಗಾಳೆಪ್ಪ ಹೆಚ್ ಪೂಜಾರ ಇವರ ನೇತೃತ್ವದಲ್ಲಿ  ಕಾಂಗ್ರೇಸ್ ಪಕ್ಷದ ಜಿಲ್ಲಾ ಕಛೇರಿಯಲ್ಲಿ  ದಿನಾಂಕ: ೧೫ರಂದು ಜಿಲ್ಲಾ ಕಮೀಟಿ ಪದಾಧಿಕಾರಿಗಳು ಹಾಗೂ ಎಲ್ಲಾ ಬ್ಲಾಕ್ ಕಮೀಟಿ ಪದಾಧಿಕಾರಿಗಳ ಸಭೆಯನ್ನು ಕರೆಯಲಾಯಿತು. ಸಭೆಯಲ್ಲಿ  ಚರ್ಚಿಸಿದ ವಿಷಯಗಳ ಅನ್ವಯದಂತೆ ಇದೇ ಪ್ರಪ್ರಥಮ ಬಾರಿಗೆ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಪರಿಶಿಷ್ಠ ಜಾತಿಯ ’ಸ್ವಾಭಿಮಾನಿ ಸಮಾವೇಶ’ವನ್ನು ಫೆಬ್ರುವರಿ ೨೩ರಂದು ನಡೆಸಲು ತಿರ್ಮಾನಿಸಲಾಯಿತು. ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಬ್ಲಾಕ್ ಕಮೀಟಿಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಮನವೊಲಿಸಿ ಕರೆತರಬೇಕೆಂದು ತಿರ್ಮಾನಿಸಲಾಯಿತು. ಈ ಸಭೆಯಲ್ಲಿ ಸಭೆಯ ಅದ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಹೆಚ್ ಪೂಜಾರ ವಹಿಸಿದ್ದರು  ಹಿರಿಯ ಮುಖಂಡರಾದ ಮರಿಯಪ್ಪ ಯತ್ನಟ್ಟಿ, ಮರಿಯಪ್ಪ ದದೇಗಲ್ಲ, ಹನುಮಂತಪ್ಪ ಸಿಂದೋಗಿ, ಹನುಮಂತಪ್ಪ ಮ್ಯಾಗಳಮನಿ, ಪ್ರಕಾಶ ಪೂಜಾರ, ಫಕೀರಪ್ಪ ಬಗನಾಳ, ದೇವಪ್ಪ ಹಟ್ಟಿ, ರಮೇಶ ಓಜನಹಳ್ಳಿ, ಸಿದ್ದಪ್ಪ ಲಂಕಿ, ಮುತ್ತುರಾಜ ಬೆಲ್ಲದ, ಪ್ರಕಾಶ  ಚೆನ್ನದಾಸರ, ಕೆ.ತಿಮ್ಮಣ್ಣ ಗಂಗಾವತಿ, ಸಿ.ತಿಪ್ಪಣ್ಣ, ದುರುಗಪ್ಪ ಹಲವಾಗಲಿ, ಬಸವರಾಜ ಬೆವಿನಕಟ್ಟಿ, ಮಾಂತೇಶ ಬೂದಿಹಾಳ, ಧನರಾಜ ದೊಡ್ಡಮನಿ, ಹಾಗೂ ಕುಷ್ಟಗಿ, ಗಂಗಾವತಿ, ಕನಕಗಿರಿ, ಯಲಬುರ್ಗಾ, ಕೊಪ್ಪಳ ಬ್ಲಾಕ್ ಕಮೀಟಿಯ ಎಲ್ಲಾ ಪದಾಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರೆಂದು ಯುವ ಕಾಂಗ್ರೆಸ್ ಪಕ್ಷದ  ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೂಜಾರ  ಳಿಸಿದ್ದಾರೆ.

Leave a Reply